Covid Vaccine: ರಾಜ್ಯದಲ್ಲಿಂದು 10 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು: ದಕ್ಷಿಣದಲ್ಲೇ ನಂ.1!

Kannadaprabha News   | Asianet News
Published : Feb 21, 2022, 08:30 AM IST
Covid Vaccine: ರಾಜ್ಯದಲ್ಲಿಂದು 10 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು: ದಕ್ಷಿಣದಲ್ಲೇ ನಂ.1!

ಸಾರಾಂಶ

ದಕ್ಷಿಣ ಭಾರತದಲ್ಲಿಯೇ ಕೊರೋನಾ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಒಟ್ಟಾರೆ ಲಸಿಕೆ ವಿತರಣೆ 10 ಕೋಟಿ ಡೋಸ್‌ ಗಡಿಗೆ ತಲುಪಿದೆ. ರಾಜ್ಯದಲ್ಲಿ ಭಾನುವಾರದವರೆಗೆ ಮೂರೂ ಡೋಸ್‌ ಸೇರಿ ಒಟ್ಟಾರೆ 9.97 ಕೋಟಿ ಡೋಸ್‌ ಲಸಿಕೆ ವಿತರಿಸಿದ್ದು, ಸೋಮವಾರ 10 ಕೋಟಿ ಡೋಸ್‌ ಪೂರೈಸಲಿದೆ. 

ಬೆಂಗಳೂರು (ಫೆ.21): ದಕ್ಷಿಣ ಭಾರತದಲ್ಲಿಯೇ ಕೊರೋನಾ ಲಸಿಕೆ (Covid Vaccine) ಅಭಿಯಾನದಲ್ಲಿ ಕರ್ನಾಟಕ (Karnataka) ಮುಂಚೂಣಿಯಲ್ಲಿದ್ದು, ಒಟ್ಟಾರೆ ಲಸಿಕೆ ವಿತರಣೆ 10 ಕೋಟಿ ಡೋಸ್‌ ಗಡಿಗೆ ತಲುಪಿದೆ. ರಾಜ್ಯದಲ್ಲಿ ಭಾನುವಾರದವರೆಗೆ ಮೂರೂ ಡೋಸ್‌ ಸೇರಿ ಒಟ್ಟಾರೆ 9.97 ಕೋಟಿ ಡೋಸ್‌ ಲಸಿಕೆ ವಿತರಿಸಿದ್ದು, ಸೋಮವಾರ 10 ಕೋಟಿ ಡೋಸ್‌ ಪೂರೈಸಲಿದೆ. 

ಈ ಮೂಲಕ ದಕ್ಷಿಣ ಭಾರತದಲ್ಲಿಯೇ 10 ಕೋಟಿ ಡೋಸ್‌ ಲಸಿಕೆ ವಿತರಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಸದ್ಯ ದೇಶದಲ್ಲಿಯೇ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ. ಈವರೆಗೂ 8.37 ಕೋಟಿ ಡೋಸ್‌ ಕೋವಿಶೀಲ್ಡ್‌ (Covishield), 1.59 ಕೋಟಿ ಕೋವಾಕ್ಸಿನ್‌ (Covaxin), 1.2 ಲಕ್ಷ ಡೋಸ್‌ ಸ್ಪುಟ್ನಿಕ್‌ ಲಸಿಕೆ (Sputnik Vaccine) ವಿತರಿಸಲಾಗಿದೆ. 15 ಮೇಲ್ಪಟ್ಟವರು ಸೇರಿ 5.2 ಕೋಟಿ ಮಂದಿ ಮೊದಲ ಡೋಸ್‌, 4.64 ಕೋಟಿ ಮಂದಿ ಎರಡೂ ಡೋಸ್‌, 11.28 ಲಕ್ಷ ಮಂದಿ ಮುನ್ನೆಚ್ಚರಿಕಾ ಡೋಸ್‌ ಪಡೆದಿದ್ದಾರೆ. 

ಈಗಾಗಲೇ 18 ವರ್ಷ ಮೇಲ್ಪಟ್ಟವರಲ್ಲಿ ಶೇ.100ರಷ್ಟುಮಂದಿ ಮೊದಲ ಡೋಸ್‌, ಶೇ.96ರಷ್ಟುಮಂದಿ ಎರಡೂ ಡೋಸ್‌ ಕೊರೋನಾ ಲಸಿಕೆ ಪಡೆದಿದ್ದಾರೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈಗಾಗಲೇ ಶೇ.100ರಷ್ಟುಮಂದಿಯ ಎರಡೂ ಡೋಸ್‌ ಪೂರ್ಣಗೊಂಡಿವೆ. ಅತಿ ಹೆಚ್ಚು ಲಸಿಕೆಯನ್ನು ಬೆಂಗಳೂರಿನಲ್ಲಿ (ಬಿಬಿಎಂಪಿ ಒಳಗೊಂಡು) 2.02 ಕೋಟಿ ಡೋಸ್‌, ಬೆಳಗಾವಿ 74 ಲಕ್ಷ, ಮೈಸೂರು 50 ಲಕ್ಷ, ಬಳ್ಳಾರಿ 41 ಲಕ್ಷ, ತುಮಕೂರು 40 ಲಕ್ಷ ಡೋಸ್‌ ಲಸಿಕೆಯನ್ನು ವಿತರಿಸಲಾಗಿದೆ.

Vaccination Drive ದೇಶದ ಶೇ.80 ಮಂದಿಗೆ ಲಸಿಕೆಯ ಎರಡೂ ಡೋಸ್‌!

ಸರಾಸರಿ 2 ಲಕ್ಷ ಮಂದಿ ಲಸಿಕೆ: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸರಾಸರಿ ಎರಡು ಲಕ್ಷ ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆಯುತ್ತಿರುವವರ ಪೈಕಿ ಎರಡನೇ ಡೋಸ್‌ ಪಡೆಯುವ 15-17 ವರ್ಷದ ಹದಿಹರೆಯದವರು, ಮುನ್ನೆಚ್ಚರಿಕಾ ಡೋಸ್‌ ಪಡೆಯುವ ಆರೋಗ್ಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟಅನಾರೋಗ್ಯ ಸಮಸ್ಯೆಯುಳ್ಳವರ ಸಂಖ್ಯೆ ಹೆಚ್ಚಿದೆ. ಮುನ್ನೆಚ್ಚರಿಕಾ ಡೋಸ್‌ಗೆ ಅರ್ಹರು, ಎರಡನೇ ಡೋಸ್‌ ಬಾಕಿ ಇರುವವರು ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ 1001 ಕೇಸ್‌-ಈ ವರ್ಷದಲ್ಲೇ ಕನಿಷ್ಠ: ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಇಳಿಕೆ ಮುಂದುವರಿದಿದ್ದು, ಈ ವರ್ಷದ ಅತ್ಯಂತ ಕಡಿಮೆ ಪ್ರಕರಣ ಭಾನುವಾರ ವರದಿಯಾಗಿದೆ. 1,001 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 18 ಮಂದಿ ಮರಣವನ್ನಪ್ಪಿದ್ದಾರೆ. ಈ ಮಧ್ಯೆ 1,780 ಮಂದಿ ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 12,634ಕ್ಕೆ ಇಳಿದಿದೆ.

ಜ.1ರಂದು 1,033 ಪ್ರಕರಣ ವರದಿಯಾದ ಬಳಿಕದ ಕನಿಷ್ಠ ಪ್ರಕರಣ ಭಾನುವಾರ ದಾಖಲಾಗಿದೆ. ಜನವರಿ ಮಧ್ಯ ಭಾಗದ ಅವಧಿಯಲ್ಲಿ ಪ್ರತಿ ದಿನ 40-50 ಸಾವಿರ ಸೋಂಕು ಪ್ರಕರಣ ವರದಿಯಾಗುತ್ತಿದ್ದ ರಾಜ್ಯದಲ್ಲಿ ನಂತರ ಇಳಿಕೆಯಾಗುತ್ತಾ ಇದೀಗ ಸಾವಿರದ ಗಡಿಗೆ ಬಂದು ತಲುಪಿದೆ. ಕೋವಿಡ್‌ ಉತ್ತುಂಗದಲ್ಲಿದ್ದಾಗ 2 ಲಕ್ಷ ದಿಂದ 2.50 ಲಕ್ಷ ತನಕ ನಡೆಯುತ್ತಿದ್ದ ಪರೀಕ್ಷೆಯ ಪ್ರಮಾಣದಲ್ಲೂ ಇಳಿಕೆಯಾಗಿದೆ. ಭಾನುವಾರ 70,290 ಮಂದಿಯ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ. 1.43 ದಾಖಲಾಗಿದೆ.

ಸಾವು ಇಳಿಕೆ: ಇದೇ ವೇಳೆ ಮರಣ ಹೊಂದುವವರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಜ. 17 ರಂದು 14 ಮಂದಿ ಮರಣವನ್ನಪ್ಪಿದ್ದರು. ಇದಾದ ನಂತರ ಅತ್ಯಂತ ಕಡಿಮೆ ಸಾವು ಭಾನುವಾರ ವರದಿಯಾಗಿದೆ. ಬೆಂಗಳೂರು ನಗರದಲ್ಲಿ 16, ಧಾರವಾಡ 2, ಬಳ್ಳಾರಿ, ಬೆಳಗಾವಿ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಬೆಂಗಳೂರು ನಗರದಲ್ಲಿ 485, ತುಮಕೂರು 93, ಬೆಳಗಾವಿ 51, ಮೈಸೂರು 48, ಬಳ್ಳಾರಿ 46, ಕೊಡಗು 42 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ಉಳಿದಂತೆ ಬೆಂಗಳೂರು ಗ್ರಾಮಾಂತರ, ಬೀದರ್‌, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿಯಲ್ಲಿ ಒಂದಂಕಿಯಲ್ಲಿ ಹೊಸ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.36 ಲಕ್ಷ ಮಂದಿ ಕೋವಿಡ್‌ ಬಾಧಿತರಾಗಿದ್ದು 38.84 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,795 ಮಂದಿ ಮರಣವನ್ನಪ್ಪಿದ್ದಾರೆ.

Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ: ಅನುಮತಿ ಕೋರಿಕೆ

19 ಸಾವಿರ ಮಂದಿಗೆ ಲಸಿಕೆ: ರಾಜ್ಯದಲ್ಲಿ ಭಾನುವಾರ 19,998 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 1,362 ಮಂದಿ ಮೊದಲ, 16,769 ಮಂದಿ ಎರಡನೇ ಮತ್ತು 1,867 ಮಂದಿ ಮುನ್ನೆಚ್ಚರಿಕೆ ಡೋಸ್‌ ಪಡೆದಿದ್ದಾರೆ. ಈವರೆಗೆ ಒಟ್ಟು 9.96 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!