Shivamogga Library Recruitment 2022; ಶಿವಮೊಗ್ಗ ಗ್ರಂಥಾಲಯದಲ್ಲಿ ಅರ್ಜಿ ಆಹ್ವಾನ

By Kannadaprabha News  |  First Published Jun 28, 2022, 2:46 PM IST

ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮ ಪಾಮಚಾಯ್ತಿಗಳಲ್ಲಿ ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆಗಳು ಖಾಲಿ ಇದ್ದು, ಇದಕ್ಕೆ ನೇಮಕಾತಿ ನಡೆಸುವ ಸಲುವಾಗಿ ಅಧಿಸೂಚನೆಯನ್ನು ನೀಡಲಾಗಿದೆ.


ಶಿವಮೊಗ್ಗ (ಜೂನ್ 28): ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮ ಪಾಮಚಾಯ್ತಿಗಳಲ್ಲಿ ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆಗಳು ಖಾಲಿ ಇದ್ದು, ಇದಕ್ಕೆ ನೇಮಕಾತಿ ನಡೆಸುವ ಸಲುವಾಗಿ ಅಧಿಸೂಚನೆಯನ್ನು ನೀಡಲಾಗಿದೆ. ಅಧಿಸೂಚನೆ ಅನದ್ವಯ ಶಿವಮೊಗ್ಗ ಜಿಲ್ಲೆಯೊಳಗಿರುವ ಹಲವು ಗ್ರಾಮಗಳ ಗ್ರಾಮಪಂಚಾಯ್ತಿಯ ಗ್ರಂಥಾಲಯಗಳಲ್ಲಿ ಹುದ್ದೆಗಳು ಖಾಲಿ ಇದೆ. ಶಿವಮೊಗ್ಗ ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಹೆಚ್ಚಿನ ವಿವರಗಳು ಕೆಳಗಡೆ ನೀಡಲಾಗಿದೆ.

ಹುದ್ದೆಗಳು, ವಯಸ್ಸು: ಗ್ರಾಮ ಪಂಚಾಯ್ತಿಗಳಲ್ಲಿ ಗ್ರಂಥಾಲಯಗಳ ಮೇಲ್ವಿಚಾರಣೆಯನ್ನು ಆಯ್ಕೆಯಾದ ಅಭ್ಯರ್ಥಿಗಳು ಮಾಡಬೇಕಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ಜಿಲ್ಲೆಯ ಯಾವುದೇ ಗ್ರಾಮ ಪಂಚಾಯ್ತಿಯ ಗ್ರಂಥಾಲಯಕ್ಕೆ ನೇಮಕಾತಿ ನಡೆಸಲಾಗುತ್ತದೆ. ಶಿವಮೊಗ್ಗ ಜಿಲ್ಲಾ ನಿವಾಸಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

Tap to resize

Latest Videos

Dakshina Kannada Anganwadi Recruitment 2022: ಒಟ್ಟು 96 ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾಖಲೆ : ದಾಖಲೆಗಳು ಹಾಗೂ ಅರ್ಜಿ ಸಲ್ಲಿಕೆಗೆ ಕೊನೆಯ ದಿನವನ್ನು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಭ್ಯರ್ಥಿಗಳು ಸರಿಯಾಗಿ ಭರ್ತಿಗೊಳಸಿದ ಅರ್ಜಿ ಜೊತೆಗೆ ಆಧಾರ್‌ ಕಾರ್ಡ್‌ ಪ್ರತಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಮೀಸಲಾತಿ ಪ್ರಮಾಣ ಪತ್ರ, ಇತರೆ ದಾಖಲೆಗಳ ನಕಲು ಪ್ರತಿಯನ್ನು ಅರ್ಜಿ ಜೊತೆ ಲಗತ್ತಿಸಬೇಕಿದೆ.

ವೇತನ, ಅರ್ಜಿ ಶುಲ್ಕ: ಅಧಿಸೂಚನೆಯಲ್ಲಿ ತಿಳಿಸಿದಂತೆ ಅಭ್ಯರ್ಥಿಗಳಿಗೆ ನೀಡಲಾಗುವ ವೇತನದ ಮಾಹಿತಿಯನ್ನು ನೇಮಕಾತಿ ವೇಳೆಯೆ ತಿಳಿಸಲಿದ್ದು, ಪ್ರಸ್ತುತ ಅಧಿಸೂಚನೆಯಲ್ಲಿ ತಿಳಿಸಲಾಗಿಲ್ಲ. ಆದರೆ ಆಯ್ಕೆಯಾದ ಅಭ್ಯರ್ಥಿಗೆ ಗೌರವ ಧನದ ರೂಪದಲ್ಲಿ ಸಂಭಾವನೆಯನ್ನು ನೀಡಲಾಗುವುದು ಎಂದು ಸದ್ಯ ಮಾಹಿತಿ ನೀಡಲಾಗಿದೆ. ಅರ್ಜಿ ಶುಲ್ಕ ಇದೆಯೋ ಇಲ್ಲವೋ ಎಂಬುದನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಯನ್ನು ಸಂದರ್ಶನದ ಮೀಲಕ ಆಯ್ಕೆ ಮಾಡಲಾಗುತ್ತದೆ. ನಿಗದಿತ ಅರ್ಜಿ ನಮೂನೆಯನ್ನು ಸದರಿ ಗ್ರಾಮ ಪಂಚಾಯ್ತಿಗಳಿಂದ ಪಡೆದು ಭರ್ತಿ ಮಾಡಿ ಜುಲೈ14ರ ಒಳಗೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಸಿ.ಜೆ ವೆಂಕಟೇಶ್‌ ಅವರಿಗೆ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು 08182-222905ಗೆ ಕರೆ ಮಾಡಿ ವಿಚಾರಿಸಬಹುದಾಗಿದೆ.

ಮೈಸೂರಿನಲ್ಲಿ ರಂಗ ಶಿಕ್ಷಕರ ನೇಮಕ 

ದಾವಣಗೆರೆ ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ
ದಾವಣಗೆರೆ ತಾಲೂಕು ಅಣಜಿ ಹೋಬಳಿ ಗುಡಾಳು ವೃತ್ತದ ಗ್ರಾಮ ಸಹಾಯಕರ ಹುದ್ದೆ ಖಾಲಿ ಇದ್ದು, ಹುದ್ದೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತಿಯುಳ್ಳವರು ಅಗತ್ಯ ದಾಖಲಾತಿಗಳ ವಿವರಗಳನ್ನು ಜುಲೈ 11 ರ ಸಂಜೆ 5.30 ಗಂಟೆ ಯೊಳಗೆ ದಾವಣಗೆರೆ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಗ್ರಾಮ ಸಹಾಯಕ, ತಳವಾರರು, ತೋಟಿಗಳು, ನೀರುಗಂಟಿಗಳು, ವಾಲಿಕ​ರ್‍ಸ್, ಮಹ​ರ್‍ಸ್, ಬಾರಿಕ​ರ್‍ಸ್, ನೀರಾಡಿಗಳು, ಬಲೂತಿದಾ​ರ್‍ಸ್, ತಳಯಾರಿಸ್‌, ವೆಟಿಸ್‌, ಕುಲುವಡಿಸ್‌, ಉರ್‌ಗಾನಿಸ್‌ ಕುಟುಂಬದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೋಲಾರದಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಆಹ್ವಾನ: ಕೋಲಾರ ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ 27-06-2022 ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 26-07-2022 ರಾತ್ರಿ 11-59 ಗಂಟೆಯ ವರೆಗೆ ಮಾತ್ರ ಹಾಗೂ ಬ್ಯಾಂಕ್‌ ಮುಖಾಂತರ ಶುಲ್ಕ ಪಾವತಿಸಲು 28-07-2022 ಕೊನೆಯ ದಿನಾಂಕವಾಗಿದೆ. ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ವರ್ಗೀಕರಣ ಹಾಗೂ ಹೆಚ್ಚಿನ ವಿವರಗಳಿಗೆ ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವೆಬ್‌ಸೈಟ್‌ ವಿಳಾಸದ ಮೂಲಕ ತಿಳಿದುಕೊಳ್ಳಬಹುದು ಎಂದು ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ.

click me!