ಪಿಂಕ್‌ ಟಿಕೆಟ್‌ ಕಳೆದುಕೊಂಡರೆ ಕಂಡಕ್ಟರ್‌ಗಳಿಗೆ 10 ರೂ. ದಂಡ: ನಿರ್ವಾಹಕರಿಗೆ ಮತ್ತೊಂದು ತಲೆನೋವು..!

By Kannadaprabha NewsFirst Published May 9, 2024, 11:54 AM IST
Highlights

ಒಂದು ವೇಳೆ ವಿತರಿಸಲಾಗದೆ ಉಳಿದಿರುವ ಟಿಕೆಟ್‌ಗಳನ್ನು ನಿರ್ವಾಹಕರು ಕಳೆದುಕೊಂಡರೆ ಪ್ರತಿ ಟಿಕೆಟ್‌ಗೆ 10 ರು.ನಂತೆ ದಂಡದ ರೂಪದಲ್ಲಿ ವಸೂಲಿ ಮಾಡಲು ನಿರ್ಧರಿಸಿದ ಕೆಎಸ್ಸಾರ್ಟಿಸಿ 

ಬೆಂಗಳೂರು(ಮೇ.09):  ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನಿರ್ವಾಹಕರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಈಗಾಗಲೆ ಹೈರಾಣಾಗಿರುವ ನಿರ್ವಾಹಕರಿಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದ್ದು, ಮಹಿಳಾ ಪ್ರಯಾಣಿಕರಿಗೆ ವಿತರಿಸಲು ನೀಡಿರುವ ಪಿಂಕ್ ಟಿಕೆಟ್ ಕಳೆದುಕೊಂಡರೆ ನಿರ್ವಾಹಕರೆ ದಂಡ ಪಾವತಿಸಬೇಕು ಎಂದು ಕೆಎಸ್ಸಾರ್ಟಿಸಿ ಆದೇಶಿಸಿದೆ.

ಶಕ್ತಿ ಯೋಜನೆ ಜಾರಿ ನಂತರದಿಂದ ಮಹಿಳಾ ಪ್ರಯಾಣಿಕರಿಗೆ ಅವರ ದಾಖಲೆಗಳನ್ನು ಪರಿಶೀಲಿಸಿ ನಂತರ ಉಚಿತ ಟಿಕೆಟ್ ನೀಡಬೇಕಿದೆ. ಅದರ ನಡುವೆ ಟಿಕೆಟ್ ವಿತರಿಸಲು ನೀಡಲಾಗಿರುವ ಇಟಿಎಂ ಕಾರ್ಯನಿರ್ವಹಿಸದ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರಿಗೆ ನೀಡಲು ಶೂನ್ಯ ಮೌಲ್ಯದ ಪಿಂಕ್ ಟಿಕೆಟ್‌ ಗಳನ್ನು ನಿರ್ವಾಹಕರಿಗೆ ನೀಡಿದೆ. ಆದರೆ, ಈ ಪಿಂಕ್ ಟಿಕೆಟ್‌ಗಳನ್ನು ನಿರ್ವಾಹಕರು ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ವಿತರಿಸಲಾಗದೆ ಉಳಿದಿರುವ ಟಿಕೆಟ್‌ಗಳನ್ನು ನಿರ್ವಾಹಕರು ಕಳೆದುಕೊಂಡರೆ ಪ್ರತಿ ಟಿಕೆಟ್‌ಗೆ 10 ರು.ನಂತೆ ದಂಡದ ರೂಪದಲ್ಲಿ ವಸೂಲಿ ಮಾಡಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.

ಶಕ್ತಿ ಯೋಜನೆ: 200 ಕೋಟಿ ಮಹಿಳೆಯರಿಂದ ರಾಜ್ಯದಲ್ಲಿ ಫ್ರೀ ಬಸ್‌ ಯಾನ!

ಕೆಎಸ್ಸಾರ್ಟಿಸಿಯ ಈ ಆದೇಶಕ್ಕೆ ವಿರೋಧ

ವ್ಯಕ್ತಪಡಿಸಿರುವ ವ. ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕಸ್್ರ ಯೂನಿಯನ್, ಶಕ್ತಿ ಯೋಜನೆ ಜಾರಿ ನಂತರ ನಿರ್ವಾಹಕರು ಹಲವು ರೀತಿಯ ಮಾನಸಿಕ ಮತ್ತು ಕಾರ್ಯದೊತ್ತಡ ಎದುರಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕಂತೆ ನಿಗಮಕ್ಕೆ ಬೆಲೆ ಸಿಗುತ್ತಿಲ್ಲ. ಅದರ ನಡುವೆ ಇದೀಗ ಪಿಂಕ್ ಟಿಕೆಟ್‌ಗಳನ್ನು ಕಾಯಬೇಕಾದ ಕೆಲಸವೂ ನಿರ್ವಾಹಕರ ಮೇಲೆ ಬಂದಿದೆ. ಇದು ನಿರ್ವಾಹಕರ ಮನೋಬಲ ಕಸಿಯಲಿದೆ. ಹೀಗಾಗಿ ಪಿಂಕ್ ಟಿಕೆಟ್ ಕಳೆದುಹೋದರೆ ಹೋದರೆ ದಂಡವಿಧಿಸುವ ದಂಡವಿಧಿಸ ಆದೇಶವನ್ನು ನಿಗಮ ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

click me!