ಗ್ರಾ.ಪಂ.ಚುನಾವಣೆ: ಮೊದಲ ಹಂತಕ್ಕೆ 1.5 ಲಕ್ಷ ನಾಮಪತ್ರ

By Kannadaprabha NewsFirst Published Dec 12, 2020, 11:34 AM IST
Highlights

ನಾಳೆ ಪರಿಶೀಲನೆ, ವಾಪಸ್‌ಗೆ ನಾಡಿದ್ದು ಕಡೇ ದಿನ| ಡಿ.22ರಂದು ಮೊದಲ ಹಂತದ ಚುನಾವಣೆ| 112 ಗ್ರಾ.ಪಂ. ಸೇರಿ ಒಟ್ಟು 3021 ಪಂಚಾಯಿತಿಗಳಿಗೆ ಚುನಾವಣೆ| 

ಬೆಂಗಳೂರು(ಡಿ.12): ಹಳ್ಳಿ ರಾಜಕೀಯ ಅಖಾಡ ರಂಗೇರಿದ್ದು, ಗ್ರಾಮ ಪಂಚಾಯತ್‌ನ ಮೊದಲ ಹಂತದ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, 3,021 ಗ್ರಾ.ಪಂ.ಗಳಿಗೆ 1.50 ಲಕ್ಷಕ್ಕೂ ಹೆಚ್ಚು ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ.

ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.14ರಂದು (ಸೋಮವಾರ) ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಡಿ.22ರಂದು ಮೊದಲ ಹಂತದ ಮತದಾನ ನಡೆಯಲಿದೆ.

ಈ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಯೇ ನಡೆದಿಲ್ಲ..!

ರಾಜ್ಯ ಚುನಾವಣಾ ಆಯೋಗದ ಘೋಷಣೆ ಪ್ರಕಾರ ಮೊದಲು 2,930 ಗ್ರಾ.ಪಂ.ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರವು ಕೆಲ ಗ್ರಾ.ಪಂ.ಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆ ಮಾಡಿತು. ಹೀಗಾಗಿ 21 ಗ್ರಾ.ಪಂ.ಗಳ ಚುನಾವಣೆಯನ್ನು ಕೈಬಿಡಲಾಗಿದೆ. ಇನ್ನು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯುವ 97 ಗ್ರಾ.ಪಂ. ಗಳ ಜತೆಗೆ ಎರಡನೇ ಹಂತದಲ್ಲಿ ನಡೆಯಬೇಕಿದ್ದ 112 ಗ್ರಾ.ಪಂಗಳನ್ನು ಮೊದಲ ಹಂತದಲ್ಲಿಯೇ ಚುನಾವಣೆ ಘೋಷಣೆಯಾಗಿದೆ. 112 ಗ್ರಾ.ಪಂ. ಸೇರಿ ಒಟ್ಟು 3021 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
 

click me!