ಕರ್ನಾಟಕದಲ್ಲಿ ಕೊರೋನಾ ಎಷ್ಟಿದೆ? ಇಲ್ಲಿದೆ ಅಂಕಿ-ಸಂಖ್ಯೆ

By Suvarna NewsFirst Published Aug 25, 2021, 7:41 PM IST
Highlights

* ಕರ್ನಾಟಕದ ಕೊರೋನಾ ಅಂಕಿ-ಸಂಖ್ಯೆ
* ರಾಜ್ಯದಲ್ಲಿಂದು 1224 ಹೊಸ ಪ್ರಕರಣ ಪತ್ತೆ, 1668 ಸೋಂಕಿತರು ಗುಣಮುಖ
* ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ

ಬೆಂಗಳೂರು, (ಆ.25): ರಾಜ್ಯದಲ್ಲಿ ಇಂದು (ಆ.25) ಹೊಸದಾಗಿ 1224 ಜನರಿಗೆ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 22 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು 1668 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,42,250 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,85,700 ಜನ ಗುಣಮುಖರಾಗಿದ್ದಾರೆ. 37,206 ಜನ ಮೃತಪಟ್ಟಿದ್ದು, ಸದ್ಯ 19,318 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.62 ರಷ್ಟು ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗಣೇಶಹಬ್ಬ ಅಷ್ಟೇ ಅಲ್ಲ, ಯಾವುದೇ ಹಬ್ಬ ಮಾಡಿದ್ರೂ ಸಮಸ್ಯೆ: ಸರ್ಕಾರಕ್ಕೆ ದೇವಿ ಶೆಟ್ಟಿ ಎಚ್ಚರಿಕೆ

ಇನ್ನು ರಾಜಧಾನಿ ಬೆಂಗಳೂರಿನಲ್ಲಿ 309 ಜನರಿಗೆ ಸೋಂಕು ತಗುಲಿದ್ದು, 657 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3 ಜನ ಮೃತಪಟ್ಟಿದ್ದಾರೆ. 7231 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಮಾಹಿತಿ
ಬೆಂಗಳೂರು ನಗರ 309, ದಕ್ಷಿಣಕನ್ನಡ 217, ಹಾಸನ 95, ಕೊಡಗು 41, ಮಂಡ್ಯ 38, ಮೈಸೂರು 102, ಶಿವಮೊಗ್ಗ 42, ತುಮಕೂರು 52, ಉಡುಪಿ 130, ಉತ್ತರಕನ್ನಡ 48, ಬಾಗಲಕೋಟೆ 2, ಬಳ್ಳಾರಿ 3, ಬೀದರ್ 0, ಚಾಮರಾಜನಗರ 6, ಚಿಕ್ಕಬಳ್ಳಾಪುರ 2, ಗದಗ 0, ಹಾವೇರಿ 3, ಕೊಪ್ಪಳ 2, ರಾಯಚೂರು 1, ರಾಮನಗರ 1, ವಿಜಯಪುರ 3, ಯಾದಗಿರಿ 8 ಕೇಸ್ ಪತ್ತೆಯಾಗಿವೆ. 

click me!