
ಬೆಂಗಳೂರು (ಮಾ.13): ಕೃಷಿ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬಲ್ಲ ರಾಜ್ಯದ ರೈತರು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ 'ಕನ್ನಡಪ್ರಭ' ದಿನಪತ್ರಿಕೆ ಹಾಗೂ 'ಏಷ್ಯಾನೆಟ್ ಸುವರ್ಣ ನ್ಯೂಸ್'ನ ಪ್ರತಿಷ್ಠಿತ 'ರೈತ ರತ್ನ-2024' ಪ್ರಶಸ್ತಿಗೆ 10 ವಿಭಾಗ ಹಾಗೂ ತೀರ್ಪುಗಾರರ ವಿಶೇಷ ಪ್ರಶಸ್ತಿ ಸೇರಿ ಒಟ್ಟು 11 ಸಾಧಕರನ್ನು ಬುಧವಾರ ಆಯ್ಕೆ ಮಾಡಲಾಯಿತು. ಬೆಂಗಳೂರಿನಲ್ಲಿರುವ 'ಕನ್ನಡಪ್ರಭ-ಏಷ್ಯಾ ನೆಟ್ ಸುವರ್ಣ ನ್ಯೂಸ್'ನ ಕೇಂದ್ರ ಕಚೇರಿ ಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ತೀರ್ಪು ಗಾರರಾಗಿ ಕೃಷಿ-ಪರಿಸರ ತಜ್ಞ ಪತ್ರಕರ್ತ ಶಿವಾನಂದ ಕಳವೆ, ಕೃಷಿ ತಜ್ಞ ಕೃಷ್ಣ ಪ್ರಸಾದ್, ರತ್ನಗಿರಿ ಇಂಪ್ಲೆಕ್ಸ್ ಸಂಸ್ಥೆ ಮುಖ್ಯಸ್ಥ ಎಸ್.ಎ. ವಾಸುದೇವ ಮೂರ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಟ್ರಸ್ಟ್ ಗೊ ಫರ್ಟಿಲೈಜರ್ಸ್ ಸಂಸ್ಥೆಯ ಸಿಇಒ ಎ. ಎಂ.ಶರತ್ ಚಂದ್ರ ಅವರು ಭಾಗವಹಿಸಿದ್ದರು.
11 ವಿಜೇತರ ಆಯ್ಕೆ: ಆಧುನಿಕ ಕೃಷಿ, ಕೃಷಿ ಸಂಶೋಧಕ ರೈತ, ಕೃಷ್ಣು ತನ್ನ ಸಂಸ್ಥೆ ಅಥವಾ ವ್ಯಕ್ತಿ, ತೋಟಗಾರಿಕೆ, ಪಶು ಸಂಗೋಪನೆ, ಯುವ ರೈತ, ರೈತ ಮಹಿಳೆ, ಸಾವಯವ ಕೃಷಿ, ಸುವರ್ಣ ಕೃಷಿ ಶಾಲೆ ಹಾಗೂ ಸುಸ್ಥಿರ ಕೃಷಿ ಎಂಬ10 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇ ಶನಗಳನ್ನು ಆಹ್ವಾನಿಸಲಾಗಿತ್ತು. ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಪ್ರಕ್ರಿಯೆ ವೇಳೆ ಬರೋಬ್ಬರಿ 655ಕ್ಕೂ ಹೆಚ್ಚು ನಾಮನಿರ್ದೇಶನಗಳು ಹರಿದು ಬಂದಿದ್ದವು. ಕನ್ನಡಪ್ರಭ ಸಂಪಾದಕೀಯ ತಂಡ ಪ್ರತಿಯೊಂದು ನಾಮನಿರ್ದೇಶನವನ್ನೂ ಕೂಲಂಕ ಷವಾಗಿ ಪರಿಶೀಲಿಸಿ ಪ್ರತಿ ವಿಭಾಗದಲ್ಲೂ ತಲಾ 6 ರಿಂದ 7 ಸಾಧಕರನ್ನು ಆರಿಸಿತ್ತು. ಆಯ್ದ 63 ನಾಮನಿರ್ದೇಶನಗಳನ್ನು ತೀರ್ಪುಗಾರರ ಮುಂದಿಡಲಾಗಿತ್ತು.
Raita Ratna Award: ಗಾಳಿ, ನೀರಿನಷ್ಟೇ ರೈತರು ಅವಶ್ಯ: ರವಿ ಹೆಗಡೆ
ಪ್ರತಿ ಕ್ಷೇತ್ರದಲ್ಲೂ ಉತ್ಕೃಷ್ಟ ಸಾಧನೆ ಮಾಡಿದ್ದ ರೈತರು, ಕೃಷಿ ಸಂಬಂಧಿ ಸಾಧಕರನ್ನು ತೀರ್ಪುಗಾರರು ಪರಸ್ಪರ ಸಮಾಲೋಚಿಸಿ, ಅಳೆದು ತೂಗಿ 10 ಸಾಧಕರನ್ನು ಪ್ರಶಸ್ತಿಗೆ ಅಂತಿಮಗೊಳಿಸಿದರು. ಜತೆಗೆ, ತೀರ್ಪುಗಾರರ ಆಯ್ಕೆಯ ಒಂದು ವಿಶೇಷ ಪ್ರಶಸ್ತಿಗೆ ಎರಡು ನಾಮನಿರ್ದೇಶಗಳ ಪೈಕಿ ಅತ್ಯುತ್ತಮ ಸಾಧಕರೊಬ್ಬರನ್ನು ಸರ್ವಾನು ಮತದಿಂದ ಅಂತಿಮಗೊಳಿಸಲಾಗಿದೆ. ಈ ವೇಳೆ ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ, ಪ್ರಧಾನ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ), ಕಾರ್ಯ ನಿರ್ವಾಹಕ ಸಂಪಾದಕ ಎಸ್.ಗಿರೀಶ್ ಬಾಬು, ವಿಶೇಷ ಯೋಜನೆಗಳ ಸಂಪಾದಕ ವಿನೋದ್ ಕುಮಾರ್, ಹಿರಿಯ ಮುಖ್ಯ ಉಪ ಸಂಪಾದಕ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ