ಪಂಚಮಸಾಲಿ ಮೀಸಲಾತಿಗಾಗಿ ಬೃಹತ್ ಅಭಿಯಾನಕ್ಕೆ ಸಜ್ಜು

By Suvarna News  |  First Published Aug 25, 2021, 1:43 PM IST
  • ಪಂಚಮಸಾಲಿ ಲಿಂಗಾಯತ ಸಮುದಾಯವನ್ನ 2A ಗೆ ಸೇರಿಸಲು ನಾಳೆಯಿಂದ (ಆ.26) ಬೃಹತ್ ಅಭಿಯಾನ
  • ಬೃಹತ್ ಅಭಿಯಾನದ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಬೆಂಗಳೂರು (ಆ.25):  ಪಂಚಮಸಾಲಿ ಲಿಂಗಾಯತ ಸಮುದಾಯವನ್ನ 2A ಗೆ ಸೇರಿಸಲು ನಾಳೆಯಿಂದ (ಆ.26) ಬೃಹತ್ ಅಭಿಯಾನ ಆರಂಭಿಸುತ್ತಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬೆಂಗಳೂರಿನಲ್ಲಿಂದು  ಸುವರ್ಣ ನ್ಯೂಸ್.ಕಾಂ ಜೊತೆಗೆ ಮಾತನಾಡಿದ ಸ್ವಾಮೀಜಿ ಚಾಮರಾಜನಗರದ ಮಲೆಮಹಾದೇಶ್ವರ ದೇವಸ್ಥಾನದಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಯಲಿದೆ. ಹೋರಾಟಕ್ಕೆ ಪಂಚಮಸಾಲಿ ಸಮುದಾಯದ ರಾಜಕೀಯ ಎಲ್ಲಾ ನಾಯಕರ ಬೆಂಬಲ ನಮಗಿದೆ ಎಂದರು.

Latest Videos

undefined

ಪ್ರಬಲ ಜಾತಿಗಳು 2ಎಗೆ ಬೇಡ: ಸಿಎಂ ಬೊಮ್ಮಾಯಿಗೆ ಮನವಿ

ಲಿಂಗಾಯತ ಎಲ್ಲಾ ಒಳಪಂಗಡಗಳನ್ನು ಕೇಂದ್ರದ ಒಬಿಸಿಗೆ ಸೇರಿಸಲು ಬೇಡಿಕೆ ಇಟ್ಟಿದ್ದೇವೆ. ಪಂಚಮಸಾಲಿ ಸಮುದಾಯದವರು ಸಿಎಂ ಆಗಲಿ ಎನ್ನುವ ಕಾರಣಕ್ಕೆ ನಾವು ಪಾದಯಾತ್ರೆ ಮಾಡಿರಲಿಲ್ಲ. ಪಂಚಮಸಾಲಿ ಸಮುದಾಯದವರಿಗೆ ಸಿಗಬೇಕಾದ ಸಿಎಂ ಸ್ಥಾನ ಯಡಿಯೂರಪ್ಪ ಅವರಿಂದ ತಪ್ಪಿತು. ಆದರೂ ಯಡಿಯೂರಪ್ಪ ಅವರ ಮೇಲೆ ನಮಗೆ ಬೇಸರವಿಲ್ಲ. ಪಂಚಾಮಸಾಲಿ ನಾಯಕರಿಗೆ ಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕಿಂತ ನಮ್ಮ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಕೊಡಿ ಎಂದು ಕೇಳುತ್ತೇವೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿಶ್ವಾಸವಿದೆ. ಬಸವರಾಜ್ ಬೊಮ್ಮಾಯಿ ಅವರ ತಂದೆ ಎಸ್.ಆರ್ ಬೊಮ್ಮಾಯಿ ಅವರು ಲಿಂಗಾಯತರನ್ನ OBC 3B ಗೆ ಸೇರಿಸಿದ್ದರು. ಈಗ ಅವರ ಮಗ ಬಸವರಾಜ್ ಬೊಮ್ಮಾಯಿ ಪಂಚಮಸಾಲಿ, ಗೌಡ ಲಿಂಗಾಯತ, ಮಲೆಗೌಡರು, ದೀಕ್ಷ ಲಿಂಗಾಯತರನ್ನ 2A ಗೆ ಸೇರಿಸುವ ಕೆಲಸ ಮಾಡಲಿ. ಈ ನಿಟ್ಟಿನಲ್ಲಿ ನಾಳೆಯಿಂದ ಅಕ್ಟೋಬರ್ 1 ರ ವರೆಗೆ ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ. ಮೀಸಲಾತಿಗಾಗಿ ಪಾದಯಾತ್ರೆ ಮಾಡಿ ಪಂಚಮಸಾಲಿ ಶಕ್ತಿ ತೋರಿಸಿದ್ದೇವೆ. ಅಂದು ಸರ್ಕಾರ ಕೊಟ್ಟ ಭರವಸೆಯನ್ನ ಮತ್ತೊಮ್ಮೆ ನೆನಪಿಸಲು ನಾಳೆಯಿಂದ ಅಭಿಯಾನ ಆರಂಭಿಸುತ್ತಿದ್ದೇವೆ ಎಂದರು.

click me!