
ಬೆಂಗಳೂರು (ಅ.10): ಕಳೆದ ಮೂರು ದಿನಗಳಿಂದ ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ಸಂಸ್ಥೆಯನ್ನು ತಲುಪಿರುವ ಕುಟುಂಬಗಳು, ತಮ್ಮ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ, ಉತ್ತರಖಂಡದಲ್ಲಿ ನಡೆದ ಹಿಮಪಾತದಲ್ಲಿ ಸಾವುಗಳ ಸಂಖ್ಯೆ ದಿನಕಳೆದಂತ ಏರಿಕೆಯಾಗುತ್ತಿವೆ. ಈ ಹಿಮಪಾತದಲ್ಲಿ ರಾಜ್ಯದ ಇಬ್ಬರು ವ್ಯಕ್ತಿಗಳೂ ಸಾವಿಗೀಡಾಗಿದ್ದರು. ಅವರ ದೇಹವನ್ನು ತರುವ ನಿಟ್ಟಿನಲ್ಲಿ ಯತ್ನ ಆರಂಭವಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಉತ್ತರ ಖಂಡದಲ್ಲಿ ಹಿಮಪಾತವಾಗಿ 27 ಜನ ಸತ್ತಿದ್ದಾರೆ. ಕರ್ನಾಟಕದ ವಿಕ್ರಮ್ ಮತ್ತು ರಕ್ಷಿತ್ ಎನ್ನುವವರು ಕೂಡ ಸಾವು ಕಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇವರಿಬ್ಬರೂ ನೆಹರು ಇನ್ಸ್‌ಟ್ಯೂಟ್ ಟ್ರೈನಿಂಗ್ ಮೂಲಕ ಪರ್ವತಾರೋಹಣಕ್ಕೆ ಹೋಗಿದ್ದರು. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅವರಿಗೆ ಈ ಕುರಿತಾಗಿ ಎಲ್ಲಾ ಮಾಹಿತಿ ನೀಡಿದ್ದೇವೆ. ಎರಡೂ ಮೃತದೇಹ ಸಿಕ್ಕಿದೆ ಎಂದು ಅಶೋಕ್ ಹೇಳಿದ್ದಾರೆ. ರಕ್ಷಿತ್ ದೇಹ 6131 ಇಂಡಿಗೋ ವಿಮಾನದಲ್ಲಿ 4.40 ರ ವಿಮಾನದಲ್ಲಿ ಬರಲಿದೆ. ಮತ್ತೊಬ್ಬ ವಿಕ್ರಮ್ ದೇಹ ರಾತ್ರಿ 9.15ಕ್ಕೆ ಬೆಂಗಳೂರು ಏರ್‌ಪೋರ್ಟ್‌ಗೆ ಬರಲಿದೆ ಎಂದಿದ್ದಾರೆ.
ಇವರ ಮೃತದೇಹವನ್ನು ತರುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅವರ ಮೃತದೇಹ ತರುವ ಖರ್ಚು, ವೆಚ್ಚ ಸರ್ಕಾರವೇ ಭರಿಸಲಿದೆ. ಇಬ್ಬರೂ ತೀರಿ ಹೋಗಿದ್ದು,ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ನೀಡಲಿ ಎಂದು ಅಶೋಕ್ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, 41 ಸದಸ್ಯರ ತಂಡದಲ್ಲಿ 34 ಪ್ರಶಿಕ್ಷಣಾರ್ಥಿಗಳು ಮತ್ತು ಏಳು ಬೋಧಕರು ಇದ್ದರು. ಪತ್ತೆಯಾದ 26 ಶವಗಳಲ್ಲಿ ನಾಲ್ವರನ್ನು ಉತ್ತರಕಾಶಿಗೆ ತರಲಾಗಿದ್ದು, ಉಳಿದವರು ಮೂಲ ಶಿಬಿರದಲ್ಲಿದ್ದಾರೆ. ಎನ್‌ಐಎಂ ಅಧಿಕಾರಿಗಳ ಪ್ರಕಾರ, ಆರೋಹಿಗಳು ಪಶ್ಚಿಮ ಬಂಗಾಳ, ದೆಹಲಿ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಅಸ್ಸಾಂ, ಹರಿಯಾಣ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಿಂದ ಬಂದವರು. “ಆದರೆ ಗುಂಪಿನಲ್ಲಿ ಅನೇಕರು ಪರ್ವತಾರೋಹಣದಲ್ಲಿ ಆಸಕ್ತಿ ಹೊಂದಿರುವ ಸ್ಥಳೀಯ ಯುವಕರು. ಎಲ್ಲಾ ಸದಸ್ಯರು 25 ರಿಂದ 35 ವರ್ಷ ವಯಸ್ಸಿನವರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ