* ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ
* ಕೊರೋನಾ ಏರಿಕೆಯಾದ ಪಾಸಿಟಿವ್ ಪ್ರಕರಣ
* 1639 ಜನರಿಗೆ ಸೋಂಕು ತಗುಲಿದ್ದು, 36 ಮಂದಿ
ಬೆಂಗಳೂರು, (ಜು.21): ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಇಂದು (ಬುಧವಾರ) 1639 ಜನರಿಗೆ ಸೋಂಕು ತಗುಲಿದ್ದು, 36 ಮಂದಿ ಮೃತಪಟ್ಟಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 28,88,341ಕ್ಕೆ ಏರಿಕೆಯಾಗಿದ್ರೆ, ಸಾವನ್ನಪ್ಪಿದವರ ಸಂಖ್ಯೆ 36262 ಎಂದು ರಾಜ್ಯ ಅರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕಾಲೇಜ್ ಆರಂಭಕ್ಕೆ ಮುಹೂರ್ತ ಫಿಕ್ಸ್: ವಿದ್ಯಾರ್ಥಿಗಳೇ ರೆಡಿಯಾಗಿ....!
ಇನ್ನು ಕಳೆದ 24 ಗಂಟೆಗಳಲ್ಲಿ 2214 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 36,262 ಸಾವನ್ನಪ್ಪಿದ್ದು, ಸದ್ಯ 25,645 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.07 ರಷ್ಟು ಇದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಹೊಸದಾಗಿ 419 ಜನರಿಗೆ ಸೋಂಕು ತಗುಲಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. 963 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 9495 ಸಕ್ರಿಯ ಪ್ರಕರಣಗಳು ಇವೆ.