ಆರು ತಿಂಗಳ ಹಿಂದೆಯೇ ಗಂಟು ರೋಗ ಕಾಣಿಸಿಕೊಂಡರೂ ಪಶು ಸಂಗೋಪನಾ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. 1.29 ಕೋಟಿ ಜಾನುವಾರುಗಳ ಪೈಕಿ ಕೇವಲ 69 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಸಚಿವರು ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು: ಸಿದ್ದರಾಮಯ್ಯ
ವಿಧಾನಸಭೆ(ಡಿ.23): ‘ರಾಜ್ಯದಲ್ಲಿ ಜಾನುವಾರುಗಳಲ್ಲಿ ಗಂಟು ರೋಗ ಉಲ್ಬಣಿಸಿ 21,305 ಜಾನುವಾರುಗಳು ಮೃತಪಟ್ಟಿದ್ದು, ಕಳೆದ ಒಂದು ತಿಂಗಳಲ್ಲೇ 10,305 ಜಾನುವಾರು ಸಾವನ್ನಪ್ಪಿವೆ. ಹೀಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸಚಿವರು ಹಸುಗೆ ಪೂಜೆ ಮಾಡಿ ಫೋಟೋ ತೆಗೆಸಿಕೊಳ್ಳುವ ಮೂಲಕ ಪ್ರಚಾರದ ಗೋರಕ್ಷಣೆ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಆರು ತಿಂಗಳ ಹಿಂದೆಯೇ ಗಂಟು ರೋಗ ಕಾಣಿಸಿಕೊಂಡರೂ ಪಶು ಸಂಗೋಪನಾ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. 1.29 ಕೋಟಿ ಜಾನುವಾರುಗಳ ಪೈಕಿ ಕೇವಲ 69 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಸಚಿವರು ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಜತೆಗೆ ಸಾವನ್ನಪ್ಪಿದ ಜಾನುವಾರುಗಳಿಗೆ ನೀಡುವ ಪರಿಹಾರ ಹೆಚ್ಚಿಸಬೇಕು ಎಂದು ಶೂನ್ಯ ವೇಳೆಯಲ್ಲಿ ಆಗ್ರಹಿಸಿದರು.
Lumpy Skin Disease: ಚರ್ಮಗಂಟಿಗೆ ಹೆದರಿ ಹೈನುತ್ಪನ್ನ ಖರೀದಿಗೆ ಗ್ರಾಹಕ ಹಿಂದೇಟು..!
ಸೋಮವಾರ ಉತ್ತರ
ರಾಜಸ್ಥಾನ, ಗುಜರಾತ್‌ಗೆ ಹೋಲಿಸಿದರೆ ನಮ್ಮಲ್ಲಿ ಗಂಟು ರೋಗದಿಂದ ಜಾನುವಾರುಗಳ ಸಾವು ಪ್ರಮಾಣ ಕಡಿಮೆ ಇದೆ. ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಸೋಮವಾರ ಉತ್ತರ ನೀಡಲಾಗುವುದು ಅಂತ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಹೆಮ್ಮಾರಿ ಗಂಟುರೋಗದ ಆರ್ಭಟ, 151ಜಾನುವಾರುಗಳು ಬಲಿ!
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಗೋವುಗಳ ರಕ್ಷಣೆ ಮಾಡುವುದಾಗಿ ಗೋಹತ್ಯೆ ನಿಷೇಧ ಕಾಯಿದೆ ತಂದಿದ್ದೀರಿ. ಲಸಿಕೆ ಹಾಕಿದರೆ ಗಂಟು ರೋಗ ಬಾರದಂತೆ ತಡೆಯಬಹುದು ಎಂದು ಗೊತ್ತಿದ್ದರೂ 6 ತಿಂಗಳಿಂದ ನಿರ್ಲಕ್ಷ್ಯ ಮಾಡುತ್ತಿದ್ದೀರಿ. ಪರಿಣಾಮ ಲಕ್ಷಾಂತರ ಜಾನುವಾರುಗಳಿಗೆ ಗಂಟು ರೋಗ ಬಂದಿದೆ. ಇದು ಮಾರಣಾಂತಿಕ ಅಂಟು ರೋಗವಾಗಿದ್ದು, ಜಾನುವಾರುಗಳಲ್ಲಿ ಜ್ವರ, ಕಣ್ಣಲ್ಲಿ ನೀರು ಸುರಿದು, ಗಂಟು, ಹುಣ್ಣಾಗಿ ರಕ್ತ ಸೋರಿ ನರಕಯಾತನೆ ಅನುಭವಿಸಿ ಸತ್ತು ಹೋಗಿವೆ. ಪಶು ಸಂಗೋಪನಾ ಇಲಾಖೆ ಪ್ರಕಾರವೇ 21,305 ಜಾನುವಾರು ಮೃತಪಟ್ಟಿದ್ದು, ಒಂದು ತಿಂಗಳಲ್ಲೇ 10,305 ಜಾನುವಾರು ಮೃತಪಟ್ಟಿವೆ. ಇವುಗಳನ್ನು ರಕ್ಷಣೆ ಮಾಡಬೇಕಿರುವುದು ನಮ್ಮ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಿದರು.
ಪಶು ಚಿಕಿತ್ಸಕರು ಇಲ್ಲ, ಔಷಧಗಳು ಲಭ್ಯವಿಲ್ಲ. ಸಿಬ್ಬಂದಿ ಕೊರತೆಯನ್ನು ಸರಿಪಡಿಸಿಲ್ಲ. ಲಸಿಕೆ ಹಾಕುತ್ತಿಲ್ಲ. ಹಸು ಹಿಡಿದುಕೊಂಡು ಫೋಟೋ ತೆಗೆಸಿಕೊಂಡು ಪ್ರಚಾರಕ್ಕಾಗಿ, ರಾಜಕೀಯಕ್ಕಾಗಿ ಹಸುಗಳನ್ನು ಬಳಸಿಕೊಳ್ಳುತ್ತೀರಾ ಎಂದು ಸಚಿವರನ್ನು ಪ್ರಶ್ನಿಸಿದರು.