ರಾಜ್ಯದ ಹಲವೆಡೆ ಭರ್ಜರಿ ಮಳೆ

By Kannadaprabha NewsFirst Published May 22, 2021, 7:55 AM IST
Highlights

* ಬೆಂಗಳೂರು ಸೇರಿದಂತೆ ಕೋಲಾರ, ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಹಲವೆಡೆ ಮಳೆ 
* ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಲಿಲ್ಲ
* ಕೆಲ ಕಾಲ ಬಿಡುವು ನೀಡಿದ ಮಳೆ ಮತ್ತೆ ಸಂಜೆ ಮಳೆ ಆರಂಭ
 

ಬೆಂಗಳೂರು(ಮೇ.22): ರಾಜಧಾನಿ ಬೆಂಗಳೂರು ಸೇರಿದಂತೆ ಕೋಲಾರ, ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಹಲವೆಡೆ ಮಳೆ ಸುರಿದಿದೆ. ಬೆಂಗಳೂರಿನ ಹಲವೆಡೆ ಮಧ್ಯಾಹ್ನ 1ರ ಸುಮಾರಿಗೆ ಮಳೆ ಸುರಿದಿದೆ.

ಕೆಲ ಕಾಲ ಬಿಡುವು ನೀಡಿದ ಮಳೆ ಮತ್ತೆ ಸಂಜೆ ಮಳೆ ಆರಂಭವಾಯಿತು. ರಾತ್ರಿಯೂ ತುಂತುರು ಮಳೆ ಸುರಿಯಿತು. ಇನ್ನು ಕೋಲಾರ ಜಿಲ್ಲೆಯ ವಿವಿಧಡೆ, ಹುಬ್ಬಳ್ಳಿ- ಧಾರವಾಡ, ಹಾವೇರಿಯಲ್ಲಿ ಸುಮಾರು 2 ಗಂಟೆಗಳ ಕಾಲ ಮಳೆ ಸುರಿಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಲಿಲ್ಲ.

ಈಗ ಪೂರ್ವ ಕರಾವಳಿಗೆ ‘ಯಾಸ್‌’ ಚಂಡಮಾರುತದ ಭೀತಿ!

ಯಾವುದೇ ರೀತಿಯಲ್ಲಿ ಜನಜೀವನಕ್ಕೆ ತೊಂದರೆ ಆಗಲಿಲ್ಲ. ಮಧ್ಯಾಹ್ನ 4 ಗಂಟೆಗೆ ಆರಂಭವಾದ ಮಳೆ 6.30 ರ ವರೆಗೂ ಮುಂದುವರಿದಿತ್ತು. ಬಳಿಕವೂ ಜಿಟಿ ಜಿಟಿ ಮಳೆ ಇತ್ತು. ಹುಬ್ಬಳ್ಳಿ, ಧಾರವಾಡ ಮಾತ್ರವಲ್ಲದೇ ಕಲಘಟಗಿ, ಕುಂದಗೋಳದಲ್ಲೂ ಮಳೆ ಉತ್ತಮವಾಗಿಯೇ ಇತ್ತು.
 

click me!