ಕೊರೋನಾ ಬಗ್ಗೆ ಶಾಸಕರೊಬ್ಬರು ಹೇಳಿದ ವಿಷಯ ಕೇಳಿ ಹೌಹಾರಿದ ಕಮಿಟಿಯ ಸದಸ್ಯರು...!

By Suvarna NewsFirst Published Aug 11, 2020, 5:19 PM IST
Highlights

ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ನಡೆದಿದ್ದು, ಶಾಸಕ ಸತೀಶ್ ರೆಡ್ಡಿ ಪ್ರಸ್ತಾಪಿಸಿದ ವಿಷಯವನ್ನು ಕೇಳಿಯೇ  ಸಭೆಯಲ್ಲಿದ್ದ ಕಮಿಟಿ ಸದಸ್ಯರು ಸುಸ್ತಾಗಿ ಹೋಗಿದ್ದಾರೆ.

ಬೆಂಗಳೂರು, (ಆ.11): ಇಂದು (ಮಂಗಳವಾರ) ವಿಧಾನಸೌಧದಲ್ಲಿ ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕ ಸತೀಶ್ ರೆಡ್ಡಿ ಅವರು ಕೊರೋನಾ ಬಗ್ಗೆ ಹೊರ ಹಾಕಿದ ವಿಷಯ ಕೇಳಿ ಕಮಿಟಿಯ ಸದಸ್ಯರು ದಂಗಾಗಿದ್ದಾರೆ.

ಸಭೆ ಬಳಿಕ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬೊಮ್ಮಹನಳ್ಳಿ ಶಾಸಕ ಸತೀಶ್ ರೆಡ್ಡಿ ಪ್ರಸ್ತಾಪಿಸಿದ ಈ ವಿಷಯವನ್ನು ಕೇಳಿಯೇ  ಸಭೆಯಲ್ಲಿದ್ದ ಕಮಿಟಿ ಸದಸ್ಯರು ಸುಸ್ತಾಗಿ ಹೋಗಿದ್ದಾರೆ ಎಂದರು.

ಕಾಶ್ಮೀರದ ಮತ್ತೊಂದು ನಿಷೇಧ ವಾಪಸ್, ವಿಶ್ವ ಕ್ರಿಕೆಟ್‌ಗೆ ಕೊಹ್ಲಿ ಬಾಸ್; ಆ.11ರ ಟಾಪ್ 10 ಸುದ್ದಿ!

ಕೊರೋನಾ ಪೇಶೆಂಟ್ ವೆಂಟಿಲೇಟರ್‌ಗೆ ಹೋದ್ರೆ ಭಾರೀ ಡೇಂಜರ್. ವೆಂಟಿಲೇಟರ್ ಹೋದವರು ಬದುಕುವುದು ಕಷ್ಟ. ಬೆಂಗಳೂರಿನಲ್ಲಿ ವೆಂಟಿಲೇಟರ್‌ಗೆ ಹೋದವರು ವಾಪಸ್ ಬಂದಿದ್ದು ಕಡಿಮೆಯಂತೆ. ಪ್ರತಿ 10 ಮಂದಿ ಸೋಂಕಿತರಲ್ಲಿ 9 ಮಂದಿ ಸಾಯ್ತಿದ್ದಾರಂತೆ.  ಉಳಿಯೋದು ಕೇವಲ ಒಬ್ಬ ಪೇಶೆಂಟ್ ಮಾತ್ರವಂತೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ನಡಹಳ್ಳಿ ಮಾಧ್ಯಮಗಳ ಮುಂದೆ ತಿಳಿಸಿದರು.

click me!