KIOCL Recruitment 2022: ಕುದುರೆಮುಖ ಕಬ್ಬಿಣ ಕಾರ್ಖಾನೆಯಲ್ಲಿ ಟ್ರೈನಿ ಆಫೀಸರ್‌ ಹುದ್ದೆಗೆ ನೇಮಕಾತಿ

By Suvarna News  |  First Published Jun 24, 2022, 11:41 AM IST

ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್  ಖಾಲಿ ಇರುವ ವಿವಿಧ  ಹುದ್ದೆಗಳಿಗೆ ನೇಮಕಾತಿ ನಡೆಸಲಿದ್ದು, ಜುಲೈ 22ರ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು (ಜೂನ್ 24): ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (Kudremukh Iron Ore Company Limited -KIOCL)  ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಶೀಘ್ರವೇ ಅರ್ಜಿ ಸಲ್ಲಿಸಬೇಕಿದೆ. ಟ್ರೈನಿ ಆಫೀಸರ್‌ ಹುದ್ದೆಗಳು ಒಟ್ಟು 7 ಖಾಲಿ ಇದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ https://kioclltd.in/ ಗೆ ಭೇಟಿ ನೀಡಲು ಕೋರಲಾಗಿದೆ.

ಟ್ರೈನಿ ಅಧಿಕಾರಿ (ಮೆಟಿರೀಯಲ್‌) ಹುದ್ದೆ 3, ಟ್ರೈನಿ ಅಧಿಕಾರಿ(ಮಾನವ ಸಂಪನ್ಮೂಲ ಇಲಾಖೆ) ಹುದ್ದೆ 2, ಟ್ರೈನಿ ಅಧಿಕಾರಿ( ಖನಿಜ ಲೆಕ್ಕ ಪರಿಶೋಧನೆ) ಹುದ್ದೆ 01, ಹಿಂದಿ ಅನುವಾದಕ ಹುದ್ದೆ 1 ಖಾಲಿ ಇದೆ. ವಿದ್ಯಾರ್ಹತೆ ಕುರಿತು ಕೂಡ ತಿಳಿಸಲಾಗಿದ್ದು, ಮೆಟಿರಿಯಲ್‌ ವಿಭಾಗದ ಅಧಿಕಾರಿ ಹುದ್ದೆಗೆ ಎಂಬಿಎ ಆಗಿರಬೇಕು. ಇನ್ನು ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿ ಹುದ್ದೆಗೆ ಎಂಬಿಎ, ಎಂಎಸ್‌ಡಬ್ಲ್ಯು ಪದವಿ ಪಡೆದಿರಬೇಕಿದ್ದು, ಖನಿಜ ಲೆಕ್ಕ ಪರಿಶೋಧನಾ ಅಧಿಕಾರಿ ಅಭ್ಯರ್ಥಿಗೆ ಎಂಬಿಎ, ಹಿಂದಿ ಅನುವಾದಕರಿಗೆ ಹಿಂದಿ ವಿಷಯದಲ್ಲಿ ಡಿಪ್ಲೊಮಾ ಆಗಿರಬೇಕು.

Latest Videos

undefined

Khelo India ಯೋಜನೆಯಡಿ ರಾಜ್ಯದ ಹಲವೆಡೆ ನೇಮಕಾತಿ

ವೇತನವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮೆಟಿರಿಯಲ್‌ ವಿಭಾಗದ ಅಧಿಕಾರಿ ಹುದ್ದೆಗೆ 20,000 ರು.ಇಂದ 25,000 ರು.ಮಾಸಿಕ ವೇತನ ನೀಡಲಾಗುವುದು. ಅಂತೆಯೆ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿ ಹುದ್ದೆಗೆ 20,000 ರು.ಇಂದ 25,000 ರು ಹಾಗೂ ಎಲ್ಲಾ ಹುದ್ದೆಗಳಿಗೆ ಇದೇ ವೇತನವನ್ನು ನಿಗದಿ ಮಾಡಲಾಗಿದೆ. ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿಮಿಟೆಡ್‌ ಅಧಿಸೂಚನೆ ಪ್ರಕಾರ ಅಭ್ಯರ್ಥಿಗೆ ಗರಿಷ್ಠ 30 ವರ್ಷದೊಳಗಿರಬೇಕು. ಹಿಂದುಳಿದ ವರ್ಗದ ಅಭ್ಯರ್ಥಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗೆ 05 ವರ್ಷ, ವಿಕಲ ಚೇತನ ಅಭ್ಯರ್ಥಿಗಳಿಗೆ 8ರಿಂದ 10 ವರ್ಷದ ರಿಯಾಯಿತಿ ನೀಡಲಾಗಿದೆ. 

ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರ ಅನ್ವಯ ಕಂಪ್ಯೂಟರೀಕೃತ ಪರೀಕ್ಷೆ ಹಾಗೂ ನೇರ ಸಂದರ್ಶನ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕದ ಕುರಿತು ತಿಳಿಸಲಾಗಿದ್ದು, ವರ್ಗಾವಾರು ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಸಂಸ್ಥೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಭರ್ತಿಗೊಳಿಸಿ ಸೂಕ್ತ ದಾಖಲೆಗಳ ಸಹಿತ ಅಂಚೆ ಮೂಲಕ ಕಳುಹಿಸಬೇಕಿದೆ.

ಅರ್ಜಿ ಜೊತೆಗೆ ಆಧಾರ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ-ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು, ಮೀಸಲಾತಿ ಪತ್ರದ ಪ್ರತಿಗಳನ್ನು ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಜುಲೈ 2ರಂದು ಕೊನೆಯ ದಿನವಾಗಿದ್ದು, ಸ್ಪೀಡ್‌ ಪೋಸ್ಟ್‌ ಮೂಲಕ ಅರ್ಜಿಯನ್ನು ಕಳುಹಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ https://kioclltd.in/ ಗೆ ಲಾಗಿನ್‌ ಮಾಡಿಕೊಳ್ಳಬಹುದಾಗಿದೆ.

ಕೂಲಿ ಕಾರ್ಮಿಕರಿಗೆ ಸಿಗ್ತಿಲ್ಲ ಉದ್ಯೋಗ ಖಾತ್ರಿ ಯೋಜನೆಯ ಕೆಲಸ!

ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಕಾರ್ಯನಿರ್ವಸುತ್ತಿರುವ ಅಪರ ಸರ್ಕಾರಿ ವಕೀಲರ ಹುದ್ದೆ ಅವಧಿ ಮುಕ್ತಾಯವಾಗಿದ್ದು, ಹುದ್ದೆಗೆ ಹೊಸ ಅಭ್ಯರ್ಥಿಗಳ ನೇಮಕಾತಿ ಮಾಡಲು ಏಳು (7) ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇಚ್ಛೆಯುಳ್ಳ ಅರ್ಹ ವಕೀಲರು ತಮ್ಮ ಹೆಸರು, ವಿದ್ಯಾರ್ಹತೆ, ಜಾತಿ, ವಯಸ್ಸು, ಅನುಭವ ಮುಂತಾದ ವೈಯಕ್ತಿಕ ಪೂರ್ಣ ವಿವರಗಳೊಂದಿಗೆ ಸಮರ್ಥನೆಗಾಗಿ ಅವಶ್ಯಕ ಪತ್ರಗಳ ದೃಢೀಕೃತ ನಕಲುಗಳನ್ನು ಲಗತ್ತಿಸಿ ಜುಲೈ 22ರ ಒಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಡಳಿತ ಶಾಖೆಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿ ನಂತರ ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!