
ಬೆಂಗಳೂರು(ನ.27): ರಾಜ್ಯದಲ್ಲಿ ಗುರುವಾರ 1,505 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. 1,067 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸತತ ಎರಡನೇ ದಿನ ಹೊಸ ಸೋಂಕಿನ ಪ್ರಕರಣಗಳು ಗುಣಮುಖರ ಸಂಖ್ಯೆಗಿಂತ ಹೆಚ್ಚು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ 25 ಸಾವಿರದ ಗಡಿ ದಾಟಿದೆ. ಪ್ರಸಕ್ತ 25,316 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ 409 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 8.79 ಲಕ್ಷ ತಲುಪಿದ್ದು. ಈ ಪೈಕಿ 8.42 ಲಕ್ಷ ಮಂದಿ ಸೋಂಕನ್ನು ಜಯಿಸಿದ್ದಾರೆ. ಈವರೆಗೆ ಒಟ್ಟು 11,726 ಮಂದಿ ಈ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ 1.20 ಲಕ್ಷ ಪರೀಕ್ಷೆ ನಡೆದಿದೆ. ಈವರೆಗೆ ಒಟ್ಟು 1.06 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
ಬೆಂಗಳೂರಲ್ಲಿ ಕೊರೋನಾಗೆ ಬಲಿ ಆದವರ ಸಂಖ್ಯೆ 4100ಕ್ಕೆ ಏರಿಕೆ
ಬೆಂಗಳೂರು ನಗರ ಜಿಲ್ಲೆಯಲ್ಲಿ 7, ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 844 ಮಂದಿಯಲ್ಲಿ ಸೋಂಕು ಧೃಢವಾಗಿದೆ. ಉಳಿದಂತೆ ಬಾಗಲಕೋಟೆ 7, ಬಳ್ಳಾರಿ 13, ಬೆಳಗಾವಿ 31, ಬೆಂಗಳೂರು ಗ್ರಾಮಾಂತರ 34, ಬೀದರ್ 6, ಚಾಮರಾಜ ನಗರ 8, ಚಿಕ್ಕಬಳ್ಳಾಪುರ 29, ಚಿಕ್ಕಮಗಳೂರು 33, ಚಿತ್ರದುರ್ಗ 12, ದಕ್ಷಿಣ ಕನ್ನಡ 57, ದಾವಣಗೆರೆ 22, ಧಾರವಾಡ 20, ಗದಗ 22, ಹಾಸನ 51, ಹಾವೇರಿ 9, ಕಲಬುರಗಿ 18, ಕೊಡಗು 15, ಕೋಲಾರ 9, ಕೊಪ್ಪಳ 6, ಮಂಡ್ಯ 24, ಮೈಸೂರು 101, ರಾಯಚೂರು 10, ರಾಮನಗರ 8, ಶಿವಮೊಗ್ಗ 18, ತುಮಕೂರು 38, ಉಡುಪಿ 26, ಉತ್ತರ ಕನ್ನಡ 18, ವಿಜಯಪುರ 10 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 6 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ