* ಸಿಎಂ ಬೊಮ್ಮಯಿಗೆ ವರದಿ ನೀಡಿದ ಕೃಷಿ ಬೆಲೆ ಆಯೋಗ
* ಇಂದು (ನ.23) ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಿಎಂಗೆ ವರದಿ ಸಲ್ಲಿಕೆ
* ಶಿಫಾರಸ್ಸಿನಲ್ಲಿರುವ ಮುಖ್ಯ ಅಂಶಗಳು ಈ ಕೆಳಗಿನಂತಿವೆ
ಬೆಂಗಳೂರು, (ನ.23): ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ರೈತ ಬೆಳೆದ ಬೆಳೆ ನೀರುಪಾಲಾಗಿದೆ. ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಇನ್ನು ಇದರ ಮಧ್ಯೆ ಕೃಷಿ ಬೆಲೆ ಆಯೋಗ(Karnataka Agricultural Price Commission), ರಾಜ್ಯ ಸರ್ಕಾರಕ್ಕೆ (Karnataka Government) ರೈತರ ಬಗ್ಗೆ ಕೆಲ ಶಿಫಾರಸ್ಸುಗಳ ವರದಿಯನ್ನು ನೀಡಿದೆ.
Uttara Kannada| ಅಕಾಲಿಕ ಮಳೆಗೆ ನೀರುಪಾಲಾದ ಬೆಳೆ, ಕಂಗಾಲಾದ ಅನ್ನದಾತ..!
ಕೃಷಿ (Agricultural) ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ (Market Price) ವಸ್ತುಸ್ಥಿತಿ ಹಾಗೂ ರೈತರು (Farmers) ಮತ್ತು ಗ್ರಾಹಕರುಗಳ ನಡುವಿನ ಬೆಲೆ ಪ್ರಸರಣ ವಿಶ್ಲೇಷಣೆ ಕುರಿತ ವರದಿ ನೀಡಿದೆ.
ಇಂದು (ನ.23) ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಕೃಷಿ ಬೆಲೆ ಆಯೋಗ ಭೇಟಿಯಾಗಿ ವರದಿ ಸಲ್ಲಿಕೆ ಮಾಡಿದ್ದು, ಶಿಫಾರಸ್ಸಿನಲ್ಲಿರುವ ಮುಖ್ಯ ಅಂಶಗಳು ಈ ಕೆಳಗಿನಂತಿವೆ ನೋಡಿ..
ಶಿಫಾರಸ್ಸಿನಲ್ಲಿರುವ ಮುಖ್ಯ ಅಂಶಗಳು
*ಕನಿಷ್ಠ ಬೆಂಬಲ ಬೆಲೆಯನ್ನ ಶಾಸನ ಬದ್ಧ ಬೆಂಬಲ ಬೆಲೆ ಎಂದು ಘೋಷಣೆ ಮನವಿ.
* ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೈಗಾರಿಕಾ ಉತ್ಪನ್ನ ಬೆಳೆಗಳಿಗೆ ಕಡಿಮೆ ಇರದಂತೆ ನೋಡಿಕೊಳ್ಳಬೇಕು...
* ಜಿಲ್ಲೆಗಳ ಕ್ಲಸ್ಟರ್ ಬೆಲೆ ಪರಿಗಣಿಸಿ.
* ತುಂಗಭದ್ರಾ ಅಚ್ಚುಕಟ್ಟು ಸೋನಾಮಸೂರಿ,ಕರಾವಳಿ ಕರ್ನಾಟಕದ ಕುಸುಬಲಕ್ಕಿ,ಮಂಗಳೂರು ಗೋಡಂಬಿ, ಬಿಜಾಪುರದ ದ್ರಾಕ್ಷಿ,ಮಳೆನಾಡು ಕರಿ ಮೆಣಸು ಕ್ಲಸ್ಟರ್ ಪರಿಗಣಿಸಬೇಕು.
* ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ರೈತನ ಆದಾಯ ಹೆಚ್ಚಿಸಿಕೊಳ್ಳಬೇಕು
*ಬೆಳೆ ವಿಮೆ ಕಡ್ಡಾಯ ಮಾಡುವುದು..
* ವಿಮೆ ಮೊತ್ತವನ್ನ ರೈತ ಸಮ್ಮಾನ್ ಯೋಜನೆಯಿಂದ ಭರಿಸಿಕೊಳ್ಳಬೇಕು
* ತಮ್ಮ ಜಮೀನಿನಲ್ಲಿ ಕೆರೆ ನಿರ್ಮಿಸಿಕೊಳ್ಳಲು ಉತ್ತೇಜನ ನೀಡುವುದು...
* ಸರ್ಕಾರ ಪ್ರೋತ್ಸಾಹ ಧನ ನೀಡುವುದು. ನಾಲ್ಕು ಎಕರೆ ಜಮೀನು ಇದ್ರೆ 10 ಗುಂಟೆ ಜಮೀನಿನಲ್ಲಿ ಕೆರೆ ನಿರ್ಮಿಸಿಕೊಳ್ಳುವುದು..
*ಸುತ್ತಮುತ್ತಲಿನ ರೈತರು ಸೇರಿ ಮಾಡಿಕೊಂಡ್ರೆ ಐದು ಸಾವಿರ ಎಕರೆಗೆ ಒಂದು ಟಿಎಂಸಿ ನೀರು ಸಂಗ್ರಹಿಸಬಹುದು...
*ಕೃಷಿ ಸಮ್ಮಾನ್ ನಲ್ಲಿ ಕೊಡ್ತಿರುವ ಪರಿಹಾರ ಹೆಚ್ಚಳ ಮಾಡಬೇಕು - 6 ಸಾವಿರದಿಂದ 10 ಸಾವಿರ ಹೆಚ್ಚಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು
*ರಪ್ತು ಉತ್ತೇಜಿಸಲು ಅಂತರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ರೈತರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಿಕೊಡುವುದು...
* ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕಾಡಿನಲ್ಲಿ ಗೆಡ್ಡೆ ಗೆಣಸು ಮತ್ತು ಹಣ್ಣು ಹಂಪಲು ಗಿಡ ಬೆಳೆಸಬೇಕು
* ಕಾಡು ಪ್ರಾಣಿಗಳಿಂದ ರೈತನ ಬೆಳೆ ರಕ್ಷಣೆ ಮಾಡಬೇಕು
* ರೈತರ ಬೀಜ ಬಿತ್ತನೆ ಬಗ್ಗೆ ಮಾಹಿತಿ ಕೊಡಬೇಕು ಹಾಗು ಹೆಚ್ಚು ಇಳುವರಿ ಕೊಡುವ ರೋಗನಿರೋಧಕ ಶಕ್ತಿ ಇರುವ ಬೀಜ ಪೂರೈಕೆ ಮಾಡಬೇಕು
* ಯಾಂತ್ರೀಕೃತ ಬೇಸಾಯಕ್ಕೆ ಪ್ರೋತ್ಸಾಹ ಕೊಡಬೇಕು.
* ರೈತರಿಗೆ ಕಡಿಮೆ ಬೆಲೆಯಲ್ಲಿ ಯಂತ್ರೋಪಕರಣಗಳು ಸಿಗುವಂತೆ ಆಗಬೇಕು
* ಹೊಲಕೊಂದು ಕೆರೆ ಆಂದೋಲನ ರೂಪಿಸುವುದು ಇಲ್ಲವೆ ಕೃಷಿ ಹೊಂಡ ನಿರ್ಮಾಣ ಮಾಡಲು ಪ್ರೋತ್ಸಾಹಿಸುವುದು.
* ಮಣ್ಣಿನ ಫಲವತ್ತತೆ ಹೆಚ್ಚಿಸಲು ಭೂಮಿಯ ಒಳಗೆ ಹಸಿರು ಎಲೆ ಹಾಕುವುದು ಕಡ್ಡಾಯ ಮಾಡುವುದು. ಇದನ್ನ ಆಂದೋಲನದ ರೀತಿಯಲ್ಲಿ ಕಾರ್ಯಗತ ಮಾಡುವುದು.
* ಕೆರೆ ನಿರ್ಮಾಣಕ್ಕೆ ಸಬ್ಸಿಡಿ ನೀಡುವುದು( ಎಸ್ಸಿ,ಎಸ್ಟಿ ಗೆ ಶೇಕಡಾ 50 ರಷ್ಟು ಮತ್ತು ಜನರಲ್ ಗೆ ಶೇಕಡಾ 25 ರಷ್ಟು ಸಬ್ಸಿಡಿ ನೀಡುವುದು)
* ಕೃಷಿ ಅಧುನಿಕರಣ ಮತ್ತು ಇಳುವರಿ ಹೆಚ್ಚಳ ಮತ್ತು ರೈತರ ಆದಾಯ ದುಪ್ಪಟ್ಟು ಆಗಲು ಕ್ರಮ ವಹಿಸಬೇಕು..