ಮುಸ್ಲಿಂರ 2ಬಿ ಮೀಸಲಾತಿ ತೆಗೆದುಹಾಕಬೇಕು: ಸಂಚಲನ ಸೃಷ್ಟಿಸಿದ ಯತ್ನಾಳ್ ಹೇಳಿಕೆ

Published : Oct 10, 2022, 07:59 PM IST
ಮುಸ್ಲಿಂರ 2ಬಿ ಮೀಸಲಾತಿ ತೆಗೆದುಹಾಕಬೇಕು: ಸಂಚಲನ ಸೃಷ್ಟಿಸಿದ ಯತ್ನಾಳ್ ಹೇಳಿಕೆ

ಸಾರಾಂಶ

ವಿಜಯಪುರದಲ್ಲಿ ಮತ್ತೆ ಶಾಸಕ ಯತ್ನಾಳ್ ಗುಡುಗಿದ್ದಾರೆ. ಮುಸ್ಲಿಂರಿಗೆ ಇರುವ ಮೀಸಲಾತಿ ರದ್ದು ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಬೆಳಿಗ್ಗೆ ಅರವಿಂದ ಬೆಲ್ಲದ ಇದೆ ವಿಚಾರವನ್ನ ಪ್ರಸ್ತಾಪಿಸಿದ್ದರು. 

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಅ.10): ವಿಜಯಪುರದಲ್ಲಿ ಮತ್ತೆ ಶಾಸಕ ಯತ್ನಾಳ್ ಗುಡುಗಿದ್ದಾರೆ. ಮುಸ್ಲಿಂರಿಗೆ ಇರುವ ಮೀಸಲಾತಿ ರದ್ದು ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಬೆಳಿಗ್ಗೆ ಅರವಿಂದ ಬೆಲ್ಲದ ಇದೆ ವಿಚಾರವನ್ನ ಪ್ರಸ್ತಾಪಿಸಿದ್ದರು. ಬಳಿಕ ಈಗ ಬೆಲ್ಲದ್ ಹೇಳಿಕೆಗೆ ಧ್ವನಿಗೂಡಿಸಿರುವ ಯತ್ನಾಳ್ 2ಬಿ ಮೀಸಲಾತಿ ರದ್ದತಿಗೆ ಆಗ್ರಹಿಸಿದ್ದಾರೆ‌‌‌‌.

ಮುಸ್ಲಿಂಮರು ಎರಡೆರೆಡು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ: ರಾಜ್ಯದಲ್ಲಿ ಮೀಸಲಾತಿ ವಿಚಾರ ಮುನ್ನೆಲೆಯಲ್ಲಿ ಇರುವಾಗ ಈಗ ಶಾಸಕ ಯತ್ನಾಳ್ ಮುಂದಿಟ್ಟಿರುವ ಆಗ್ರಹ ಸಂಚಲನ ಸೃಷ್ಟಿಸಿದೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು ಮುಸ್ಲಿಮರ 2ಬಿ ಮೀಸಲಾತಿ ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಪ ಸಂಖ್ಯಾತ ಹಾಗೂ 2ಬಿ ಎರಡೆರೆಡು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಒಂದು ಅಲ್ಪಸಂಖ್ಯಾತ ಇಲಾಖೆಯಿಂದಲು ಸೌಲಭ್ಯ ಪಡೆಯುವುದಲ್ಲದೆ ಅಲ್ಪಸಂಖ್ಯಾತ ಕೋಟಾದಲ್ಲು ಲಾಭ ಪಡೆಯುತ್ತಿದ್ದಾರೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.

ಚುನಾವಣೆ ಹೊಸ್ತಿಲಲ್ಲೇ ಗುಮ್ಮಟನಗರಿಯಲ್ಲಿ Country made pistol ಹಾವಳಿ..!

ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆಯಂತೆ ಗಂಭೀರ ಚರ್ಚೆ: ಇನ್ನು ಈ ಮೀಸಲಾತಿ ವಿಚಾರವಾಗಿಯೇ ಸರ್ಕಾರ ಮಟ್ಟದಲ್ಲಿ ಚರ್ಚೆಗಳು ಶುರುವಾಗಿವೆಯಂತೆ‌. ಸಿಎಂ ಅವರಿಗು ಇದೆ ವಿಚಾರವಾಗಿ ಯತ್ನಾಳ್ ಮಾತನಾಡಿದ್ದಾರಂತೆ. 2ಎ ಮೀಸಲಾತಿಯಿಂದ ತೆಗೆದುಹಾಕಲು ತಯಾರಿ ನಡೆದಿದೆ, ಪರಿವಾರದಲ್ಲು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ  ಎಂದು ಸ್ವತಃ ಶಾಸಕ ಯತ್ನಾಳ್ ಮಾಹಿತಿ ನೀಡಿದ್ದಾರೆ‌. ಸಮುದಾಯಕ್ಕೆ ಒಂದೇ ಮೀಸಲಾತಿ ಎನ್ನುವದು ತಮ್ಮ ವಾದ ಎಂದರು. ಎರಡೆರೆಡು ಮೀಸಲಾತಿ ವಿಚಾರವಾಗಿ ನಾವು ಕೂಡ ಪುನರ್ ಪರಿಶೀಲನೆಗೆ ಸಿಎಂ ಅವರಿಗೆ ಹೇಳಿದ್ದೇವೆ ಎಂದಿದ್ದಾರೆ‌‌.

ಬೆಲ್ಲದ್ ಹೇಳಿಕೆಗೆ ಧ್ವನಿಗೂಡಿಸಿದ ಯತ್ನಾಳ್: ಮುಸ್ಲಿಂರು ಎರಡೆರೆಡು ಕಡೆಗಳಲ್ಲಿ ಮೀಸಲಾತಿ ಲಾಭ ಪಡೆಯುತ್ತಿರುವ ಬಗ್ಗೆ ಅರವಿಂದ ಬೆಲ್ಲದ ಆಕ್ಷೇಪ ವ್ಯಕ್ತಪಡೆಸಿದ್ದರು. ಇತ್ತ 2ಬಿ ಹಾಗೂ ಮತ್ತೊಂದು ಕಡೆಗೆ ಅಲ್ಪಸಂಖ್ಯಾತ ಕೋಟಾದಲ್ಲಿಯು ಲಾಭ ಪಡೆದುಕೊಳ್ತಿದ್ದಾರೆ. ಮುಸ್ಲಿಂರಿಗೆ ಇರುವ 2ಬಿ ಮೀಸಲಾತಿ ಕಡಿತಗೊಳಿಸಿ ಹಿಂದೂಳಿದ ವರ್ಗಗಳಿಗೆ ಹಂಚಿಕೆ ಮಾಡಬೇಕು ಎಂದಿದ್ದರು‌‌. ಬೆಲ್ಲದರ ಈ ಹೇಳಿಕೆಗೆ ಶಾಸಕ ಯತ್ನಾಳ್ ಧ್ವನಿಗೂಡಿಸಿದ್ದಾರೆ. ಬೆಲ್ಲದ್ ಮಾತಿನಲ್ಲಿ ಸತ್ಯವಿದೆ ಎಂದ ಅವರು ಎರಡು ಕಡೆಗಳಲ್ಲಿ ಲಾಭ ಪಡೆಯುತ್ತಿರೋದನ್ನು ತೆಗೆದು ಉಳಿದ ಹಿಂದೂಳಿದವರಿಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಎಚ್ಚರಿಸಿದರು. 

ದೇಶ ವಿರೋಧಿಗಳ ಎಲ್ಲ ಮೀಸಲಾತಿ ರದ್ದು ಪಡೆಸಬೇಕು: ದೇಶ ವಿರೋಧಿ ಚಟುವಟಿಕೆ ಮಾಡ್ತಾರೆ, ಎರಡು ಕಡೆ ಲಾಭ ಪಡೆಯುತ್ತಾರೆ, ಅಂತವರು ಎಲ್ಲ ಮೀಸಲಾತಿ ಸೌಲಭ್ಯ ರದ್ದು ಪಡೆಸಬೇಕು ಎಂದು ಗುಡುಗಿದರು. ಆದಷ್ಟು ಬೇಗನೆ ಸರ್ಕಾರ ಕ್ರಮ ವಹಿಸಲಿದೆ ಎಂದು ಯತ್ನಾಳ್ ನೇರವಾಗಿ ತಮ್ಮ ಮಾತನ್ನು ಸಮರ್ಥಿಸಿಕೊಂಡರು. 

ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು: ಬ್ರಾಹ್ಮಣರು ನಿಜವಾದ ಅಲ್ಪ ಸಂಖ್ಯಾತರು. ಬ್ರಾಹ್ಮಣರಿಗೆ ಅಲ್ಪ ಸಂಖ್ಯಾತ ಸ್ಥಾನಮಾನ ಸಿಗಬೇಕು, ಇದು ನನ್ನ ಆಗ್ರಹವಾಗಿದೆ. ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಮೀಸಲಾತಿ ಬಗ್ಗೆ ಯತ್ನಾಳ ಮತ್ತೊಮ್ಮೆ ಧ್ವನಿ ಎತ್ತಿದರು.

ನಿಜವಾದ ಅಲ್ಪಸಂಖ್ಯಾತರು ಬ್ರಾಹ್ಮಣರು: ಬ್ರಾಹ್ಮಣರು ಅಲ್ಪಸಂಖ್ಯಾತರು ಬ್ರಾಹ್ಮಣರು ಕೇವಲ ಶೇಕಡಾ 2ರಿಂದ 3ರಷ್ಟಿದ್ದಾರೆ, ನಿಜವಾದ ಅಲ್ಪ ಸಂಖ್ಯಾತರು ಬ್ರಾಹ್ಮಣರು ಎಂದರು. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣರನ್ನ ಸೇರಿಸಬೇಕು, ಇದು ನನ್ನ ವಾದವಾಗಿದೆ ಎಂದರು. ಮುಸ್ಲಿಂರು ಅಲ್ಪ ಸಂಖ್ಯಾತರು ಅಲ್ಲವೇ ಅಲ್ಲಾ ಎಂದ ಅವರು ಒಂದು ಜನಾಂಗದಷ್ಟಿರುವ ಮುಸ್ಲಿಂ ಹೇಗೆ ಅಲ್ಪ ಸಂಖ್ಯಾತರಾಗ್ತಾರೆ? ಎಂದು ಪ್ರಶ್ನಿಸಿದರು. 

ವಿಜಯಪುರ: ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಪೋಸ್ಟ್‌: ಪೊಲೀಸ್‌ ಕಾನ್ಸಟೇಬಲ್ ಸಸ್ಪೆಂಡ್‌

ಹೆಚ್ಚಿನ ಸೌಲಭ್ಯ ಬಯಸೋ ಮುಸ್ಲಿಂರು ಪಾಕಿಸ್ತಾನಕ್ಕೆ ಹೋಗಲಿ: ದೇಶದ್ರೋಹಿ ಕೆಲಸ ಮಾಡೋದು, ಪಾಕಿಸ್ತಾನದ ಪರ ಮಾತ ನಾಡೋದು ಈಗ ಮೀಸಲಾತಿ ಬೇಕು ಅಂದ್ರೆ ಹೇಗೆ?? ಎಂದು ಮುಸ್ಲಿಂ ಸಮುದಾಯದ ವಿರುದ್ಧ ಮತ್ತೊಮ್ಮೆ ಬೆಂಕಿ ಉಗುಳಿದರು. ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಂರು ಪಾಕಿಸ್ತಾನಕ್ಕೆ ಹೋಗಲಿ, ಸೌಲಭ್ಯಕ್ಕಾಗಿ ಪಾಕಿಸ್ತಾನಕ್ಕೆ ಹೋಗ ಬಹುದು ಎಂದು ಯತ್ನಾಳ ಗುಡುಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ