* ಕರ್ನಾಟಕದ ಕೊರೋನಾ ಅಂಕಿ-ಸಂಖ್ಯೆ
*ಹೊಸದಾಗಿ 1,151 ಜನರಿಗೆ ಕೊರೋನಾ, 10 ಬಲಿ
* ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ
ಬೆಂಗಳೂರು, (ಆ.23): ಕರ್ನಾಟಕ ರಾಜ್ಯದಲ್ಲಿ ಇಂದು (ಆ.23) ಹೊಸದಾಗಿ 1,151 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 10 ಜನರು ಸಾವನ್ನಪ್ಪಿದ್ದಾರೆ.
ಈ ಮೂಲಕ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,39,767 ಕ್ಕೆ ಏರಿಕೆಯಾಗಿದ್ರೆ, ಕೊರೊನಾದಿಂದ 37,155 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 28,82,331 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 20,255 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
undefined
3ನೇ ಅಲೆ ಹೊಡೆತ ತಪ್ಪಿಸಲು ಲಸಿಕೆ ಅಭಿಯಾನಕ್ಕೆ ಒತ್ತು, 58.25 ಕೋಟಿ ಮೈಲುಗಲ್ಲು ದಾಟಿತು ವ್ಯಾಕ್ಸಿನ್!
ಬೆಂಗಳೂರಿನಲ್ಲಿ ಸೋಮವಾರ ಒಂದೇ ದಿನ 270 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಇನ್ನು ಸಂತಸ ಸಂಗತಿ ಅಂದ್ರೆ ರಾಜ್ಯ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಇಂದು ಕೊರೋನಾ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ. ನಗರದಲ್ಲಿ ಕೊರೋನಾದಿಂದ ಈವರೆಗೆ 15,959 ಜನ ಬಲಿಯಾಗಿದ್ದು, ಬೆಂಗಳೂರಲ್ಲಿ 7,669 ಕೊರೋನಾ ಸೋಂಕು ಸಕ್ರಿಯವಾಗಿದೆ.
ರಾಜ್ಯದಲ್ಲಿ ಒಟ್ಟು 1,06,364 ಕೊರೊನಾ ಟೆಸ್ಟ್ ಮಾಡಲಾಗಿದೆ. ಕರ್ನಾಟಕದ ಕೊರೊನಾ ಪಾಸಿಟಿವಿಟಿ ದರ ಶೇಕಡಾ 1.08 ಇದೆ. ಕೊರೊನಾದಿಂದ ಮೃತಪಟ್ಟವರ ಪ್ರಮಾಣ ಶೇಕಡಾ 0.86 ಇದೆ.
ಫಸ್ಟ್ ಟೈಂ ಬೆಂಗಳೂರಿನಲ್ಲಿ ಶೂನ್ಯ ಮರಣ ಪ್ರಕರಣ
ಹೌದು..ಕೊರೊನಾ ಎರಡನೇ ಅಲೆಯಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಾವು ದಾಖಲಾಗಿಲ್ಲ.ಕೊರೋನಾ ಹಾಟ್‌ಸ್ಪಾಟ್ ಆಗಿದ್ದ ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಬೀದಿ ಬೀದಿಗಳಲ್ಲಿ ಹೆಣಗಳು ಬಿದ್ದಿದ್ದವು. ಆದ್ರೆ, ಈಗ ಕೊರೋನಾದಿಂದ ನಗರದಲ್ಲಿ ಯಾರೂ ಸಾವನ್ನಪ್ಪಿಲ್ಲ ಎನ್ನುವುದು ಖುಷಿಯ ವಿಚಾರವಾಗಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ
ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 270, ಬೀದರ್ 0, ಚಾಮರಾಜನಗರ 5, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 42, ಚಿತ್ರದುರ್ಗ 18, ದಕ್ಷಿಣ ಕನ್ನಡ 236, ದಾವಣಗೆರೆ 1, ಧಾರವಾಡ 0, ಗದಗ 3, ಹಾಸನ 115, ಹಾವೇರಿ 1, ಕಲಬುರಗಿ 17, ಕೊಡಗು 54, ಕೋಲಾರ 7, ಕೊಪ್ಪಳ 5, ಮಂಡ್ಯ 32, ಮೈಸೂರು 76, ರಾಯಚೂರು 0, ರಾಮನಗರ 1, ಶಿವಮೊಗ್ಗ 8, ತುಮಕೂರು 44, ಉಡುಪಿ 137, ಉತ್ತರ ಕನ್ನಡ 42, ವಿಜಯಪುರ 2, ಯಾದಗಿರಿ 5.