ನಾಳೆ ಪಿಎಸ್‌ಐ ನೇಮಕಾತಿ ಪರೀಕ್ಷೆ: ಅಕ್ರಮ ತಡೆಗಟ್ಟಲು ಸಿಸಿಟಿವಿ ಕಣ್ಗಾವಲು

By Girish GoudarFirst Published Oct 2, 2024, 7:08 PM IST
Highlights

ಬೆಳಿಗ್ಗೆ 10:30 ರಿಂದ ಮದ್ಯಾಹ್ನ 2:30 ರವೆಗೆ ಪರೀಕ್ಷೆ ಇರುತ್ತೆ. ಎರಡು ಗಂಟೆ ಮುಂಚನೆ ಸೆಂಟರ್‌ಗಳಿಗೆ ಬರಬೇಕು. ಪ್ರತಿ ಸೆಂಟರಗಳಲ್ಲಿ ಹಿರಿಯ ಅಧಿಕಾರಿಗಳು ಇರುತ್ತಾರೆ. ಮಾಲ್ ಪ್ರ್ಯಾಕ್ಟಿಸ್ ಗೆ ಅವಕಾಶವಿಲ್ಲ: ಹುಬ್ಬಳ್ಳಿ- ಧಾರವಾಡ ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್‌ 

ಧಾರವಾಡ(ಅ.02):  ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ನಾಳೆ(ಗುರುವಾರ) 52 ಸೆಂಟರ್‌ಗಳಲ್ಲಿ ಪಿಎಸ್‌ಐ   ಪರೀಕ್ಷೆ ನಡೆಯುತ್ತಿದೆ. ಎಲ್ಲಾ ಸೆಂಟರ್‌ಗಳಲ್ಲಿ ಸಿಸಿಟಿವಿ ಹಾಕಲಾಗಿದೆ. ಕೆಇಇ ಅವರು ಪರೀಕ್ಷೆಯನ್ನ ಕಂಡಕ್ಟ ಮಾಡಿದ್ದಾರೆ. ಸಿಬ್ಬಂದಿಗಳನ್ನ ಅವರೆ ನಿಯೋಜನೆ ಮಾಡಿಕೊಳ್ಳುತ್ತಾರೆ. ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಡಿವೈಸ್, ವಾಚ್ ಮೊಬೈಲ್ ಏನೂ ತರಬಾರದು ಎಂದು ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್‌ ತಿಳಿಸಿದ್ದಾರೆ.

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್‌ ಅವರು, ಬೆಳಿಗ್ಗೆ 10:30 ರಿಂದ ಮದ್ಯಾಹ್ನ 2:30 ರವೆಗೆ ಪರೀಕ್ಷೆ ಇರುತ್ತೆ. ಎರಡು ಗಂಟೆ ಮುಂಚನೆ ಸೆಂಟರ್‌ಗಳಿಗೆ ಬರಬೇಕು. ಪ್ರತಿ ಸೆಂಟರಗಳಲ್ಲಿ ಹಿರಿಯ ಅಧಿಕಾರಿಗಳು ಇರುತ್ತಾರೆ. ಮಾಲ್ ಪ್ರ್ಯಾಕ್ಟಿಸ್ ಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. 

Latest Videos

545 ಪಿಎಸ್‌ಐ ನೇಮಕಾತಿ ಪಟ್ಟಿ ತಡೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ..!

ಅವಳಿ ನಗರದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಸರಳವಾಗಿ ನಡೆಯುವ ಹಾಗೆ ಕಮಿಷನರೇಟ್ ನಿಂದ ಬಂದೋಬಸ್ತ್‌ ಕೊಡಲಾಗುವುದು ಎಂದು ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್‌ ಮಾಹಿತಿ ನೀಡಿದ್ದಾರೆ. 

click me!