* ಕೋವಿಡ್ ಸೋಂಕು ಗೆದ್ದ 110 ವರ್ಷದ ಹಿರಿಯಜ್ಜಿ!
* 12 ದಿನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್
* ರಾಜ್ಯದಲ್ಲಿ ಗುಣಮುಖರಾದ ಅತಿ ಹಿರಿಯ ವ್ಯಕ್ತಿ
ದೇವನಹಳ್ಳಿ(ಜೂ.03): ಕೊರೋನಾ ಸೋಂಕಿಗೆ ತುತ್ತಾದ ಯುವಕರು ಸಾವಿಗೀಡಾದ ಮನಕಲಕುವ ಪ್ರಕರಣಗಳು ಸಾಕಷ್ಟುವರದಿಯಾದ ಬೆನ್ನಲ್ಲೇ, 110 ವರ್ಷದ ವೃದ್ಧೆಯೊಬ್ಬರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗುವ ಮೂಲಕ ಇತರರಿಗೆ ಆಶಾಭಾವನೆ ಮೂಡಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗ್ರಾಮದ ಅಕ್ಕಯ್ಯಮ್ಮ ಅವರು ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡು, ಸರ್ಕಾರಿ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಿದ್ದಾರೆ. ತನ್ಮೂಲಕ ಸೋಂಕಿನಿಂದ ಗುಣಮುಖರಾದ ರಾಜ್ಯದ ಮತ್ತೊಬ್ಬ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
undefined
ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!
‘ವೈದ್ಯರ ನಡೆ ಹಳ್ಳಿ ಕಡೆಗೆ’ ಯೋಜನೆಯಡಿ ಬುಳ್ಳಹಳ್ಳಿ ಗ್ರಾಮಕ್ಕೆ ವೈದ್ಯರು ಭೇಟಿ ನೀಡಿ ತಪಾಸಣೆ ನಡೆಸಿದಾಗ ಅಕ್ಕಯ್ಯಮ್ಮ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಕೂಡಲೇ ಅವರನ್ನು ಅದೇ ಗ್ರಾಮದ ರಾಜಪ್ಪ ಎಂಬುವರು ಸ್ಥಳೀಯ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದ್ದರು. 12 ದಿನಗಳ ಕಾಲ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅಕ್ಕಯ್ಯಮ್ಮ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಪ್ರಾರಂಭದಲ್ಲಿ ಆಮ್ಲಜನಕ ಪ್ರಮಾಣ 89 ಇದ್ದದ್ದು, ಈಗ 98 ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಮಾಧ್ಯಮದವರಿಗೆ ತಿಳಿಸಿದರು.
ಜಪಾನ್ನಲ್ಲಿ 12-15 ವರ್ಷದ ಮಕ್ಕಳಿಗೆ ಫೈಝರ್ ಲಸಿಕೆ!
ಕಳೆದ ವರ್ಷ ಆಗಸ್ಟ್‌ನಲ್ಲಿ ಚಿತ್ರದುರ್ಗದ ಸಿದ್ದಮ್ಮ (110) ಅವರು ಕೊರೋನಾದಿಂದ ಚೇತರಿಸಿಕೊಳ್ಳುವ ಮೂಲಕ ಸೋಂಕು ಗೆದ್ದ ರಾಜ್ಯದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. ಮೇ 24ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟತಾಲೂಕಿನ ಯನ್ನೂರು ಗ್ರಾಮದ ಕಾಳಮ್ಮ (107) ಕೊರೋನಾದಿಂದ ಗುಣಮುಖರಾಗಿದ್ದರು. ರಾಜ್ಯದ 2ನೇ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona