ಕರ್ನಾಟಕದಲ್ಲಿ ಶನಿವಾರ ತ್ರಿಶತಕ ಬಾರಿಸಿದ ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ

By Suvarna News  |  First Published Jun 13, 2020, 7:06 PM IST

 ಕರ್ನಾಟಕದಲ್ಲಿ ಶುಕ್ರವಾರ ಡಬಲ್ ಸೆಂಚೂರಿ ಬಾರಿಸಿದ್ದ ಕೊರೋನಾ ಇಂದು (ಶನಿವಾರ) ತ್ರಿಶತಕ ಬಾರಿಸಿದೆ. ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಎಷ್ಟು ಎನ್ನುವ ಮಾಹಿತಿ ಈ ಕೆಳಗಿನಂತಿದೆ. 


ಬೆಂಗಳೂರು, (ಜೂನ್.13): ರಾಜ್ಯದಲ್ಲಿ ಇಂದು (ಶನಿವಾರ) 308 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 6824 ಕ್ಕೆ ಏರಿಕೆಯಾಗಿದೆ.

ಇನ್ನು 3 ಮಂದಿ ಮಹಾಮಾರಿಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.  ಒಟ್ಟು 6,824 ಪ್ರಕರಣಗಳ ಪೈಕಿ 3,648 ಮಂದಿ ಗುಣಮುಖರಾಗಿದ್ದಾರೆ. ಇನ್ನು 3,092 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Latest Videos

undefined

ಕೊರೋನಾ ಚಿಕಿತ್ಸೆಗೆ ಆಯೂರ್ವೇದ ಔಷದ ಬಳಸಲು ಸರ್ಕಾರ ಅಸ್ತು!

ಶನಿವಾರ ಕಂಡು ಬಂದ ಹೊಸ ಪ್ರಕರಣಗಳ ಪೈಕಿ 208 ಮಂದಿ ಅಂತರರಾಜ್ಯ ಪ್ರಯಾಣಿಕರಾಗಿದ್ದರೆ, 25 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿರುತ್ತಾರೆ.

ಯಾವ ಜಿಲ್ಲೆಯಲ್ಲಿಎಷ್ಟು?
ಕಲಬುರಗಿ 67, ಯಾದಗಿರಿ 52, ಬೀದರ್ 42, ಬೆಂಗಳೂರು ನಗರ 31, ದಕ್ಷಿಣಕನ್ನಡ 30, ಧಾರವಾಡ 20, ಉಡುಪಿ 14, ಹಾಸನ 11, ಬಳ್ಳಾರಿ 11, ವಿಜಯಪುರ 6, ರಾಯಚೂರು, ಉತ್ತರಕನ್ನಡ ತಲಾ 5, ಕೋಲಾರ 4, ದಾವಣಗೆರೆ 3, ಮಂಡ್ಯ, ಹಾವೇರಿ ತಲಾ 2, ಮೈಸೂರು, ಬಾಗಲಕೋಟೆ, ರಾಮನಗರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

Covid19 Bulletin: 13th June 2020

Total Confirmed Cases: 6824
Deceased: 81
Recovered: 3648
New Cases: 308

Other information: Telemedicine facility, Corona Watch Application and Helpline details.

For more details- https://t.co/GK1JBhZNzo pic.twitter.com/GjcUVLueZn

— CM of Karnataka (@CMofKarnataka)
click me!