20 ದಿನದ ಬಳಿಕ ಬೆಂಗಳೂರಲ್ಲಿ ದಾಖಲೆ ಕೊರೋನಾ ಸೋಂಕಿತರು!

Kannadaprabha News   | Asianet News
Published : Aug 07, 2020, 08:51 AM IST
20 ದಿನದ ಬಳಿಕ ಬೆಂಗಳೂರಲ್ಲಿ ದಾಖಲೆ ಕೊರೋನಾ ಸೋಂಕಿತರು!

ಸಾರಾಂಶ

ಜು.16ರಂದು ಬೆಂಗಳೂರು ನಗರದಲ್ಲಿ 2,344 ಸೋಂಕಿತರು ಪತ್ತೆ| ಗುರುವಾರ 2544 ಕೊರೋನಾ ಕೇಸ್‌ ಹೊಸ ದಾಖಲೆ|ಇಲ್ಲಿಯವರೆಗೆ ಬೆಂಗಳೂರಲ್ಲಿ 67,425 ಮಂದಿಗೆ ಈವರೆಗೆ ಸೋಂಕು ಅದರಲ್ಲಿ 1,178 ಮಂದಿ ಸೋಂಕಿಗೆ ಬಲಿ| 32,314 ಸಕ್ರಿಯ ಸೋಂಕಿತರು, ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಷನಲ್ಲಿದ್ದಾರೆ| ಸಕ್ರಿಯ ಪ್ರಕರಣಗಳಿಗಿಂತ ಹೆಚ್ಚು 33,932 ಮಂದಿ ಗುಣಮುಖ|

ಬೆಂಗಳೂರು(ಆ.07): ರಾಜಧಾನಿ ಬೆಂಗಳೂರಿನಲ್ಲಿ 20 ದಿನಗಳ ಬಳಿಕ ದಾಖಲೆಯ ಸಂಖ್ಯೆಯ ಹೊಸ ಕೊರೋನಾ ಸೋಂಕಿತರ ಪ್ರಕರಣ ದಾಖಲಾಗಿದೆ. ಜು.16 ರಂದು ಬೆಂಗಳೂರಿನಲ್ಲಿ 2,344 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿರುವುದು ದಾಖಲೆಯಾಗಿತ್ತು. ಅದಾದ ಬಳಿಕ ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿತ್ತು. ಆದರೆ, ಗುರುವಾರ 2544 ಕೊರೋನಾ ಸೋಂಕಿತರು ಪತ್ತೆಯಾಗಿರುವುದು ಹೊಸ ದಾಖಲೆಯಾಗಿದೆ.

ಗುರುವಾರ ಪತ್ತೆಯಾದ 2,544 ಮಂದಿಯಲ್ಲಿ 1,464 ಮಂದಿ ಪುರುಷರು, 1,079 ಮಂದಿ ಮಹಿಳೆಯರು, ಓರ್ವ ಲೈಂಗಿಕ ಅಲ್ಪಸಂಖ್ಯಾತರಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನ ಕೊರೋನಾ ಸೋಂಕಿತರ ಸಂಖ್ಯೆ 67,425 ಏರಿಕೆಯಾಗಿದೆ.

ದೇಶದಲ್ಲೀಗ 20 ಲಕ್ಷ ಮಂದಿ ಕೊರೋನಾ ಸೋಂಕಿತರು..!

ಗುರುವಾರ 2,972 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆ, ಆರೈಕೆ ಕೇಂದ್ರ ಮತ್ತು ಹೋಂ ಐಸೋಲೇಷನ್‌ನಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರ ಸಂಖ್ಯೆ 33,932 ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗುಣಮುಖರ ಸಂಖ್ಯೆ ಹೆಚ್ಚಳ

ನಗರದಲ್ಲಿ 67,425 ಮಂದಿಗೆ ಈವರೆಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 1,178 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 32,314 ಸಕ್ರಿಯ ಸೋಂಕಿತರು, ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಷನಲ್ಲಿದ್ದಾರೆ. ಸಕ್ರಿಯ ಪ್ರಕರಣಗಳಿಗಿಂತ ಹೆಚ್ಚು 33,932 ಮಂದಿ ಗುಣಮುಖರಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ