*ಒಟ್ಟು 11 ಕಾರ್ಯತಂಡ ರಚನೆ: ಒಂದೊಂದು ತಂಡಕ್ಕೆ ಒಂದೊಂದು ಕೆಲಸ
*ಕೋವಿಡ್- 19 ವಾರ್‌ರೂಮ್ ಹೊಣೆ ಮತ್ತೆ ಮುನೀಶ್ ಮೌದ್ಗಿಲ್
*ಮಾದರಿ ಸಂಗ್ರಹ, ಪರೀಕ್ಷೆ ಮತ್ತು ಲ್ಯಾಬ್ ಬಳಕೆ ಹೊಣೆ ಶಾಲಿನಿ ರಜನೀಶ್
ಬೆಂಗಳೂರು (ಜ.5) : ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರವು ಹದಿಮೂರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹನ್ನೊಂದು ಕಾರ್ಯತಂಡವನ್ನು ರಚಿಸಿದೆ. ಕೋವಿಡ್ -19 ವಾರ್ ರೂಮ್‌ನ ಜವಾಬ್ದಾರಿ ಮತ್ತೆ ಮುನೀಶ್ ಮೌದ್ಗಿಲ್ ಅವರಿಗೆ ವಹಿಸಲಾಗಿದೆ.ವಿಷಮಶೀತ ಜ್ವರ ಮತ್ತು ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿರುವ ರೋಗಿಗಳನ್ನು 108 ಅಂಬ್ಯುಲೆನ್ಸ್ ಮೂಲಕ ತುರ್ತು ಚಿಕಿತ್ಸೆಗೆ ಆಸ್ಪತ್ರೆಗಳಿಗೆ ದಾಖಲಿಸುವ ಜವಾಬ್ದಾರಿ ಆರ್. ವಿನೊತ್ ಪ್ರಿಯಾ, ಮಾದರಿ ಸಂಗ್ರಹ, ಪರೀಕ್ಷೆ ಮತ್ತು ಲ್ಯಾಬ್ ಬಳಕೆ ಶಾಲಿನಿ ರಜನೀಶ್, ಹೋಮ್ ಐಸೋಲೇಷನ್ ಮತ್ತು ಕಂಟೈನ್ಮೆಂಟ್ ವಲಯದ ಜವಾಬ್ದಾರಿಯನ್ನು ಪಂಕಜ್ ಕುಮಾರ್ ಪಾಂಡೆ ಅವರಿಗೆ ನೀಡಲಾಗಿದೆ.
ದ್ರವ ಆಮ್ಲಜನಕದ ಪೂರೈಕೆಯ ಮೇಲೆ ನಿಗಾ ಇಡಲು ಮೂವರು ಹಿರಿಯ ಅಧಿಕಾರಿಗಳನ್ನು ನೇಮಿಸಿದೆ. ದ್ರವ ಆಮ್ಲಜನಕ ಟ್ಯಾಂಕರ್‌ಗಳ ಚಲನೆಯ ಮೇಲ್ವಿಚಾರಣೆಯ ಹೊಣೆಯನ್ನು ಪ್ರತಾಪ್ ರೆಡ್ಡಿ, ಡಾ. ಎನ್. ಶಿವಶಂಕರ್ ಅವರಿಗೆ ವಹಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ದ್ರವ ಆಮ್ಲಜನಕ ಟ್ಯಾಂಕರ್‌ಗಳ ಚಲನೆಯ ಮೇಲ್ವಿಚಾರಣೆಯನ್ನು ಪವನ್ ಕುಮಾರ್ ಮಾಲಪಾಟಿ ಅವರಿಗೆ ವಹಿಸಲಾಗಿದೆ.ಆಪ್ತ ಸಮಾಲೋಚನೆ ಮತ್ತು ಟೆಲಿ ಟ್ರಯಾಜಿಂಗ್ ಮತ್ತು ಸಹಾಯವಾಣಿ -1912ರ ನಿರ್ವಹಣೆಯನ್ನು ವಿಪಿನ್ ಸಿಂಗ್ ಮತ್ತು ಬಿಸ್ವಜಿತ್ ಮಿಶ್ರಾ ಅವರಿಗೆ ವಹಿಸಿದೆ.
undefined
ಇದನ್ನೂ ಓದಿ: Covid 19 Threat: ಕೊರೋನಾ ಕೇಸ್ ಏರಿಕೆಯಾದರೆ 1-2 ವಾರದಲ್ಲಿ ಶಾಲೆ ಬಂದ್?
ಖಾಸಗಿ, ಎನ್‌ಜಿಒ, ಕಾರ್ಪೋರೇಟ್ ವಲಯಗಳೊಂದಿಗೆ ಸಮನ್ವಯ ಸಾಧಿಸಲು ಉಮಾ ಮಾಹದೇವನ್, ಅಂತಾರಾಷ್ಟ್ರೀಯ ಸಮುದಾಯ ಮತ್ತು ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿ ಡಾ. ಪೊನ್ನುರಾಜ್, ಕೋವಿಡ್-19ರಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗುವ ಮಕ್ಕಳಿಗೆ ಸರ್ಕಾರದಿಂದ ಅತ್ಯಾವಶ್ಯಕ ಸೌಕರ್ಯ ಒದಗಿಸುವ ಜವಾಬ್ದಾರಿ ಪಲ್ಲವಿ ಆಕೃತಿ ಅವರಿಗೆ ನೀಡಲಾಗಿದೆ.ಕೋವಿಡ್ ಸಂಬಂಧಿತ ಪರಿಕರಗಳನ್ನು ಆಮದು ಮಾಡಿಕೊಳ್ಳುವ ನೋಡಲ್ ಅಧಿಕಾರಿಯಾಗಿ ಉಮಾ ಮಹಾದೇವನ್, ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ನೇಮಿಸಲಾಗಿದೆ.
ಇದನ್ನೂ ಓದಿ: Covid 19 Threat: ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ, ಮೂರೇ ದಿನದಲ್ಲಿ ಕೇಸು ಡಬಲ್!
ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಬೆಂಗಳೂರಿನ ವಿವಿಧ ವಲಯಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಿಸಿದೆ. ಇದರ ಬೆನ್ನಲ್ಲೇ ಇದೀಗ ಬಿಬಿಎಂಪಿ ಎಂಟು ವಲಗಳ ಕೊವಿಡ್ ಸಹಾಯವಾಣಿ ಆರಂಭಿಸಿದೆ.
ಎಂಟು ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದ್ದು, ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಹೆಲ್ಪ್ಲೈನ್ (Covid Helpline) ನಂಬರ್ಗಳನ್ನ ತಿಳಿಸಿದೆ. ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.
ನಗರದ ಎಲ್ಲಾ ನಾಗರೀಕರು ಕೊವಿಡ್ಗೆ ಸಂಬಂಧಿಸಿದಂತೆ ಟ್ರಯಾಜಿಂಗ್, ಕೊವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲು, ಲಸಿಕೆ ಪಡೆಯುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು.
ಎಂಟು ವಲಗಳ ಕೊವಿಡ್ ಸಹಾಯವಾಣಿ ಇಂತಿದೆ.
ಬೊಮ್ಮನಹಳ್ಳಿ- 8884666670
ದಾಸರಹಳ್ಳಿ- 94806 83132
ಪೂರ್ವ- 9480685163
ಮಹದೇವಪುರ- 08023010102
ಆರ್.ಆರ್.ನಗರ- 08028601050.
ದಕ್ಷಿಣ- 8431816718
ಪಶ್ಚಿಮ- 08068248454
ಯಲಹಂಕ- 9480685961
ಮಂಗಳವಾರ 2053 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ನಗರದಲ್ಲಿ ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ 11,423ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಜೂ.12ರಂದು 2454 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ಅತ್ಯಧಿಕ ಗರಿಷ್ಠ ಸಂಖ್ಯೆಯಾಗಿತ್ತು. ನಂತರದ ದಿನಗಳಲ್ಲಿ ಸೋಂಕು ಇಳಿಕೆಯಾಗಿದ್ದು, 201 ದಿನಗಳಲ್ಲಿ ಯಾವತ್ತೂ ಎರಡು ಸಾವಿರದ ಗಡಿ ದಾಟಿರಲಿಲ್ಲ.
ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,68,445ಕ್ಕೆ ಏರಿಕೆಯಾಗಿದೆ. 202 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,40,610ಕ್ಕೆ ಏರಿಕೆಯಾಗಿದೆ. ಮೂವರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 16,412ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.