ಕೊರೋನಾ ಕಾಲದಲ್ಲಿ ಜನರ ನೆರವಿಗೆ ಬಂದ ಇಶಾ ಫೌಂಡೇಷನ್, ಧನ್ಯವಾದ ಎಂದ ಸರ್ಕಾರ!

By Suvarna NewsFirst Published Jul 21, 2021, 12:38 PM IST
Highlights

* ಕೊರೋನಾದ ಎರಡನೇ ಅಲೆ ಗರಿಷ್ಠ ಮಟ್ಟ ತಲುಪಿದಾಗ ಜನ ಸಾಮಾನ್ಯರಿಗೆ ಇಶಾ ನೆರವು

* ಇಶಾ ಪ್ರತಿಷ್ಠಾನಕ್ಕೆ ಧನ್ಯವಾದ ಎಂದ ಕರ್ನಾಟಕ ಸರ್ಕಾರ

* ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ ಬಿಎಸ್‌ವೈ

ಬೆಂಗಳೂರು(ಜು.21): ಕೊರೋನಾದ ಎರಡನೇ ಅಲೆ ಗರಿಷ್ಠ ಮಟ್ಟ ತಲುಪಿದಾಗ, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಂದ ಜನಸಾಮಾನ್ಯರವರೆಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸಿದ್ದಕ್ಕಾಗಿ ಕರ್ನಾಟಕ ಸರ್ಕಾರ ಇಶಾ ಪ್ರತಿಷ್ಠಾನಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ. 

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಇಶಾ ಫೌಂಡೇಶನ್ ಸಂಸ್ಥಾಪಕ ಆಧ್ಯಾತ್ಮಿಕ ಗುರು ಸದ್ಗುರುಗೆ ಪತ್ರ ಬರೆದು ಕಳೆದ 75 ದಿನಗಳಲ್ಲಿ ಇಶಾ ಸಂಸ್ಥೆ  ಕೊಟ್ಟ ಸಹಕಾರವನ್ನು ಶ್ಲಾಘಿಸಿದ್ದಾರೆ ಮತ್ತು ಧನ್ಯವಾದಗಳನ್ನು ತಿಳಿಸಿದ್ದಾರೆ.

ಸಿಎಂ ಪತ್ರವನ್ನು ಟ್ವೀಟ್ ಮಾಡಿದ ಇಶಾ ಫೌಂಡೇಶನ್ 

is grateful for the on-ground collaboration & support from the Government of Karnataka in reaching vulnerable populations with essential supplies. We salute frontline healthcare workers in the state. pic.twitter.com/vfCbGmVys6

— Isha Foundation (@ishafoundation)

ಸಿಎಂ ಬರೆದ ಈ ಪತ್ರವನ್ನು ಇಶಾ ಫೌಂಡೇಶನ್ ಟ್ವೀಟ್ ಮಾಡಿ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸಿದ್ದಾರೆ. ಅಗತ್ಯ ಸಾಮಗ್ರಿಗಳೊಂದಿಗೆ ಅಗತ್ಯವಿರುವವರನ್ನು ತಲುಪಲು ಪ್ರತಿಷ್ಠಾನಕ್ಕೆ ಸಹಾಯ ಮಾಡಿದ ಕರ್ನಾಟಕ ಸರ್ಕಾರದ ಬೆಂಬಲಕ್ಕೆ ಕೃತಜ್ಞರಾಗಿದ್ದೇವೆ ಎಂದು ಪ್ರತಿಷ್ಠಾನ ತಿಳಿಸಿದೆ. ಇದೇ ವೇಳೆ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೂ ಧನ್ಯವಾದ ತಿಳಿಸಿದೆ. 

click me!