ಕರ್ನಾಟದಲ್ಲಿ ಏ.20ರ ಕೊರೋನಾ ಕೇಸ್ ಅಂಕಿ ಅಂಶಗಳು..!

By Suvarna NewsFirst Published Apr 20, 2020, 7:13 PM IST
Highlights

ಕರ್ನಾಟಕದಲ್ಲಿ ಎಷ್ಟು ಕೊರೋನಾ ಕೇಸ್ ಪತ್ತೆಯಾಗಿವೆ..ಯಾವ-ಯಾವ ಜಿಲ್ಲೆಗಳಲ್ಲಿ? ಏಪ್ರಿಲ್ 20ರ ವರೆಗೆ ಒಟ್ಟು ರಾಜ್ಯದಲ್ಲಿ ಎಷ್ಟು ಕೇಸ್‌ಗಳು ದಾಖಲಾಗಿವೆ ಎನ್ನುವ ಅಂಕಿ ಅಂಶ

ಬೆಂಗಳೂರು, (ಏ.20): ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ಒಂದೇ ದಿನ 18 ಮಂದಿಗೆ ಕೊವಿಡ್-19 ಪಾಸಿಟಿವ್ ಕೇಸ್‌ಗಳು ದೃಢಪಟ್ಟಿದೆ. 

ಸೋಮವಾರ ಬೆಳಗ್ಗೆ 5  ಪ್ರಕರಣಗಳು ಪತ್ತೆಯಾಗಿದ್ದು, ಸಂಜೆ ಮತ್ತೆ 13 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 408ಕ್ಕೆ ಏರಿಕೆಯಾಗಿದೆ. ಅದರಲ್ಲೂ ವಿಜಯಪುರ ಜಿಲ್ಲೆಯ ಒಂದರಲ್ಲೇ 11 ಜನರಿಗೆ ಸೋಂಕು ತಗುಲಿರುವುದು ಮತ್ತಷ್ಟು ಆತಂಕ ಉಂಟು ಮಾಡಿದೆ.

ಪಾದರಾಯನಪುರ ಪುಂಡರಿಗೆ ತಕ್ಕ ಶಾಸ್ತಿ, ಮಂದಿರಾ ಜೊತೆ ಕೆಜಿಎಫ್ ಬೆಡಗಿ ದೋಸ್ತಿ; ಏ.20ರ ಟಾಪ್ 10 ಸುದ್ದಿ!

ಈ ಪೈಕಿ 16 ಮಂದಿ ಮೃತಪಟ್ಟಿದ್ದು, 112 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸೋಮವಾರ ವಿಜಯಪುರದಲ್ಲಿ 11, ಕಲಬುರಗಿಯಲ್ಲಿ 5, ಗದಗ ಮತ್ತು ಬೀದರ್ ನಲ್ಲಿ ತಲಾ 1 ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಇದರಲ್ಲಿ ಸಮಾಧಾನಕರ ಸಂಗತಿ ಅಂದ್ರೆ ಪ್ರಮುಖ ರೆಡ್ ಜೋನ್ ನಲ್ಲಿರುವ ಬೆಂಗಳೂರು ಮತ್ತು ಮೈಸೂರಿನಲ್ಲಿ ಸೋಮವಾರ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.

: Evening Bulletin

Total Confirmed Cases: 408
Deceased: 16
Recovered:112
New Cases: 18

Other information: Telemedicine facility, Instructions to Tablighi Jamaat Attendees, Watch Application and Helpline details. 1/2 pic.twitter.com/8Sp2IX6qyY

— CM of Karnataka (@CMofKarnataka)
click me!