ಕಲ್ಯಾಣ ಕರ್ನಾಟಕದಲ್ಲಿ 5267 ಶಿಕ್ಷಕರ ನೇಮಕಾತಿಗೆ ಆದೇಶ

By Kannadaprabha News  |  First Published Oct 9, 2024, 10:00 AM IST

1ರಿಂದ 5ನೇ ತರಗತಿ ವರೆಗಿನ 4,424 ಶಿಕ್ಷಕರು(ಪಿಎಸ್‌ಟಿ), 6ರಿಂದ 8ನೇ ತರಗತಿಯ 78 ಶಿಕ್ಷಕರು (ಜಿಪಿಟಿ), ದೈಹಿಕ ಶಿಕ್ಷಣ ಶಿಕ್ಷಕ 380 ಹುದ್ದೆಗಳು ಸೇರಿದಂತೆ ಒಟ್ಟು 5267 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

ಬೆಂಗಳೂರು(ಅ.09):  ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಗಳಲ್ಲಿ ಖಾಲಿ ಇರುವ 5267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆದೇಶಿಸಿದೆ. ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ನೀಡಿದ್ದ ಭರವಸೆಯಂತೆ ನೇಮಕಾತಿಗೆ ಕ್ರಮವಹಿಸಲಾಗಿದೆ. 

1ರಿಂದ 5ನೇ ತರಗತಿ ವರೆಗಿನ 4,424 ಶಿಕ್ಷಕರು(ಪಿಎಸ್‌ಟಿ), 6ರಿಂದ 8ನೇ ತರಗತಿಯ 78 ಶಿಕ್ಷಕರು (ಜಿಪಿಟಿ), ದೈಹಿಕ ಶಿಕ್ಷಣ ಶಿಕ್ಷಕ 380 ಹುದ್ದೆಗಳು ಸೇರಿದಂತೆ ಒಟ್ಟು 5267 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

Latest Videos

undefined

ಕೆಲಸ ಹುಡುಕ್ತಾ ಇರೋರಿಗೆ ಗುಡ್‌ ನ್ಯೂಸ್‌, ರಾಜ್ಯದಲ್ಲಿ ಖಾಲಿ ಇರುವ 34,863 ಹುದ್ದೆ ಭರ್ತಿಗೆ ಸಿಎಂ ಸೂಚನೆ!

ಈ ಕುರಿತು ನೇಮಕಾತಿಗೆ ಪೂರ್ವ ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ ಮತ್ತು ನೇಮಕಾತಿ ಆದೇಶ ನೀಡುವ ಮೊದಲು ಈ ಹುದ್ದೆಗಳಿಗೆ ತಗಲಬಹುದಾದ ಆರ್ಥಿಕ ಆಯವ್ಯಯ ಅಂದಾಜು ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲು ಆರ್ಥಿಕ ಇಲಾಖೆಗೆ ಸರ್ಕಾರ ಸೂಚಿಸಿದೆ. 

click me!