Corona Update ಕರ್ನಾಟಕದಲ್ಲಿ ಕೊರೋನಾ ಏರಿಕೆ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

By Suvarna NewsFirst Published Jan 14, 2022, 10:24 PM IST
Highlights

* ಕರ್ನಾಟಕದಲ್ಲಿ ಕೊರೋನಾ ಏರಿಕೆ, ಸಾವಿನ ಸಂಖ್ಯೆಯೂ ಹೆಚ್ಚಳ
* ಪಾಸಿಟಿವಿಟಿ ದರ  12.98ಕ್ಕೆ ಏರಿಕೆ
* ಇಲ್ಲಿದೆ ಜನವರಿ 14ರ ಅಂಕಿ-ಸಂಖ್ಯೆ

ಬೆಂಗಳೂರು, (ಜ.14): ಕರ್ನಾಟಕದಲ್ಲಿ (Karnataka) ಮಹಾಮಾರಿ ಕೊರೋನಾ ವೈರಸ್ (Coronavirus) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು(ಶುಕ್ರವಾರ) ರಾಜ್ಯದಲ್ಲಿ 28,723 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ 14 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 31,53,247ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದುವರೆಗೆ ಒಟ್ಟು 29,73,470 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ರಾಜ್ಯದಲ್ಲಿ ಪಾಸಿಟಿವಿಟಿ ದರ  12.98ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Karnataka Lockdown ಕರ್ನಾಟಕ ಲಾಕ್‌ಡೌನ್ ಆಗುತ್ತಾ? ಮೋದಿ ಸಭೆ ಬಳಿಕ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ

ಬೆಂಗಳೂರಿನಲ್ಲಿ 20,121 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1695 ಜನರು ಚೇತರಿಸಿಕೊಂಡಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 1,09,312 ಸಕ್ರಿಯ ಪ್ರಕರಣಗಳಿವೆ. ಈವರೆಗೆ ನಗರದಲ್ಲಿ ಒಟ್ಟು 13,73,452 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,47,696 ಜನರು ಚೇತರಿಸಿಕೊಂಡಿದ್ದಾರೆ.

ಇಂದು(ಜ.14) 2,21,205 ಮಂದಿಯನ್ನು ಕೊರೋನಾ ಟೆಸ್ಟ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್  ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್? 
ಬಾಗಲಕೋಟೆ 49, ಬಳ್ಳಾರಿ 400, ಬೆಳಗಾವಿ 227, ಬೆಂಗಳೂರು ಗ್ರಾಮಾಂತರ 418, ಬೀದರ್ 131, ಚಾಮರಾಜನಗರ 106, ಚಿಕ್ಕಬಳ್ಳಾಪುರ 246, ಚಿಕ್ಕಮಗಳೂರು 174, ಚಿತ್ರದುರ್ಗ 104, ದಕ್ಷಿಣ ಕನ್ನಡ 639, ದಾವಣಗೆರೆ 187, ಧಾರವಾಡ 338, ಗದಗ 110, ಹಾಸನ 654, ಹಾವೇರಿ 25, ಕಲಬುರಗಿ 338, ಕೊಡಗು 104, ಕೋಲಾರ 502, ಕೊಪ್ಪಳ 49, ಮಂಡ್ಯ 554, ಮೈಸೂರು 803, ರಾಯಚೂರು 172, ರಾಮನಗರ 239, ಶಿವಮೊಗ್ಗ 315, ತುಮಕೂರು 796, ಉಡುಪಿ 497, ಉತ್ತರ ಕನ್ನಡ 301, ವಿಜಯಪುರ 106, ಯಾದಗಿರಿ 18.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? 
ಬೆಂಗಳೂರು ನಗರ 7, ಬೆಂಗಳೂರು ಗ್ರಾಮಾಂತರ 3, ಚಿಕ್ಕಬಳ್ಳಾಪುರ ಮತ್ತು ಮಂಡ್ಯ ತಲಾ 1, ಮೈಸೂರು 2.

ಕರ್ನಾಟಕದಲ್ಲಿ ಲಾಕ್‌ಡೌನ್ ಬಗ್ಗೆ ಸುಧಾಕರ್ ಸ್ಪಷ್ಟನೆ
ಕರ್ನಾಟಕದಲ್ಲೂ(Karnataka) ಕೊರೋನಾ ವೈರಸ್ (Coronavirus) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ನಿನ್ನೆ(ಜ.13) ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿದ್ದಾರೆ. ಸೋಂಕು ನಿಯಂತ್ರಣಕ್ಕೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಮೋದಿ ಸಲಹೆ ನೀಡಿದ್ದಾರೆ. ಇದರಿಂದ ಲಾಕ್‌ಡೌನ್ ಪಕ್ಕಾ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ. ಅಲ್ಲದೇ ಗೊಂದಕ್ಕೀಡಾಗಿದೆ. ಇದೀಗ ಇದಕ್ಕೆ ಸ್ವತಃ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Minister Dr K Sudhakar) ಸ್ಪಷ್ಟನೆ ಕೊಟ್ಟಿದ್ದಾರೆ.

ಇಂದು(ಜ.14) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನತೆ ಆತಂಕ ಪಡುವ ನಿಯಮಗಳನ್ನು ಜಾರಿ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಲಾಕ್‍ಡೌನ್‍ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಾರ್ವಜನಕರಲ್ಲಿ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಲಾಕ್‍ಡೌನ್ ಮೂಲಕ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಜನರಿಗೆ ಆರ್ಥಿಕ ನಷ್ಟ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ. ಹೀಗಾಗಿ ಸರ್ಕಾರದ ಮುಂದೆ ಲಾಕ್‍ಡೌನ್ ಮಾಡುವಂತಹ ಪ್ರಸ್ತಾವನೆ ಇಲ್ಲ ಎಂದು ಪುನರುಚ್ಚರಿಸಿದರು.

click me!