Corona Crisis: ಕರ್ನಾಟಕದಲ್ಲಿ 1268 ಕೋವಿಡ್‌ ಕೇಸ್‌ ಪತ್ತೆ: 6 ಸಾವು

By Govindaraj S  |  First Published Aug 23, 2022, 4:45 AM IST

ರಾಜ್ಯದಲ್ಲಿ ಸೋಮವಾರ 1268 ಕೊರೋನಾ ಸೋಂಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1229 ಮಂದಿ ಗುಣಮುಖರಾಗಿದ್ದಾರೆ. ಆರು ಸೋಂಕಿತರು ಸಾವಿಗೀಡಾಗಿದ್ದಾರೆ. 18 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6.7 ರಷ್ಟು ದಾಖಲಾಗಿದೆ.


ಬೆಂಗಳೂರು (ಆ.23): ರಾಜ್ಯದಲ್ಲಿ ಸೋಮವಾರ 1268 ಕೊರೋನಾ ಸೋಂಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1229 ಮಂದಿ ಗುಣಮುಖರಾಗಿದ್ದಾರೆ. ಆರು ಸೋಂಕಿತರು ಸಾವಿಗೀಡಾಗಿದ್ದಾರೆ. 18 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6.7 ರಷ್ಟು ದಾಖಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಭಾನುವಾರ ವರದಿಯಾಗದ ಪ್ರಕರಣಗಳನ್ನು ಸೋಮವಾರ ಪಟ್ಟಿಗೆ ಸೇರ್ಪಡೆ ಮಾಡಿರುವುದರಿಂದ ಹೊಸ ಪ್ರಕರಣಗಳು 548 ಏರಿಕೆಯಾಗಿವೆ. (ಭಾನುವಾರ 720, ಎರಡು ಸಾವು).

ಉತ್ತರ ಕನ್ನಡದಲ್ಲಿ 17 ವರ್ಷದ ಬಾಲಕ, ದಾವಣಗೆರೆಯಲ್ಲಿ 22 ವರ್ಷದ ಬಾಲಕಿ, ಬಳ್ಳಾರಿ, ಚಾಮರಾಜನಗರ, ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ತಲಾ ಒಬ್ಬ ವೃದ್ಧರು, ಜಿಲ್ಲೆಯಲ್ಲಿ ಇಬ್ಬರು ದಕ್ಷಿಣ ಕನ್ನಡದಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 10541ಕ್ಕೆ ಏರಿಕೆಯಾಗಿವೆ. ಈ ಪೈಕಿ 60 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಐಸಿಯು, 5 ಮಂದಿ ಆಕ್ಸಿಜನ್‌, 50 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 10,479 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

Tap to resize

Latest Videos

undefined

Corona Crisis: ಕೋವಿಡ್‌ ದಾಖಲಿಗೆ ತಾಂತ್ರಿಕ ಸಮಸ್ಯೆ: ಕಡಿಮೆ ಕೇಸ್‌ ಪತ್ತೆ

ಬೆಂಗಳೂರಿನ 72 ವಾರ್ಡಲ್ಲಿ 10+ ಕೇಸ್‌: ನಗರದಲ್ಲಿ ಸೋಮವಾರ 931 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ.6.12 ದಾಖಲಾಗಿದೆ. 719 ಜನರು ಗುಣಮುಖರಾಗಿದ್ದು, ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ನಗರದಲ್ಲಿ ಸದ್ಯ 7,463 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 65 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 4 ಎಚ್‌ಡಿಯು ಮತ್ತು 42 ಮಂದಿ ಸಾಮಾನ್ಯ ವಾರ್ಡ್‌ಗೆ ದಾಖಲಾಗಿದ್ದಾರೆ. ಉಳಿದವರು ಮನೆಗಳಲ್ಲಿ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

1558 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. 41 ಮಂದಿ ಮೊದಲ ಡೋಸ್‌, 73 ಮಂದಿ ಎರಡನೇ ಡೋಸ್‌ ಮತ್ತು 1444 ಮಂದಿ ಬೂಸ್ಟರ್‌ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 10 ಕ್ಲಸ್ಟರ್‌ಗಳಿದ್ದು, 5ಕ್ಕಿಂತ ಹೆಚ್ಚು ಸೋಂಕಿತರಿರುವ ಯಾವುದೇ ಕ್ಲಸ್ಟರ್‌ಗಳು ಇಲ್ಲ. ಬಿಬಿಎಂಪಿಯ 72 ವಾರ್ಡ್‌ಗಳಲ್ಲಿ 10ಕ್ಕಿಂತ ಕಡಿಮೆ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಒಟ್ಟು 10,493 ಮಂದಿ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.0.40ರಷ್ಟಿದ್ದು ಸಾವಿನ ದರ ಶೇ.0.03 ಇದೆ. ಸೋಂಕಿನಿಂದ ಗುಣಮುಖರಾಗುತ್ತಿರುವ ದರ 98.69ರಷ್ಟಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ದ.ಕ.ದಲ್ಲಿ 8 ಕೊರೋನಾ ಪ್ರಕರಣ: ಜಿಲ್ಲೆಯಲ್ಲಿ ಸೋಮವಾರ 8 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 12 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 76 ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ 1,36,536 ಮಂದಿ ಸೋಂಕಿತರಾಗಿದ್ದು, ಅವರಲ್ಲಿ 1,34,601 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1859 ಮಂದಿ ಮೃತಪಟ್ಟಿದ್ದಾಾರೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ ತಿಳಿಸಿದೆ.

ಸಿಲಿಕಾನ್‌ ಸಿಟಿಯಲ್ಲಿ ಮತ್ತಷ್ಟು ಕುಸಿದ ಕೊರೋನಾ ಸೋಂಕು ಸಂಖ್ಯೆ: 1 ಸಾವು

ಎಲ್ಲಿ ಎಷ್ಟು ಕೇಸ್‌: ಸೋಮವಾರದ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 931 ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಮೈಸೂರು 100, ಚಿಕ್ಕಮಗಳೂರು 29, ರಾಯಚೂರು 28, ಮಂಡ್ಯ 27, ಬಳ್ಳಾರಿ 25 ಮಂದಿಗೆ ಸೋಂಕು ತಗುಲಿದೆ. 17 ಜಿಲ್ಲೆಗಳಲ್ಲಿ ಬೆರಳೆಣಿಕೆ, ಗದಗ ಮತ್ತು ಕೊಪ್ಪಳದಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

click me!