ಮೈಸೂರಿನಲ್ಲಿ ರಂಗ ಶಿಕ್ಷಕರ ನೇಮಕ ಸೇರಿ ಮಡಿಕೇರಿ, ದಾವಣಗೆರೆ, ರಾಮನಗರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

By Suvarna News  |  First Published Jun 24, 2022, 3:05 PM IST
  • ರಂಗಾಯಣದಿಂದ  ಇಬ್ಬರು ರಂಗ ಶಿಕ್ಷಕರನ್ನು ನೇಮಕಕ್ಕೆ ಅರ್ಜಿ ಆಹ್ವಾನ
  •  ಮಡಿಕೇರಿಯ ಗ್ರಾಮೀಣ ಬ್ಯಾಂಕ್‌ಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
  • ದಾವಣಗೆರೆ ಗ್ರಾಮ ಸಹಾಯಕರ ಹುದ್ದೆಗೆ ನೇಮಕಾತಿ
  • ಮಹಿಳೆಯರಿಂದ ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಮೈಸೂರು (ಜೂನ್ 24): ರಂಗಾಯಣವು ಭಾರತೀಯ ರಂಗ ಶಿಕ್ಷಣ ಕೇಂದ್ರಕ್ಕೆ ಇಬ್ಬರು ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದು, ರಂಗ ಶಿಕ್ಷಣದಲ್ಲಿ ಪದವಿ, ಡಿಪ್ಲೋಮಾ ಪಡೆದವರು ಜು,8 ರೊಳಗೆ ಅರ್ಜಿ ಸಲ್ಲಿಸಬೇಕು.ವಿವರಗಳಿಗೆ ದೂ.2512639 ಸಂಪರ್ಕಿಸಬಹುದು.

ಚಿತ್ರಕಲಾ ತರಬೇತಿ
ಮೈಸೂರು: ವೈಜಯಂತಿ ಚಿತ್ರಕಲಾ ಮಹಾವಿದ್ಯಾಲಯವು ಎಸ್‌ಎಸ್‌ಎಲ್‌ಸಿ ಪಾಸಾದ, ಫೇಲಾದವರಿಗೆ ಚಿತ್ರಕಲಾ ತರಬೇತಿ ನೀಡಲಿದ್ದು, ಆಸಕ್ತರು ಮೊ.99456 13828 ಸಂಪರ್ಕಿಸಬಹುದು.

Tap to resize

Latest Videos

KIOCL RECRUITMENT 2022: ಕುದುರೆಮುಖ ಕಬ್ಬಿಣ ಕಾರ್ಖಾನೆಯಲ್ಲಿ ಟ್ರೈನಿ ಆಫೀಸರ್‌ ಹುದ್ದೆಗೆ ನೇಮಕಾತಿ

 ಮಡಿಕೇರಿಯಲ್ಲಿ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕಚೇರಿ ಸಹಾಯಕರು, ಆಫೀಸರ್‌ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನ
 ರಾಷ್ಟ್ರದ 43 ಗ್ರಾಮೀಣ ಬ್ಯಾಂಕ್‌ಗಳಲ್ಲಿ (ಆರ್‌ಆರ್ಬಿ) ಖಾಲಿ ಇರುವ 8,106 ಕಚೇರಿ ಸಹಾಯಕರು ಮತ್ತು ಆಫಿಸರ್‌ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆ ಅಧಿಸೂಚನೆಯನ್ನು ಐಬಿಪಿಎಸ್‌ ಸಂಸ್ಥೆ ಪ್ರಕಟಿಸಿದ್ದು, ಜೂ. 27ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ಹೆಚ್ಚಿನ ಮಾಹಿತಿಗೆ ibps.in ವೀಕ್ಷಿಸಬಹುದಾಗಿದೆ. ಈ ಬ್ಯಾಂಕ್‌ ಪರೀಕ್ಷೆಗಳಿಗೆ ಮತ್ತು ಮುಂಬರುವ ಎಲ್ಲ ಬ್ಯಾಂಕ್‌ ಪರೀಕ್ಷೆಗಳಿಗೆ ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿರುವ ಅನುಭವಿ ನುರಿತ ವಿಷಯ ತಜ್ಞರಿಂದ ಹಾಸನದ ಸಾಲಗಾಮೆ ರಸ್ತೆ ಬಳಿಯಿರುವ ಕೃಷಿಕ್‌ ಸರ್ವೋದಯ ಫೌಂಡೇಶನ್ ಹಾಸನ ಶಾಖೆಯಲ್ಲಿ ರಿಯಾಯಿತಿ ದರದಲ್ಲಿ ಆಫ್ಲೈನ್‌ ತರಬೇತಿ ಪ್ರಾರಂಭಿಸುತ್ತಿದ್ದು, ಆಸಕ್ತರು ಜೂ. 27ರೊಳಗೆ ಮೊಬೈಲ್‌ ಸಂಖ್ಯೆ 8660217739 ಅಥವಾ 08172-245135 ಕ್ಕೆ ಕರೆ/ವಾಟ್ಸಾಪ್‌ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹಾಸನ ಶಾಖೆಯ ಕೃಷಿಕ್‌ ಸರ್ವೋದಯ ಫೌಂಡೇಶನ್ ಕಾರ್ಯದರ್ಶಿ ತಿಳಿಸಿದ್ದಾರೆ.

Khelo India ಯೋಜನೆಯಡಿ ರಾಜ್ಯದ ಹಲವೆಡೆ ನೇಮಕಾತಿ

ದಾವಣಗೆರೆ ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ
ದಾವಣಗೆರೆ ತಾಲೂಕು ಅಣಜಿ ಹೋಬಳಿ ಗುಡಾಳು ವೃತ್ತದ ಗ್ರಾಮ ಸಹಾಯಕರ ಹುದ್ದೆ ಖಾಲಿ ಇದ್ದು, ಹುದ್ದೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತಿಯುಳ್ಳವರು ಅಗತ್ಯ ದಾಖಲಾತಿಗಳ ವಿವರಗಳನ್ನು ಜುಲೈ 11 ರ ಸಂಜೆ 5.30 ಗಂಟೆ ಯೊಳಗೆ ದಾವಣಗೆರೆ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಗ್ರಾಮ ಸಹಾಯಕ, ತಳವಾರರು, ತೋಟಿಗಳು, ನೀರುಗಂಟಿಗಳು, ವಾಲಿಕ​ರ್‍ಸ್, ಮಹ​ರ್‍ಸ್, ಬಾರಿಕ​ರ್‍ಸ್, ನೀರಾಡಿಗಳು, ಬಲೂತಿದಾ​ರ್‍ಸ್, ತಳಯಾರಿಸ್‌, ವೆಟಿಸ್‌, ಕುಲುವಡಿಸ್‌, ಉರ್‌ಗಾನಿಸ್‌ ಕುಟುಂಬದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ದಾವಣಗೆರೆ; ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ:
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2022-23 ನೇ ಸಾಲಿನ ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರದ ಯಾವುದೇ ಯೋಜನೆಯಡಿ ಸಹಾಯಧನ ಪಡೆಯದಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಪ್ರತಿ ಫಲಾನುಭವಿಗಳಿಗೆ ಸಹಾಯಧನ ಮಂಜೂರಿಗೆ ಅರ್ಜಿಗಳ ಕರೆಯಲಾಗಿದೆ. ದೇವದಾಸಿ ಪುನರ್ವಸತಿ ಯೋಜನೆಯ ಆಯಾ ತಾಲೂಕಿನ ಯೋಜನಾ ಅನುಷ್ಠಾನಾಧಿಕಾರಿಗಳಿಂದ ಅರ್ಜಿಗಳ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 7ರಂದು ಕಚೇರಿ ವೇಳೆ ಒಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಜ್ಞಾ ಪಾಟೀಲ್‌ ದಾವಣಗೆರೆ ಮೊಃ9886440107, ಎಂ.ಜೆ.ಉಮಾದೇವಿ ಹರಿಹರ, ಚನ್ನಗಿರಿ, ಹೊನ್ನಾಳಿ :9164133372, ಬಿ.ಸಿ. ಕುಸುಮ : 7676932625 ಗೆ ಸಂಪರ್ಕಿಸಬಹುದು ಎಂದು ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯರಿಂದ ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ:
ರಾಮನಗರ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ರಾಮನಗರ ವತಿಯಿಂದ 2022-23 ನೇ ಸಾಲಿನ ಉದ್ಯೋಗಿನಿ ಯೋಜನೆಯಡಿ ನಿರುದ್ಯೋಗಿ ಸಾಮಾನ್ಯ ಮಹಿಳೆಯರು, ಎಚ್‌ಐವಿ ಸೋಂಕಿತ ಹಾಗೂ ಬಾಧಿತ ಮಹಿಳೆಯರು, ದಮನಿತ ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಸಮುದಾಯದ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಸಾಲ, ನಿಗಮದಿಂದ ಸಹಾಯಧನ, ಆರ್ಥಿಕ ನೆರವು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಫಲಾನುಭವಿಗಳು 18 ರಿಂದ 55 ವರ್ಷದೊಳಗಿರಬೇಕು. ಕೌಟುಂಬಿಕ ವಾರ್ಷಿಕ ಆದಾಯ ಸಾಮಾನ್ಯ ಮಹಿಳೆಯರಿಗೆ 1.50 ಲಕ್ಷ ರು. ಹಾಗೂ ಪರಿಶಿಷ್ಠ ಜಾತಿ ಮತ್ತು ಪಂಗಡದ ಮಹಿಳೆರಿಗೆ 20 ಲಕ್ಷ ಮೀರಿರಬಾರದು.

ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳು ಇತರೆ ಯಾವುದೇ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ಪಡೆದಿರಬಾರದು ಹಾಗೂ ಸುಸ್ತಿದಾರರಾಗಿಬಾರದು. ಅರ್ಹ ಫಲಾನುಭವಿಗಳು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 12 ರೊಳಗಾಗಿ ಕಚೇರಿಯಲ್ಲಿ ಸಲ್ಲಿಸಬೇಕು. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

click me!