ನಾಡಗೀತೆ ಸುದೀರ್ಘವಾಗಿದ್ದು ಅದರ ಘನತೆಗೆ ಧಕ್ಕೆ ಬಾರದ ಹಾಗೆ ಹಾಡುವ ಅವಧಿ ಕಡಿತಗೊಳಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ
ಮುಂಡರಗಿ (ಮಾ.15): ಸದ್ಯ ನಾಡಗೀತೆ ಸುದೀರ್ಘವಾಗಿದ್ದು ಅದರ ಘನತೆಗೆ ಧಕ್ಕೆ ಬಾರದ ಹಾಗೆ ಹಾಡುವ ಅವಧಿ ಕಡಿತಗೊಳಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಭಾನುವಾರ ಮುಂಡರಗಿ ಪಟ್ಟಣದಲ್ಲಿ ಸಿದ್ದರಾಮೇಶ್ವರರ 849ನೇ ಜಯಂತ್ಯುತ್ಸವ ಮತ್ತು ಜಿಲ್ಲಾ ಭೋವಿ (ವಡ್ಡರ) ಸಮಾವೇಶ ಉದ್ಘಾಟಿಸಿ ಮಾತನಾಡಿದರು.
undefined
ಮಕ್ಕಳಿಗೆ ಮಗ್ಗಿ ಕೇಳಿ, ನಾಡಗೀತೆ ಹಾಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಸದ್ಯಕ್ಕಿರುವ ನಾಡಗೀತೆ ಅವಧಿ ಸುದೀರ್ಘವಾಗುತ್ತಿದೆ. ನಾಡಗೀತೆಗೆ ಗೌರವ ಸೂಚಕವಾಗಿ ಎಲ್ಲರೂ ಎದ್ದು ನಿಲ್ಲುವುದು ಸಹಜ. ಈ ಗೀತೆ ಸುದೀರ್ಘವಾಗಿರುವುದರಿಂದ ನಿಂತ ವ್ಯಕ್ತಿಗಳು ಕುಸಿದು ಬೀಳುವ ಸಾಧ್ಯತೆಗಳು ಹೆಚ್ಚು.
ಆದ್ದರಿಂದ ಈ ಗೀತೆಗೆ ಧಕ್ಕೆ ಬರದಹಾಗೆ ಕಡಿಮೆ ಅವಧಿಯಲ್ಲಿ ಮುಗಿಯುವ ಹಾಗೆ ಮಾಡುವ ಚಿಂತನೆ ನಡೆದಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಷ್ಟರಲ್ಲಿ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.