SIMS Shivamogga Recruitment 2022: ವಿವಿಧ ಹುದ್ದೆಗಳ ಭರ್ತಿಗೆ ಕರೆ ನೀಡಿದ ವೈದ್ಯಕೀಯ ವಿಜ್ಞಾನ ಸಂಸ್ಥೆ

By Suvarna News  |  First Published Dec 31, 2021, 1:02 PM IST
  • ಹುದ್ದೆಗಳ ಭರ್ತಿಗೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧಿಸೂಚನೆ
  • ಸೈಂಟಿಸ್ಟ್-ಬಿ , ಲ್ಯಾಬ್ ಟೆಕ್ನೀಶಿಯನ್  ಸೇರಿ ಒಟ್ಟು 4 ಹುದ್ದೆಗಳು ಖಾಲಿ 
  • ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 15 ಕೊನೆ ದಿನ
     

ಬೆಂಗಳೂರು(ಡಿ.31): ವೈದ್ಯಕೀಯ ವಿಜ್ಞಾನ ಸಂಸ್ಥೆ ಶಿವಮೊಗ್ಗ (shimoga institute of medical sciences -SIMS) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.  ಸೈಂಟಿಸ್ಟ್-ಬಿ , ಲ್ಯಾಬ್ ಟೆಕ್ನೀಶಿಯನ್, ಡಾಟಾ ಎಂಟ್ರಿ ಆಪರೇಟರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿ ಒಟ್ಟು 4 ಹುದ್ದೆಗಳು ಖಾಲಿ ಇದ್ದು  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಫ್ ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಆಸಕ್ತ ಅಭ್ಯರ್ಥಿಗಳು ಜನವರಿ 15 ರೊಳಗೆ ಅರ್ಜಿ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ https://sims.karnataka.gov.in/ ಗೆ ಭೇಟಿ ನೀಡಿ.

ಖಾಲಿ ಇರುವ 4 ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಸೈಂಟಿಸ್ಟ್-ಬಿ – 1 ಹುದ್ದೆ
ಲ್ಯಾಬ್ ಟೆಕ್ನೀಶಿಯನ್ – 1 ಹುದ್ದೆ
ಡಾಟಾ ಎಂಟ್ರಿ ಆಪರೇಟರ್ (DEO) – 1 ಹುದ್ದೆ
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 1 ಹುದ್ದೆ

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಸೈಂಟಿಸ್ಟ್-ಬಿ (Scientist-B (Medical), ಲ್ಯಾಬ್ ಟೆಕ್ನೀಶಿಯನ್(Laboratory Technician ), ಡಿಇಒ (Data Entry Operator) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi Tasking Staff) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವ ವಿದ್ಯಾಲಯದಿಂದ ಕಡ್ಡಾಯವಾಗಿ ಎಂಡಿ/ಎಂಎಸ್/ಡಿಎನ್‌ಬಿ/ಎಂಡಿಎಸ್/ಎಂ.ವಿ.ಎಸ್ಸಿ ಮತ್ತು ಎಹೆಚ್, ಬಿ.ಎಸ್ಸಿ, ಪದವಿಯನ್ನು ಪಡೆದಿರಬೇಕು.

Shivamogga District Court Recruitment 2022: PUC ಪಾಸಾದವರಿಗೆ ಶಿವಮೊಗ್ಗ ಜಿಲ್ಲಾ ಕೋರ್ಟ್​​ನಲ್ಲಿ ವಿವಿಧ​ ಹುದ್ದೆ

ವಯೋಮಿತಿ:  ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು  ಗರಿಷ್ಟ 35 ವರ್ಷ ಆಗಿರಬೇಕು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. SC/ST ವರ್ಗದವರಿಗೆ 5 ವರ್ಷ, ಮತ್ತು Cat-I/2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ:  ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು 1000 ರೂ. ಅನ್ನು ಡಿ.ಡಿ ಮೂಲಕ ಪಾವತಿಸಬೇಕು.

ವೇತನ ವಿವರ: 
ಸೈಂಟಿಸ್ಟ್-ಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,000 ರೂ.
ಲ್ಯಾಬ್ ಟೆಕ್ನೀಶಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,000 ರೂ.
ಡಿಇಒ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,000 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000 ರೂ. ವೇತನ ನೀಡಲಾಗುತ್ತದೆ.

NIFT RECRUITMENT 2022: 190 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಫ್ಯಾಷನ್ ಟೆಕ್ನಾಲಜಿ

ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ https://sims.karnataka.gov.in/ಗೆ ಭೇಟಿ ನೀಡಿ, ಅಧಿಸೂಚನೆಯಲ್ಲಿನ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ಭರ್ತಿ ಮಾಡಬೇಕು. ಆ ಬಳಿಕ ಅಲ್ಲಿ ಕೇಳಲಾದ ದಾಖಲೆಗಳನ್ನು ಲಗತ್ತಿಸಿ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಸೂಚನೆ ಓದಲು ಈ ಲಿಂಕ್ ಕ್ಲಿಕ್ ಮಾಡಿ 

ಅರ್ಜಿ ಸಲ್ಲಿಸಬೇಕಾದ ವಿಳಾಸ:
ನಿರ್ದೇಶಕರು ಮತ್ತು ಡೀನ್
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ,
ಶಿವಮೊಗ್ಗ-577201
Director & Dean
Shimoga Institute of Medical Sciences
Sagar Road
Shimoga – 577201 

click me!