ಸೋಂಕು ಇಳಿದರೂ ಸಾವು ಇಳಿಯುತ್ತಿಲ್ಲ : ಮರಣ ದರ ಹೆಚ್ಚಳಕ್ಕೆ ಕಾರಣ ಏನು..?

By Kannadaprabha NewsFirst Published Jul 21, 2021, 9:54 AM IST
Highlights
  • ರಾಜ್ಯದಲ್ಲಿ ಕೋವಿಡ್ 19ರ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿದ್ದರೂ ಸಾವಿನ ಪ್ರಮಾಣ ಮಾತ್ರ ನಿರೀಕ್ಷಿತ ವೇಗದಲ್ಲಿ ಕುಸಿಯುತ್ತಿಲ್ಲ
  • ಮೊದಲ  ಅಲೆಯಲ್ಲಿ 1500 ರಿಂದ 2000 ಸೋಂಕು ವರದಿಯಾಗುತ್ತಿದ್ದ ಮೇಲೆ ದಿನಕ್ಕೆ 15 ರಿಂದ 20 ಸಾವು ಸಂಭವಿಸುತ್ತಿತ್ತು
  • ಆದರೆ ಈಗ ಪ್ರತಿದಿನ 45 ರಿಂದ  50 ಮಂದಿ ಮರಣ ಹೊಂದುತ್ತಿದ್ದಾರೆ.

 ಬೆಂಗಳೂರು (ಜು.21): ರಾಜ್ಯದಲ್ಲಿ ಕೋವಿಡ್ 19ರ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿದ್ದರೂ ಸಾವಿನ ಪ್ರಮಾಣ ಮಾತ್ರ ನಿರೀಕ್ಷಿತ ವೇಗದಲ್ಲಿ ಕುಸಿಯುತ್ತಿಲ್ಲ. ಮೊದಲ  ಅಲೆಯಲ್ಲಿ 1500 ರಿಂದ 2000 ಸೋಂಕು ವರದಿಯಾಗುತ್ತಿದ್ದ ಮೇಲೆ ದಿನಕ್ಕೆ 15 ರಿಂದ 20 ಸಾವು ಸಂಭವಿಸುತ್ತಿತ್ತು. ಆದರೆ ಈಗ 45 ರಿಂದ  50 ಮಂದಿ ಮರಣ ಹೊಂದುತ್ತಿದ್ದಾರೆ. 

ಮೊದಲ ಅಲೆಯಲ್ಲಿ ಸೆಪ್ಟೆಂಬರ್ ಅಕ್ಟೋಬರಲ್ಲಿ 9 ಸಾವಿರದಿಂದ 10 ಸಾವಿರ ಪ್ರಕರಣ ವರದಿಯಾಗಿ ಸೋಂಕು ಹೆಚ್ಚು ಹೆಚ್ಚು ಏರಿತ್ತು. 

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಜು.20ರ ಅಂಕಿ-ಸಂಖ್ಯೆಯ ವಿವರ

ಬಳಿಕ ಇಳಿಕೆ ಗತಿಯಲ್ಲಿ ಸಾಗಿ ನವೆಂಬರ್ ಆರಂಭದಿಂದ 2 ಸಾವಿರದ ಆಸುಪಾಸಿನಲ್ಲಿ ಪ್ರಕರಣ ವರದಿಯಾಗುತ್ತಿತ್ತು. ದೈನಂದಿನ ಸಾವಿನ ಸಂಖ್ಯೆ 20ರ ಆಸುಪಾಸಿಗೆ ಕುಸಿದಿತ್ತು. ಮರಣದ ದರ ಶೆ.1ಕ್ಕಿಂತ ಕೆಳಗಿಳಿದಿತ್ತು. ಆದರೆ ಎರಡನೇ ಅಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆ ಆಗಿದ್ದರೂ ಮರಣ ಪ್ರಮಾಣ ಮತ್ತು ದರ ಇಳಿಕೆ ಆಗುತ್ತಿಲ್ಲ. 

ಸದ್ಯ ಶೇ.2.50ರ ಆಜು ಬಾಜಿನಲ್ಲಿ ಮರಣ ದರ ದಾಖಲಾಗುತ್ತಿರುವುದು ಆತಂಕಕಾರಿಯಾಗಿದೆ. 

ಕೊಪ್ಪಳ: ಕೋವಿಡ್ ಕೇರ್ ಸೆಂಟರ್‌ನಲ್ಲೇ SSLC ಪರೀಕ್ಷೆ ಬರೆದ ಸೋಂಕಿತ ವಿದ್ಯಾರ್ಥಿ..!

ಕೋವಿಡ್‌ನ ದೈನಂದಿನ ಪ್ರಕರಣಗಳ ಸಂಖ್ಯೆ ಕಳೆದ ಒಂದು ತಿಂಗಳಿನಿಂದ 5 ಸಾವಿರ ದಾಟಿಲ್ಲ. ಆದರೆ ಜೂನ್ 15ರಿಂದ ಶೇ.2ರಷ್ಟು ದಾಖಲಾದ ಮರಣ ದರ ಒಂದು ತಿಂಗಳು ದಾಟಿದರೂ ಕೂಡ ಕಡಿಮೆಯಾಗಿಲ್ಲ. ಈ ಅವಧಿಯಲ್ಲಿ ಎರಡು ಬಾರಿ ಶೇ.4ಕ್ಕಿಂತ ಹೆಚ್ಚು ಮರಣ ದರ  ಕೂಡ ವರದಿಯಾಗಿದೆ. 

ಬಾಗಲಕೊಟೆ, ಹಾವೇರಿ, ರಾಯಚೂರಿನಲ್ಲಿ ಅಧಿಕ : ಆರೋಗ್ಯ ಇಲಾಖೆ ಶನಿವಾರದ ಮಾಹಿತಿಯಂತೆ ಕಳೆದ ಒಂದು ವಾರದಲ್ಲಿ ಬೀದರ್  ಮತ್ತು ಯಾದಗಿರಿಯಲ್ಲಿ ಶೂನ್ಯ ಮರಣ ದರ ವರದಿಯಾಗಿದೆ. ಉಳಿದಂತೆ ಉಡುಪಿ, ಚಿತ್ರದುರ್ಗ ಕೊಡಗಿನಲ್ಲಿ ಶೆ.1 ಕ್ಕಿಂತ ಕಡಿಮೆ ಮರಣ ದರ ಇದೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಪ್ರಕಾರ ಸೋಂಕಿತರಲ್ಲಿ ಅನೇಕರು ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೇ 30ಕ್ಕೂ ಹೆಚ್ಚು ರೋಗಿಗಳು ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘ ಕಾಲದ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಶೇ.25 ಮಂದಿ ಮರಣ ಹೊಂದುತ್ತಿದ್ದಾರೆ ಎಂದರು. 

click me!