ಕರ್ನಾಟಕದಲ್ಲಿ ಕೊರೋನಾ ಬ್ಲಾಸ್ಟ್: ಬೆಚ್ಚಿಬೀಳಿಸಿದ ಏ.18ರ ಅಂಕಿ ಸಂಖ್ಯೆ!

By Suvarna News  |  First Published Apr 18, 2021, 7:28 PM IST

ಕರ್ನಾಟಕದಲ್ಲಿ  ಕೊರೋನಾ ಎರಡನೇ ಅಲೆ ಆರ್ಭಟಿಸುತ್ತಿದ್ದು, ಏ.18ರ ಅಂಕಿ-ಸಂಖ್ಯೆ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ.


ಬೆಂಗಳೂರು, (ಏ.18): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಇಂದು (ಭಾನುವಾರ) ಬರೊಬ್ಬರಿ 19,067 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಕಿಲ್ಲರ್ ಕೊರೋನಾಗೆ  81 ಜನರು ಸಾವನ್ನಪ್ಪಿದ್ದಾರೆ.

ಇದರಿಂದಾಗಿ ಸೋಂಕಿತರ ಸಂಖ್ಯೆ 11,61,065ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13,351 ಕ್ಕೆ ಏರಿಕೆಯಾಗಿದೆ.

Latest Videos

undefined

ಕರ್ನಾಟಕದಲ್ಲಿ ಲಾಕ್‌ಡೌನ್ ಬದಲಿಗೆ ಮತ್ತೊಂದು ಟಫ್ ರೂಲ್ಸ್: ಏನದು?

ಇನ್ನು ಕಳೆದ 24 ಗಂಟೆಗಳಲ್ಲಿ 4,603 ಜನರು ಸೇರಿದಂತೆ ಇದುವರೆಗೆ 10,14,152 ಜನರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈಗ 1,33,543 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 620 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಕೊರೋನಾ ಸುನಾಮಿ ಎದ್ದಿದೆ. ಒಂದೇ ದಿನ 12,793 ಜನರಿಗೆ ಸೋಂಕು ತಗುಲಿದ್ದು, 60 ಮಂದಿ ಸೋಂಕಿತರು ಸಾವನ್ನಪ್ಪಿದ್ದು, 97,897 ಸಕ್ರಿಯ ಪ್ರಕರಣಗಳಿವೆ.

click me!