ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, ಇದು ಈ ವರೆಗಿನ ದಾಖಲೆಯಾಗಿದೆ.
ಬೆಂಗಳೂರು, (ಸೆ.29): ರಾಜ್ಯದಲ್ಲಿ ಇಂದು (ಮಂಗಳವಾರ) 10453 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 592911 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಮಂಗಳವಾರ)6628 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ 476378 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
undefined
ಬೆಂಗಳೂರಲ್ಲಿ ಹೊಸ ದಾಖಲೆ ಬರೆದ ಕೊರೋನಾ..!
ಕಿಲ್ಲರ್ ಕೊರೋನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 136 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಂಖ್ಯೆ 8777ಕ್ಕೇರಿದೆ. ಇನ್ನು ಪ್ರಸ್ತುತ ರಾಜ್ಯದಲ್ಲಿ 107737 ಸಕ್ರೀಯ ಕೇಸ್‌ಗಳಿವೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಕೊರೋನಾ ಕೇಸ್
ಬಾಗಲಕೋಟೆ - 128, ಬಳ್ಳಾರಿ - 313, ಬೆಳಗಾವಿ - 128, ಬೆಂಗಳೂರು ಗ್ರಾಮಾಂತರ - 305, ಬೆಂಗಳೂರು ನಗರ - 4868,ಬೀದರ್ - 70, ಚಾಮರಾಜನಗರ - 122, ಚಿಕ್ಕಬಳ್ಳಾಪುರ - 141, ಚಿಕ್ಕಮಗಳೂರು - 177, ಚಿತ್ರದುರ್ಗ - 186, ದಕ್ಷಿಣ ಕನ್ನಡ - 362, ದಾವಣಗೆರೆ - 288, ಧಾರವಾಡ - 145, ಗದಗ - 111, ಹಾಸನ - 475, ಹಾವೇರಿ - 75, ಕಲಬುರ್ಗಿ - 161, ಕೊಡಗು - 57, ಕೋಲಾರ - 72, ಕೊಪ್ಪಳ - 143, ಮಂಡ್ಯ - 259, ಮೈಸೂರು - 414, ರಾಯಚೂರು - 100, ರಾಮನಗರ - 10, ಶಿವಮೊಗ್ಗ - 347, ತುಮಕೂರು - 297, ಉಡುಪಿ - 319, ಉತ್ತರ ಕನ್ನಡ - 125, ವಿಜಯಪುರ - 138 ಮತ್ತು ಯಾದಗಿರಿ 117 .