
ಬೆಂಗಳೂರು(ನ.27): ಏರ್ ಇಂಡಿಯಾವು ಭಾರತದ ಸಿಲಿಕಾನ್ ಕಣಿವೆ ಬೆಂಗಳೂರು ಮತ್ತು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ನಡುವೆ ನೇರ ತಡೆ ರಹಿತ ವಿಮಾನ ಸೇವೆಯನ್ನು 2021ರ ಜನವರಿ 11ರಿಂದ ಪ್ರಾರಂಭಿಸಲಿದೆ. ಈ ವಿಮಾನದ ಟಿಕೆಟ್ ಕಾಯ್ದಿರಿಸಲು ಈಗಿನಿಂದಲೇ ಅವಕಾಶ ಕಲ್ಪಿಸಲಾಗಿದೆ.
ಉಭಯ ನಗರಗಳ ನಡುವೆ ವಾರಕ್ಕೆ ಎರಡು ಬಾರಿ ನೇರ ವಿಮಾನ ಸಂಪರ್ಕ ಇರಲಿದೆ. ಏರ್ ಇಂಡಿಯಾವು 228 ಆಸನ ಸಾಮರ್ಥ್ಯದ ಬೋಯಿಂಗ್ 777-200 ಎಲ್‌ಆರ್ ವಿಮಾನವನ್ನು ಈ ಸೇವೆಗೆ ಬಳಸಿಕೊಳ್ಳಲಿದೆ.
ಸ್ಪೆಲ್ಲಿಂಗ್ ಮಿಸ್ಟೇಕ್ : ದುಬೈ ವಿಮಾನ ಪ್ರಯಾಣವೇ ರದ್ದು
ಪಯಣದ ಅವಧಿ 16 ಗಂಟೆಗಿಂತ ಹೆಚ್ಚಿರಲಿದ್ದು, ಇದು ಏರ್ ಇಂಡಿಯಾದ ಅತಿ ದೀರ್ಘ ಮತ್ತು ಅತಿ ದೂರದ ಸೇವೆ ಎಂಬ ದಾಖಲೆ ನಿರ್ಮಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ