SDA ಪರೀಕ್ಷೆ ಮತ್ತೆ ಮುಂದೂಡಿದ ಕೆಪಿಎಸ್‌ಸಿ

Published : Mar 10, 2021, 06:32 PM ISTUpdated : Mar 10, 2021, 06:35 PM IST
SDA ಪರೀಕ್ಷೆ ಮತ್ತೆ ಮುಂದೂಡಿದ ಕೆಪಿಎಸ್‌ಸಿ

ಸಾರಾಂಶ

ಮಾರ್ಚ್ 20 ಹಾಗೂ 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರ) ಪರೀಕ್ಷೆಯನ್ನು ಮೂಂದೂಡಲಾಗಿದೆ.

ಬೆಂಗಳೂರು, (ಮಾ.10): ಇದೇ ಮಾರ್ಚ್ 20 ಹಾಗೂ 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರ) ಪರೀಕ್ಷೆಯನ್ನು ಮೂಂದೂಡಿ ಕೆಪಿಎಸ್​ಸಿ ಆದೇಶ ಹೊರಡಿಸಿದೆ.

ಜ.24ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುನ್ನಾದಿನವೇ ಸೋರಿಕೆ ಆಗಿತ್ತು. ಹಾಗಾಗಿ ಈ ಪರೀಕ್ಷೆಯನ್ನು ಮುಂದೂಡಿದ್ದ ಕೆಪಿಎಸ್​ಸಿ, ಫೆ.28ರಂದು ಪರೀಕ್ಷೆ ನಡೆಸಿತ್ತು. ಈ ಕಾರಣದಿಂದ ಮೊದಲೇ ನಿಗದಿ ಪಡಿಸಿದ್ದ ದಿನಾಂಕ(ಮಾ.20, 21)ದಲ್ಲಿ ಎಸ್​ಡಿಎ ಎಕ್ಸಾಂ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಆಯೋಗಕ್ಕೆ ಕಾಲಾವಕಶಾದ ಕೊರತೆ ಇದೆ. 

ಜಾಬ್ಸ್‌ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಹಿನ್ನೆಲೆಯಲ್ಲಿ ಎಸ್​ಡಿಎ ಎಕ್ಸಾಂ ಅನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ಹೇಳಿದ್ದಾರೆ. 

ದಿನಾಂಕ 14-05-2020 ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. 

ಈ ಹುದ್ದೆಗಳ ನೇಮಕಾತಿಗೆ ದಿನಾಂಕ 06-06-2020 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಮತ್ತು ದಿನಾಂಕ 07-06-2020 ರಂದು ಎರಡು ಅಧಿವೇಶನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಲಾಗಿತ್ತು. 

ಆದರೆ ಕೊರೊನಾ ಕಾರಣ ಸದರಿ ಪರೀಕ್ಷೆ ಮುಂದೂಡಿ, ದಿನಾಂಕ 20-03-2021, 21-03-2021 ರಂದು ನಡೆಸಲು ದಿನಾಂಕ ಮರುನಿಗದಿಪಡಿಸಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಪರೀಕ್ಷೆ ದಿನಾಂಕಗಳನ್ನು ಮುಂದೂಡಿದೆ.

PREV
click me!

Recommended Stories

1999 ರಿಂದ ಶುರುವಾದ ನಿರಂತರ ಪ್ರಯತ್ನ, 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕನಾಗಿ ನೇಮಕ
ಲೋಕಾಯುಕ್ತ ದಾಳಿ: 8 ಸರ್ಕಾರಿ ಅಧಿಕಾರಿಗಳ ಮನೇಲಿ ₹23 ಕೋಟಿ ಅಕ್ರಮ ಆಸ್ತಿ ಪತ್ತೆ; ಯಾರ ಬಳಿ ಎಷ್ಟಿದೆ ಗೊತ್ತಾ?