* ಅರ್ಜಿ ಸ್ವೀಕರಿಸಲು ತಂತ್ರಾಂಶ ಅಭಿವೃದ್ಧಿ
* ಅನ್ಯ ಮಾರ್ಗದಲ್ಲಿ ಅರ್ಜಿ ಸಲ್ಲಿಸಬೇಕಿಲ್ಲ
* ಪರಿಹಾರ ಧನ ಚಾಲಕರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾವಣೆ
ಬೆಂಗಳೂರು(ಮೇ.22): ಕೊರೋನಾ ಸೆಮಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಆಟೋ, ಕ್ಯಾಬ್, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಘೋಷಿಸಿರುವ 3 ಸಾವಿರ ರು. ಪರಿಹಾರ ಮೊತ್ತವನ್ನು ಆನ್‌ಲೈನ್ ಮೂಲಕ ಅರ್ಹ ಚಾಲಕರ ಖಾತೆಗೆ ನೇರವಾಗಿ ಪಾವತಿಸಲು ಸರ್ಕಾರ ತೀರ್ಮಾನಿಸಿದೆ.
ಪರವಾನಗಿ ಹೊಂದಿದ ಹಾಗೂ ನೋಂದಣಿ ಮಾಡಿದ ಅರ್ಹ ಚಾಲಕರಿಗೆ ಮಾತ್ರ ಒಂದು ಬಾರಿ ಈ ಪರಿಹಾರ ನೀಡಲಾಗುವುದು. ಈ ಪರಿಹಾರ ಧನ ನೀಡುವ ಸಂಬಂಧ ‘ಸೇವಾಸಿಂಧು’ ವೆಬ್‌ಪೋರ್ಟಲ್ ಮೂಲಕ ಅರ್ಜಿ ಸ್ವೀಕರಿಸಲು ಅಗತ್ಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ತಂತ್ರಾಂಶ ಕಾರ್ಯರೂಪಕ್ಕೆ ಬಂದ ಕೂಡಲೇ ಅರ್ಹ ಚಾಲಕರಿಂದ ಅರ್ಜಿ ಆಹ್ವಾನಿಸಲಾಗುವುದು.
undefined
ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?
ಪರಿಹಾರ ಧನವನ್ನು ಚಾಲಕರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾಯಿಸಲಾಗುವುದು. ಹೀಗಾಗಿ ಆಟೋ ರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರು ಪರಿಹಾರ ಧನ ಕೋರಿ ಅನ್ಯ ಮಾರ್ಗದಲ್ಲಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ತಿಳಿಸಿದ್ದಾರೆ.