ದೇಶದ ಪ್ರಮುಖ ಸಂಸ್ಥೆಯಾಗಿರುವ ಎನ್‌ಪಿಸಿಐಎಲ್ 173 ಅಪ್ರೆಂಟಿಸ್ ಹುದ್ದಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಐಟಿಐ ಉತ್ತೀರರ್ಣರಾದವರಿಗೆ ಅವಕಾಶ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿದ್ದು, ಆಸಕ್ತ ಮತ್ತು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಐಟಿಐ ಕೋರ್ಸ್ ಮುಗಿಸಿ ಕೆಲಸ ಹುಡುಕಾಡುತ್ತಿದ್ದೀರಾ? ಉದ್ಯೋಗಕ್ಕಾಗಿ ಕಾರ್ಖಾನೆಗಳ ಮುಂದೆ ಅಲೆದಾಡುತ್ತಿದ್ದೀರಾ? ಹಾಗಿದ್ರೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್)ನಲ್ಲಿ ಅಪ್ರೆಂಟಿಸ್ ಹುದ್ದೆಗೊಮ್ಮೆ ಟ್ರೈ ಮಾಡಿ ನೋಡಿ.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್), 173 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ತಮಿಳುನಾಡಿನ ಕೂಡಂಕುಲಂನ ಎನ್‌ಪಿಸಿಐಎಲ್ ಸ್ಥಾವರದಲ್ಲಿ ಒಂದು ವರ್ಷದ ಅವಧಿಗೆ ಕೆಲಸ ಮಾಡಬೇಕಾಗುತ್ತದೆ. ಎನ್‌ಪಿಸಿಐಎಲ್‌ನಲ್ಲಿರುವ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಕೃತ ಅಧಿಸೂಚನೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
undefined
ಆಗಸ್ಟ್ 8ಕ್ಕೆ CAPF ಅಸಿಸ್ಟಂಟ್ ಕಮಾಂಡೆಂಟ್ಸ್ ಎಕ್ಸಾಂ: ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ
ಆಯ್ದ ಅಭ್ಯರ್ಥಿಗಳು ಮಾಸಿಕ ಸ್ಟೈಫಂಡ್ ಪಡೆಯುವ ಅರ್ಹತೆ ಹೊಂದಿರುತ್ತಾರೆ. ಐಟಿಐ (ಕೈಗಾರಿಕಾ ತರಬೇತಿ ಸಂಸ್ಥೆ) ಯೊಂದಿಗೆ ಎರಡು ವರ್ಷಗಳ ತರಬೇತಿ ಕೋರ್ಸ್‌ಗೆ ಒಳಪಟ್ಟ ಅಭ್ಯರ್ಥಿಗಳಿಗೆ 8,855 ರೂ. ಸ್ಟೈಫಂಡ್ ಹಾಗೂ ಐಟಿಐನೊಂದಿಗೆ ಒಂದು ವರ್ಷದ ತರಬೇತಿ ಕೋರ್ಸ್ ಗೆ ಒಳಪಟ್ಟ ವರಿಗೆ ಮಾಸಿಕ 7,700 ರೂ. ಸ್ಟೈಫಂಡ್ ಸಿಗಲಿದೆ.
ಯಾವುದೇ ವಿಭಾಗದಲ್ಲಿ ಈಗಾಗಲೇ ಒಂದು ವರ್ಷ ಅಥವಾ ಹೆಚ್ಚಿನ ಅವಧಿಗೆ ಭಾಗಶಃ ಅಥವಾ ಪೂರ್ಣ ಅಪ್ರೆಂಟಿಸ್ ತರಬೇತಿಗೆ ಒಳಗಾದ ಅಭ್ಯರ್ಥಿಗಳು, ಸದ್ಯ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಅಂದ ಹಾಗೇ ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದು ಫಾರ್ಮ್ ಅನ್ನು ಮಾತ್ರ ಸಲ್ಲಿಸಬೇಕು. ಐಟಿಐ ಕೋರ್ಸ್‌ನಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಎಲ್ಲಾ 173 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, 10 + 2 ಶಿಕ್ಷಣದ ಅಡಿಯಲ್ಲಿ ಅಥವಾ ಅದಕ್ಕೆ ಸಮನಾದ ಶಿಕ್ಷಣ ದಡಿ 10 ನೇ ತರಗತಿಯಲ್ಲಿ ವಿಜ್ಞಾನ ಅಥವಾ ಗಣಿತ ವಿಷಯದಲ್ಲಿ ಪಾಸ್ ಆಗಿರಲೇಬೇಕು.
7035 ಹುದ್ದೆಗಳಿಗೆ ಎಸ್ಎಸ್‌ಸಿ ಸಿಜಿಎಲ್ ನೇಮಕಾತಿ: ಆಗಸ್ಟ್ 13ರಿಂದ 24ರವರೆಗೆ ಪರೀಕ್ಷೆ
ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಪಾಸ್ ಪ್ರಮಾಣಪತ್ರವನ್ನೂ ಹೊಂದಿರಬೇಕು.ಆಸಕ್ತ ಅಭ್ಯರ್ಥಿಗಳು ಆಗಸ್ಟ್ 16 ರೊಳಗೆ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಇನ್ನು ಈ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ 18 ವರ್ಷಕ್ಕಿಂತ ಕಡಿಮೆ ಇರಬಾರದು.
ಎನ್ಪಿಸಿಎಲ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಅಭ್ಯರ್ಥಿಯು ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸದಿದ್ದರೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಫಿಟ್ಟರ್– 50, ಮೆಕಾನಿಸ್ಟ್ 25, ವೆಲ್ಡರ್ (ಗ್ಯಾಸ್ ಅಂಡ್ ಎಲೆಕ್ಟ್ರಾನಿಕ್) – 8, ಎಲೆಕ್ಟ್ರಿಷಿಯನ್ – 40, ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 20, ಪಂಪ್ ಆಪರೇಟರ್ ಕಮದ ಮೆಕ್ಯಾನಿಕ್ 5, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್– 20, ಮೆಕ್ಯಾನಿಕ್ (ಚಿಲ್ಲರ್ ಪ್ಲಾಂಟ್) ಇಂಡಸ್ಟ್ರಿಯಲ್ ಏರಿಯಾ– 5 ಹುದ್ದೆಗಳು ಸೇರಿ ಒಟ್ಟು ೧೭೩ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ದೇಶದ ಪ್ರಮುಖ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಈ ಸಂಸ್ಥೆಯ ಆಗಾಗ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತದೆ. ಅದೇ ರೀತಿ ಈ ಬಾರಿಯೂ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಸಂಶೋಧನಾ ಸಹಾಯಕರು, ವಿಜ್ಞಾನಿಗಳ ನೇಮಕಾತಿ: 1,77,500 ರೂ.ವೇತನ!
ಎನ್‌ಪಿಸಿಐಎಲ್‌ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ. ಈ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಳ ಬಗ್ಗೆ ತಿಳಿದಲುಕೊಳ್ಳಲು ಅಧಿಕೃತ ವೆಬ್‌ತಾಣ http://www.npcil.nic.in ಭೇಟಿ ನೀಡಬಹುದು.