ಅಪಘಾತದಿಂದ ಮರ್ಮಾಂಗಕ್ಕೆ ಪೆಟ್ಟು: 17 ಲಕ್ಷ ಪರಿಹಾರ

By Kannadaprabha NewsFirst Published Jan 26, 2022, 7:49 AM IST
Highlights

*   ಅಪಘಾತದಿಂದ ವೈವಾಹಿಕ ಸುಖದಿಂದ ವ್ಯಕ್ತಿ ವಂಚಿತ
*   ಸರಿಪಡಿಸಲಾಗದ ನಷ್ಟ 
*   ಮೋಟಾರು ವಾಹನ ಅಪಘಾತ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದ ಬಸವರಾಜು 
 

ಬೆಂಗಳೂರು(ಜ.26):  ದಶಕದ ಹಿಂದೆ ನಡೆದಿದ್ದ ರಸ್ತೆ ಅಪಘಾತದಲ್ಲಿ(Accident) ಮರ್ಮಾಂಗದ(Genitalia)ಕಾಯಂ ವೈಕಲ್ಯಕ್ಕೆ ಒಳಗಾಗಿ ಲೈಂಗಿಕ ಸುಖ ಪಡೆಯಲಾಗದಂತಹ ಸ್ಥಿತಿಗೆ ತಲುಪಿದ್ದ ವ್ಯಕ್ತಿಗೆ ಒಟ್ಟು 17.66 ಲಕ್ಷ ರು. ಪರಿಹಾರ ನಿಗದಿಪಡಿಸಿ ಹೈಕೋರ್ಟ್‌(High Court of Karnataka) ಆದೇಶಿಸಿದೆ.

ಅಪಘಾತಕ್ಕೀಡಾಗಿದ್ದ ರಾಣೆಬೆನ್ನೂರಿನ(Ranibennur) ಬಸವರಾಜ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಜಿ. ಪಂಡಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿ, ರಸ್ತೆ ಅಪಘಾತ ಪ್ರಕರಣಗಳಲ್ಲಿ ಪರಿಹಾರವನ್ನು(Compensation) ನಿಗದಿಪಡಿಸುವಾಗ ಮಾನವೀಯ ಅಂಶಗಳನ್ನು ಹೆಚ್ಚಾಗಿ ಪರಿಗಣಿಸಬೇಕು ಎಂದು ಮೋಟಾರು ವಾಹನ ಅಪಘಾತ ನ್ಯಾಯಾಧಿಕರಣಕ್ಕೆ ಸಲಹೆ ನೀಡಿದೆ.

Karnataka High Court: ಮದುವೆಯಾಗುವ ಭರವಸೆ ಉಲ್ಲಂಘಿಸೋದು ವಂಚನೆ ಅಲ್ಲ!

ಬಸವರಾಜ ಅವರು 2011ರಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ರಸ್ತೆ ಬದಿ ನಡೆದು ಹೋಗುತ್ತಿದಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಜತೆಗೆ, ಆತನ ಮರ್ಮಾಂಗ ಶಾಶ್ವತ ವೈಕಲ್ಯಕ್ಕೆ ಒಳಗಾಯಿತು. ಆತನಿಗೆ ಲೈಂಗಿಕ ಜೀವನ ನಡೆಸಲು ಸಾಧ್ಯವಾಗದು ಎಂದು ವೈದ್ಯರು(Doctors ) ಪ್ರಮಾಣಪತ್ರ ನೀಡಿದ್ದರು.

ಇದರಿಂದ ಮೋಟಾರು ವಾಹನ ಅಪಘಾತ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದ ಬಸವರಾಜು 11 ಲಕ್ಷ ರು. ಪರಿಹಾರ ಕಲ್ಪಿಸಲು ಕೋರಿದ್ದರು. ಆದರೆ, ನ್ಯಾಯಾಧಿಕರಣ ಕೇವಲ 3.73 ಲಕ್ಷ ರು. ಪರಿಹಾರಕ್ಕೆ ಆದೇಶ ನೀಡಿತ್ತು. ಇದರಿಂದ ಬಸವರಾಜ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌, ಮೇಲ್ಮನವಿದಾರ ಕೇಳಿದ ಮೊತ್ತಕ್ಕಿಂತ ಹೆಚ್ಚು ಅಂದರೆ ಒಟ್ಟು 17.68 ಲಕ್ಷ ರು. ಪರಿಹಾರ ನೀಡುವಂತೆ ಲಾರಿಗೆ ವಿಮೆ ಸೌಲಭ್ಯ ಕಲ್ಪಿಸಿದ್ದ ವಿಮಾ ಕಂಪನಿಗೆ(Insurance Company) ಆದೇಶಿಸಿದೆ.

ಸರಿಪಡಿಸಲಾಗದ ನಷ್ಟ:

ಮೇಲ್ಮನವಿದಾರನಿಗೆ ಉಂಟಾಗಿರುವ ವೈಕಲ್ಯದಿಂದ ಮದುವೆಯಾಗುವ(Marriage) ಸಾಧ್ಯತೆ ಇಲ್ಲವಾಗಿದೆ. ವೈವಾಹಿಕ ಸುಖದಿಂದ ವಂಚಿತನಾಗುತ್ತಿದ್ದಾರೆ. ಒಂದೊಮ್ಮೆ ಮದುವೆಯಾದರೂ ಲೈಂಗಿಕ ತೃಪ್ತಿ ಅನುಭವಿಸಲಾರ ಹಾಗೂ ಸ್ವತಃ ಮಗುವನ್ನು ಹೊಂದಲಾರ. ಆಗಿರುವ ವೈಕಲ್ಯವನ್ನು ಯಾವ ರೀತಿಯೂ ಸರಿಪಡಿಸಲಾಗದು. ಜೀವನವಿಡಿ ಅನುಭವಿಸಲಿರುವ ಮಾನಸಿಕ ಯಾತನೆಗೆ ಆರ್ಥಿಕ ರೂಪದಲ್ಲಿ ಬೆಲೆ ಕಟ್ಟಲಾಗದು. ಹಾಗಾಗಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಕೋರ್ಟ್‌ ತೀರ್ಪು

- ಟ್ರಿಬ್ಯುನಲ್‌ ನೀಡಿದ್ದ 3.7 ಲಕ್ಷ ರು. ಪರಿಹಾರ ಹೆಚ್ಚಿಸಲು ಹೈಕೋರ್ಟ್‌ ಆದೇಶ
- ಅಪಘಾತ ಪರಿಹಾರ ನಿಗದಿ ವೇಳೆ ಮಾನವೀಯ ಅಂಶ ಪರಿಗಣಿಸಲು ಸೂಚನೆ
- ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಾಣೆಬೆನ್ನೂರಿನ ಬಸವರಾಜ
- ಇದರಿಂದಾಗಿ ಮರ್ಮಾಂಗ ವೈಕಲ್ಯಕ್ಕೆ ಒಳಗಾಗಿದ್ದ ವ್ಯಕ್ತಿ

ಪತ್ನಿ ವಿರುದ್ಧ ಸುಳ್ಳು ಆರೋಪ ಮಾಡಿದ ಪತಿಗೆ 50,000 ದಂಡ..!

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಮಗಳಿಗೆ ಚಿಕಿತ್ಸೆ(Treatment) ಕೊಡಿಸುತ್ತಾ ಆರೈಕೆ ಹಾಗೂ ಪೋಷಣೆ ಮಾಡುತ್ತಿದ್ದ ಪತ್ನಿ ವಿರುದ್ಧ ‘ಮಗಳ ಬಂಧನ’ ಆರೋಪ ಹೊರಿಸಿದ ಪತಿಗೆ ಜ.23 ರಂದು ಹೈಕೋರ್ಟ್‌ 50 ಸಾವಿರ ರು. ದಂಡ ವಿಧಿಸಿತ್ತು.

Dowry Case: ಹಲ್ಲೆಗೆ ಸಾಕ್ಷ್ಯ ಒದಗಿಸದ ಪತ್ನಿ: ಪತಿಗೆ ಸಿಕ್ತು ಬೇಲ್‌

ತನ್ನ ಮಗಳನ್ನು ಪತ್ನಿ ಬಂಧನದಲ್ಲಿಟ್ಟಿದ್ದು, ಜೀವ ಅಪಾಯದಲ್ಲಿದೆ ಎಂದು ಸುಳ್ಳು ಆರೋಪ ಮಾಡಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ ಬೆಂಗಳೂರಿನ(Bengaluru) ಕಾಡುಬೀಸನಹಳ್ಳಿ ನಿವಾಸಿ ಗೌರವ್‌ ರಾಜ್‌ ಜೈನ್‌ಗೆ ಹೈಕೋರ್ಟ್‌ ಚಾಟಿ ಬೀಸಿದೆ.

ಅರ್ಜಿದಾರನ ನಡೆ ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆಯಾಗಿದೆ. ನಿಷ್ಪ್ರಯೋಜಕ ಹಾಗೂ ದುರುದ್ದೇಶಪೂರಿತ ಅರ್ಜಿ ದಾಖಲಿಸುವುದನ್ನು ಕಠಿಣ ಕ್ರಮದ ಮೂಲಕ ಮೊಟಕುಗೊಳಿಸಬೇಕಿದೆ ಎಂದು ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟು, ಅರ್ಜಿದಾರ ದಂಡ(Fine) ಮೊತ್ತವನ್ನು ಒಂದು ತಿಂಗಳಲ್ಲಿ ಪೊಲೀಸ್‌ ಕಲ್ಯಾಣ ನಿಧಿಗೆ(Police Welfare Fund) ಪಾವತಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಜಿಲ್ಲಾಧಿಕಾರಿ ದಂಡ ಮೊತ್ತದ ವಸೂಲಿಗಾಗಿ ಅರ್ಜಿದಾರಿನಿಗೆ ಸೇರಿದ ಭೂಮಿ(Land) ಜಪ್ತಿ ಮಾಡಬಹುದು ಎಂದು ಆದೇಶಿಸಿದೆ.
 

click me!