
ಬೆಂಗಳೂರು (ಜೂ.02): ರಾಜ್ಯದಲ್ಲಿ ಕೋವಿಡ್ ಹೆಮ್ಮಾರಿ, 18 ಕಂದಮ್ಮಗಳು ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥವಾಗುವಂತೆ ಮಾಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಜೊತೆಗೆ ಈ ಸಂಖ್ಯೆ ಇನ್ನಷ್ಟುಹೆಚ್ಚಾಗುವ ಭೀತಿಯೂ ಇದೆ.
ರಾಜ್ಯದ 10 ಜಿಲ್ಲೆಗಳಿಂದ 18 ಮಕ್ಕಳು ಅನಾಥರಾಗಿರುವ ಮಾಹಿತಿ ಸದ್ಯ ಸರ್ಕಾರ ಬಳಿಯಿದೆ. ಬಾಗಲಕೋಟೆ, ರಾಯಚೂರಿನಲ್ಲಿ ತಲಾ ಮೂವರು, ಬೆಂಗಳೂರು ನಗರ, ಮೈಸೂರು, ಬೀದರ್, ಬೆಳಗಾವಿ ಜಿಲ್ಲೆಯಲ್ಲಿ ತಲಾ ಇಬ್ಬರು, ಕೋಲಾರ, ಚಾಮರಾಜನಗರ, ದಾವಣಗೆರೆ ಮತ್ತು ಮಂಡ್ಯ ಜಿಲ್ಲೆಯಲ್ಲಿ ತಲಾ ಒಂದು ಮಗು ತನ್ನ ತಂದೆ ತಾಯಿ ಇಬ್ಬರನ್ನೂ ಕೋವಿಡ್ ಹೆಮ್ಮಾರಿಯಿಂದ ಕಳೆದುಕೊಂಡಿದೆ. ಈ ಎಲ್ಲ ಮಕ್ಕಳನ್ನು ಆಯಾ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದ್ದು ಅವರ ಆಪ್ತ ಕುಟುಂಬದ ವಶಕ್ಕೆ ನೀಡಲಾಗಿದೆ. ಕಳೆದ 10 ದಿನಗಳಿಂದ ಮಕ್ಕಳ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳ ರಕ್ಷಣಾ ಘಟಕಗಳು ಸಂಗ್ರಹಿಸುತ್ತಿವೆ.
ಕರ್ನಾಟಕದಲ್ಲಿ ಕೊರೋನಾ ಪಾಸಿವಿಟಿವಿ ಪ್ರಮಾಣ ಇಳಿಕೆ, ಕೊಂಚ ನಿರಾಳ ಭಾವ ..
ಸುಪ್ರೀಂ ಕೋರ್ಟ್ ಸೂಚನೆಯಂತೆ ಇದೀಗ ಸರ್ಕಾರವು ಕೊರೋನಾದಿಂದಾಗಿ ತಂದೆ ತಾಯಿಗಳಲ್ಲಿ ಒಬ್ಬರನ್ನು ಕಳೆದುಕೊಂಡವರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. 2020ರ ಮಾಚ್‌ರ್‍ನಿಂದ 2021ರ ಮೇವರೆಗೆ ಒಬ್ಬರು ಪೋಷಕರು ಅಥವಾ ಇಬ್ಬರನ್ನೂ ಕಳಕೊಂಡವರ ಮಾಹಿತಿ ಸಂಗ್ರಹಿಸುವಂತೆ ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರವು ಈ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಿದೆ.
ಕೋವಿಡ್ ನಿಂದ ತಂದೆ ತಾಯಿಗಳಿಬ್ಬರನ್ನು ಕಳಕೊಂಡವರ ಸಂಖ್ಯೆ ಇನ್ನಷ್ಟುಹೆಚ್ಚಿರುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಬೇಕು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಅಭಿಪ್ರಾಯ ಪಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ