ಹುಲಿ ಉಗುರು ಮತ್ತಿತ್ತರ ಅಂಗ ವಾಪಸ್‌ಗೆ 3 ತಿಂಗಳು ಅವಕಾಶ?: ಸಚಿವ ಈಶ್ವರ ಖಂಡ್ರೆ

Published : Dec 21, 2023, 07:23 AM IST
ಹುಲಿ ಉಗುರು ಮತ್ತಿತ್ತರ ಅಂಗ ವಾಪಸ್‌ಗೆ 3 ತಿಂಗಳು ಅವಕಾಶ?: ಸಚಿವ ಈಶ್ವರ ಖಂಡ್ರೆ

ಸಾರಾಂಶ

ಸಾರ್ವಜನಿಕರು ತಮ್ಮ ಬಳಿ ಹೊಂದಿರುವ ಹುಲಿ ಉಗುರು, ಆನೆ ದಂತ ಮುಂತಾದ ವನ್ಯ ಜೀವಿಗಳ ಅಂಗಾಂಗಳನ್ನು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವಾಪಸು ನೀಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರು (ಡಿ.21): ಸಾರ್ವಜನಿಕರು ತಮ್ಮ ಬಳಿ ಹೊಂದಿರುವ ಹುಲಿ ಉಗುರು, ಆನೆ ದಂತ ಮುಂತಾದ ವನ್ಯ ಜೀವಿಗಳ ಅಂಗಾಂಗಳನ್ನು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವಾಪಸು ನೀಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಜನರು ಗೊತ್ತಿದ್ದೋ ಅಥವಾ ಅರಿವಿಲ್ಲದೇ ಹೊಂದಿರುವ ಅಂಗಾಂಗಳನ್ನು ಸರ್ಕಾರದ ಮೂಲಕ ವಾಪಸ್‌ ಪಡೆದು ನಾಶಪಡಿಸಲಾಗುವುದು. ಮೈಸೂರಿನ ಅರಣ್ಯ ಸಂಗ್ರಹಾಲಯದಲ್ಲಿ ಇರುವ ವನ್ಯ ಜೀವಿಗಳ ಅಂಗಾಂಗಳನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಾಶಪಡಿಸಲು ಚಿಂತನೆ ನಡೆಸಲಾಗಿದೆ ಎಂದರು.

ಲಂಚ ಕೇಸ್: ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಸಂತ್ರಸ್ತರಿಗೆ ಜಮೀನು: ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ವೇಳೆ ಭೂಮಿ ನೀಡಿದ ಕುಟುಂಬಗಳಿಗೆ ಅರಣ್ಯ ಜಮೀನು ನೀಡಲಾಗಿದೆ. ಈ ವಿಷಯ ಹೈಕೋರ್ಟ್‌ನಲ್ಲಿದೆ. ಆದರೆ ಅರಣ್ಯ ಜಮೀನು ನೀಡುವ ವಿಷಯದಲ್ಲಿ ಸರ್ಕಾರ ಸಂತ್ರಸ್ತರ ಪರವಾಗಿದ್ದು, ಈ ಬಗ್ಗೆ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಸಹ ಸಂತ್ರಸ್ತರ ಪರ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಅರಣ್ಯ ಭೂಮಿ ಪ್ರಕರಣ ಇತ್ಯರ್ಥಕ್ಕೆ ಹೆಚ್ಚುವರಿ ಎಸ್‌ಎಫ್‌ಒ ನೇಮಕ: ಅರಣ್ಯ ಭೂಮಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಹಾಗೂ ರೈತರಿಗೆ ತೊಂದರೆಯಾಗುವುದು ತಪ್ಪಿಸಲು ಹೆಚ್ಚುವರಿ ಫಾರೆಸ್ಟ್‌ ಸೆಟಲ್‌ಮೆಂಟ್ ಆಫೀಸರ್‌ (ಎಸ್‌ಎಫ್‌ಒ) ಗಳ ನಿಯೋಜಿಸಲಾಗುವುದು ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ನಗರದಲ್ಲಿ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಅರಣ್ಯ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಕಳೆದ 25-30 ವರ್ಷದಿಂದ ಅರಣ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕರಣ ಇತ್ಯರ್ಥವಾಗದೇ, ಉಳಿದಿವೆ. ಇದರಿಂದ ಬಡವರು ಸರ್ಕಾರದ ಸೌಲಭ್ಯ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡವರಿಗೆ ತ್ವರಿತವಾಗಿ ನ್ಯಾಯ ಕೊಡಿಸಲು ಹಾಗೂ 1978ಕ್ಕೆ ಮುನ್ನ ಅರಣ್ಯದಲ್ಲಿದ್ದವರಿಗೆ ಅರಣ್ಯ ಹಕ್ಕುಪತ್ರ ಕೊಡಿಸುವಂತೆ ಸೂಚಿಸಿದರು.

ಕೊರೊನಾ ವೈರಸ್ ದಿನೇ ದಿನೇ ಹೆಚ್ಚಳ: 7 ಮಂದಿ ಐಸಿಯುನಲ್ಲಿ!

ಅರಣ್ಯ ಮತ್ತು ಸರ್ಕಾರಿ ಭೂಮಿ ಒತ್ತುವರಿ ತಡೆಯಲು ತೀರುವಳಿ ಭೂಮಿಯಲ್ಲಿ ಮರಗಳ ಬೆಳೆಸಲು ಮತ್ತು ಆದ್ಯತೆಯ ಮೇಲೆ ಮೀಸಲು ಅರಣ್ಯ ಎಂಬುದಾಗಿ ಘೋಷಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ದಾವಣಗೆರೆ ವೃತ್ತದ 32 ಸಾವಿರ ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ವಸತಿ ಪ್ರದೇಶ, ದೇವಸ್ಥಾನ, ಸ್ಮಶಾನ ಭೂಮಿ, ಅಂಗನವಾಡಿ, ಆಸ್ಪತ್ರೆ ಇತ್ಯಾದಿ ಇದ್ದರೆ ಅವುಗಳನ್ನು ಕೈಬಿಡಲು ಮತ್ತು ಅದಕ್ಕೆ ಪರ್ಯಾಯ ಭೂಮಿ ಗುರುತಿಸಿ, ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ವರದಿ ಸಲ್ಲಿಸಲು ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಕ್ರಮ ಕೈಗೊಳ್ಳಿ ಎಂದು ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಗ್ಯಾಸ್ ಸಿಲಿಂಡರ್ ಸ್ಫೋಟ - ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು