ಕರ್ನಾಟಕದಲ್ಲಿ 1249 ಕೊರೋನಾ ಪ್ರಕರಣ ಪತ್ತೆ

By Kannadaprabha NewsFirst Published Jun 30, 2022, 5:15 AM IST
Highlights

*  ಜೂನ್‌ 23 ರಿಂದ ಜೂನ್‌ 29ರವರೆಗೆ ನೋಂದಣಿಯಾಗದ ಪ್ರಕರಣಗಳು
*   ಬೆಂಗಳೂರು ನಗರ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿ
*  ಸಕ್ರಿಯ ಪ್ರಕರಣಗಳ ಸಂಖ್ಯೆ 5,707 ಕ್ಕೇರಿಕೆ

ಬೆಂಗಳೂರು(ಜೂ.30):  ರಾಜ್ಯದಲ್ಲಿ ಬುಧವಾರ 1,249 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. ಜೂನ್‌ 23 ರಿಂದ ಜೂನ್‌ 29ರವರೆಗೆ ನೋಂದಣಿಯಾಗದ ಪ್ರಕರಣಗಳನ್ನು ಸೇರಿಸಿ ವರದಿ ನೀಡಲಾಗಿದ್ದು, ಹೀಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.

ಬೆಂಗಳೂರು ನಗರ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,707ಕ್ಕೆ ಜಿಗಿದಿದೆ. 25,753 ಕೋವಿಡ್‌ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ. 4.84ಕ್ಕೆ ತಲುಪಿದೆ.

CORONA CRISIS: ಕೋವಿಡ್‌ ಸೋಂಕು ಪತ್ತೆಯಾದರೆ ಸೀಲ್‌ಡೌನ್‌ ಇಲ್ಲ

ಬೆಂಗಳೂರು ನಗರದಲ್ಲಿ 1,109, ಮೈಸೂರು 31, ಧಾರವಾಡ 13, ಬಳ್ಳಾರಿ ಜಿಲ್ಲೆಯಲ್ಲಿ 12 ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಈವರೆಗೆ 39.68 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 40,075 ಮಂದಿ ಮೃತ ಪಟ್ಟಿದ್ದಾರೆ. 39.22 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

2.33 ಲಕ್ಷ ಮಂದಿಗೆ ಲಸಿಕೆ:

ರಾಜ್ಯದಲ್ಲಿ ಬುಧವಾರ 2.33 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 21,486 ಮಂದಿ ಮೊದಲ ಡೋಸ್‌, 1.02 ಲಕ್ಷ ಮಂದಿ ಎರಡನೇ ಡೋಸ್‌ ಮತ್ತು 1.12 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್‌ ಪಡೆದಿದ್ದಾರೆ. ಈವರೆಗೆ ರಾಜ್ಯದಲ್ಲಿ 11.19 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

click me!