ರಾಜ್ಯದಲ್ಲೀಗ ಸಕ್ರಿಯ ಕೊರೋನಾ ಸೋಂಕಿತರು 1 ಲಕ್ಷ!

By Kannadaprabha NewsFirst Published Sep 11, 2020, 11:13 AM IST
Highlights

ರಾಜ್ಯದಲ್ಲಿ ಇದೀಗ 1 ಲಕ್ಷ ಕೊರೋನಾ ಸಕ್ರೀಯ ಪ್ರಕರಣಗಳು ಇದೆ. ದಿನದಿನಕ್ಕೂ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. 

ಬೆಂಗಳೂರು (ಸೆ.11):  ರಾಜ್ಯದಲ್ಲಿ ಗುರುವಾರ ಹೊಸದಾಗಿ 9,217 ಜನರಲ್ಲಿ ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ ಒಂದು ಲಕ್ಷ (1,01,537) ದಾಟಿದೆ. ಇದರೊಂದಿಗೆ ಈವರೆಗೆ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 4.30 ಲಕ್ಷ ಮುಟ್ಟಿದೆ. ಇದೇ ವೇಳೆ 129 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 6,937ಕ್ಕೆ ತಲುಪಿದೆ.

ಸದ್ಯ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಮಾತ್ರ ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷದ ಮೇಲಿದೆ. ದೇಶದ ಒಟ್ಟು ಕೊರೋನಾ ಸೋಂಕಿತರಲ್ಲಿ ಶೇ. 9.4 ಮಂದಿ ಕರ್ನಾಟಕದಲ್ಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಸಮಾಧಾನಕರ ಸುದ್ದಿ: ಬಿಎಂಟಿಸಿಯಲ್ಲಿ ಕೊರೋನಾ ಸೋಂಕು ಪ್ರಕರಣ ಇಳಿಕೆ .

ರಾಜ್ಯದಲ್ಲಿ ಗುರುವಾರ 7,021 ಮಂದಿ ಕೊರೋನಾ ಮುಕ್ತರಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 3.22 ಲಕ್ಷಕ್ಕೆ ಏರಿದೆ. ರಾಜ್ಯದ ವಿವಿಧ ಅಸ್ಪತ್ರೆಗಳಲ್ಲಿ 768 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂರು ತಿಂಗಳ ಮಗು ಬಲಿ:  ಗುರುವಾರ ಮೃತಪಟ್ಟ129 ಸೋಂಕಿತರ ಪೈಕಿ ಮೈಸೂರಿನ ಮೂರು ತಿಂಗಳ ಗಂಡು ಮಗು ಕೂಡ ಸೇರಿದೆ. ಬೆಂಗಳೂರು ನಗರದಲ್ಲಿ 33, ಮೈಸೂರು 13,ಹಾಸನ , ದಕ್ಷಿಣ ಕನ್ನಡದಲ್ಲಿ ತಲಾ 9, ಧಾರವಾಡ, ಉತ್ತರ ಕನ್ನಡ ತಲಾ 8, ಬಳ್ಳಾರಿ 7, ಶಿವಮೊಗ್ಗ 5, ಉಡುಪಿ, ಕೊಪ್ಪಳ ತಲಾ 4, ವಿಜಯಪುರ, ರಾಯಚೂರು, ಮಂಡ್ಯ, ದಾವಣಗೆರೆ ತಲಾ 3, ಬೆಳಗಾವಿ, ಚಿಕ್ಕಮಗಳೂರು, ಗದಗ, ಕಲಬುರಗಿ, ಕೋಲಾರ, ತುಮಕೂರು ತಲಾ 2, ಯಾದಗಿರಿ, ಕೊಡಗು, ಹಾವೇರಿ, ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

ಅನ್‌ಲಾಕ್ ಬಳಿಕ ಎಚ್ಚರ ತಪ್ಪಿದ ಜನರು: ಕೊರೋನಾ 2ನೇ ಅಲೆ ಭೀತಿ

ಬೆಂಗಳೂರು ನಗರದಲ್ಲಿ ಹೊಸದಾಗಿ 3,161 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಉಳಿದಂತೆ ಮೈಸೂರು 635, ಶಿವಮೊಗ್ಗ 549, ಬಳ್ಳಾರಿ 375, ತುಮಕೂರು 365, ದಕ್ಷಿಣ ಕನ್ನಡ 350, ದಾವಣಗೆರೆ 297, ಧಾರವಾಡ 264, ಬೆಳಗಾವಿ 263, ಮಂಡ್ಯ 249, ಕಲಬುರಗಿ, 243, ಉಡುಪಿ 227, ಹಾಸನ 218, ಉತ್ತರ ಕನ್ನಡ 214, ಹಾವೇರಿ 190, ಗದಗ 180, ಚಿಕ್ಕಬಳ್ಳಾಪುರ 167, ಚಿತ್ರದುರ್ಗ 142, ಕೊಪ್ಪಳ 139, ರಾಮನಗರ 126, ಚಿಕ್ಕಮಗಳೂರು 111, ರಾಯಚೂರು 107, ಕೋಲಾರ 104, ಬೀದರ್‌ 98, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ ತಲಾ 77, ವಿಜಯಪುರ 63, ಚಾಮರಾಜನಗರ 62, ಕೊಡಗು ಜಿಲ್ಲೆಯಲ್ಲಿ 61 ಪ್ರಕರಣಗಳು ಬೆಳಕಿಗೆ ಬಂದಿವೆ.

click me!