ಬೆಂಗಳೂರು (ಡಿ 16): ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (MGNREGA) ಖಾಲಿ ಇರುವಂತ ಒಂಬುಡ್ಸ್ ಮನ್ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ( Rural Development and Panchayat Raj ) ಅಧಿಸೂಚನೆ ಹೊರಡಿಸಿದ್ದು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬೆಳಗಾವಿ, ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ, ಶಿವಮೊಗ್ಗ, ಚಿತ್ರದುರ್ಗ, ಬೀದರ್, ಹಾಸನ, ಕೊಡಗು, ಕೊಪ್ಪಳ ಮತ್ತು ವಿಜಯಪುರದಲ್ಲಿ ಖಾಲಿ ಇರುವಂತ ಒಂಬುಡ್ಸ್ ಮನ್ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಒಂಬುಡ್ಸ್ ಮನ್ ಆಗಿ ಕಾರ್ಯ ನಿರ್ವಹಿಸಲು ಆಸಕ್ತಿ ಇರೋ ವ್ಯಕ್ತಿಗಳು www.rdpr.karnataka.gov.in ಜಾಲತಾಣದ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080 - 22342163 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ತಿಳಿಸಿದೆ.
undefined
ಸಂಬಂಧಪಟ್ಟಂತ ದಾಖಲೆಗಳೊಂದಿಗೆ ಅರ್ಹ ಅಭ್ಯರ್ಥಿಗಳು ಜನವರಿ 14, 2022ರೊಳಗೆ ಆಯುಕ್ತರು, ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 5ನೇ ಮಹಡಿ, ಪ್ಲಾಟ್ ನಂ.1234, ಕೆ ಎಸ್ ಐ ಐ ಸಿ ಕಟ್ಟಡ, ಐಟಿ ಪಾರ್ಕ್, ಸೌತ್ ಬ್ಲಾಕ್, ರಾಜಾಜಿನಗರ, ಇಂಡಸ್ಟ್ರೀಯಲ್ ಎಸ್ಟೇಟ್, ಬೆಂಗಳೂರು-560044ಗೆ ಅರ್ಜಿಯನ್ನು ಕಳುಹಿಸುವಂತೆ ತಿಳಿಸಿದೆ.
ONGC RECRUITMENT 2022: ONGCಯಲ್ಲಿನ HR ಮತ್ತು PRO ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
RDPR ನೇಮಕಾತಿ 2022 ವಿದ್ಯಾರ್ಹತೆ ಮತ್ತು ಅನುಭವ : ಒಂಬುಡ್ಸ್‌ಮನ್ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ಅಭ್ಯರ್ಥಿಗಳು ಸಾರ್ವಜನಿಕ ಆಡಳಿತ, ಕಾನೂನು, ಶೈಕ್ಷಣಿಕ ಕ್ಷೇತ್ರ, ಸಮಾಜ ಸೇವೆ/ಮ್ಯಾನೇಜ್ಮೆಂಟ್ ಈ ಕ್ಷೇತ್ರಗಳಲ್ಲಿ ಕಡೆಯ ಪಕ್ಷ 10 ವರ್ಷಗಳ ಸೇವಾನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಟ 66 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ. ಒಂಬುಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,000/- ರಿಂದ 20,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.
ESIC IMO Recruitment 2022: MBBS ಆದವರಿಗೆ ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗ
ನೇಮಕಾತಿಯ ಒಂಬುಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ rdpr.karnataka.gov.in ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಕಚೇರಿಗೆ ಅರ್ಜಿಯನ್ನು ಜನವರಿ 14,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
HAL Recruitment 2021: ಹೆಚ್‌ಎಎಲ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಡಿ.18 ಕೊನೆ ದಿನ
ಹೆಚ್‌ಎಎಲ್ ನಲ್ಲಿ ಕೆಲಸ ಖಾಲಿ ಇದೆ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ (ಹೆಚ್‌ಎಎಲ್) ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 18,2021ರೊಳಗೆ ಅರ್ಜಿಯನ್ನು ಹಾಕಬಹುದು. ಡಿಪ್ಲೋಮಾ/ಬಿ.ಇ/ಬಿ.ಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://59.89.119.210/trg/ ಗೆ ಭೇಟಿ ನೀಡಿ. ಆನ್‌ಲೈನ್ ಅರ್ಜಿಕೆಯ ಮೊದಲು ಅಭ್ಯರ್ಥಿಗಳು https://portal.mhrdnats.gov.in/boat/login/user_login.action ವೆಬ್‌ಸೈಟ್ ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ.