NIMHANS Recruitment 2022: ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ನಿಮ್ಹಾನ್ಸ್

By Suvarna News  |  First Published Jan 5, 2022, 1:07 PM IST

ಬೆಂಗಳೂರಿನ ನಿಮ್ಹಾನ್ಸ್​​ನಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 12, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


ಬೆಂಗಳೂರು(ಜ.5): ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ಬೆಂಗಳೂರು (National Institute of Mental Health and Neuro Sciences) ಇಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. MD/DNB ಸೀನಿಯರ್ ರೆಸಿಡೆಂಟ್ (Senior Resident) ಹುದ್ದೆ ಖಾಲಿ ಇದ್ದು,  ಅಭ್ಯರ್ಥಿಗಳು ಆಫ್​ಲೈನ್  ಮೂಲಕ ಅರ್ಜಿ ಸಲ್ಲಿಸಲು ಜನವರಿ 12, 2022 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು nimhans.ac.in ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ನಿಮ್ಹಾನ್ಸ್​​ನಲ್ಲಿ ಖಾಲಿ ಇರುವ ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಸೈಕಿಯಾಟ್ರಿಯಲ್ಲಿ MD/DNB ಪೂರ್ಣಗೊಳಿಸಿರಬೇಕು.

Tap to resize

Latest Videos

undefined

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಸೀನಿಯರ್ ರೆಸಿಡೆಂಟ್  ಹುದ್ದೆಗೆ  ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗೆ  ತಿಂಗಳಿಗೆ 67,700ರೂ ವೇತನ ನೀಡಲಾಗುತ್ತದೆ. ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ.

VIMS Bellary Recruitment 2022: ವೈದ್ಯಕೀಯ ವಿಜ್ಞಾನ ಸಂಸ್ಥೆಯ 130 ಹುದ್ದೆಗಳಿಗೆ ಬಳ್ಳಾರಿಯಲ್ಲಿ ನೇರ ಸಂದರ್ಶನ

ಹುದ್ದೆಯ ಅವಧಿ:  3 ವರ್ಷ (ಆರಂಭದಲ್ಲಿ ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ವಿಭಾಗದ ಮುಖ್ಯಸ್ಥರ ಶಿಫಾರಸಿನ ಆಧಾರದ ಮೇಲೆ 06 ತಿಂಗಳವರೆಗೆ ವಿಸ್ತರಿಸಬಹುದಾಗಿದೆ). ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕ ಮತ್ತು ವಯೋಮಿತಿ: ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ/OBC ಅಭ್ಯರ್ಥಿಗಳು 1,770 ರೂ ಮತ್ತು SC/ST/PWD ಅಭ್ಯರ್ಥಿಗಳು 1,180 ರೂ ಅರ್ಜಿ ಶುಲ್ಕ ಪಾವತಿಸಬೇಕು. ಅಭ್ಯರ್ಥಿಗಳ ವಯಸ್ಸು ಜನವರಿ 12, 2022ಕ್ಕೆ 37 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣದಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಜನವರಿ 2, 2022ರೊಳಗೆ ಕಳುಹಿಸಲು ಕೋರಲಾಗಿದೆ. 

ಅಗತ್ಯ ದಾಖಲೆಗಳು ಇಂತಿದೆ:
ನಿಮ್ಮ Cv ಜೊತೆಗೆ ಇತ್ತೀಚಿನ ಭಾವಚಿತ್ರವಿರುವ ಪಾಸ್‌ಪೋರ್ಟ್ರ ಅಳತೆಯ  ಫೋಟೋ
ವಯಸ್ಸಿನ ದಾಖಲೆಗೆ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ
MD/MS/DNB ಪದವಿ ಪ್ರಮಾಣಪತ್ರ
MBBS ಪದವಿ ಪ್ರಮಾಣಪತ್ರ
ಇಂಟರ್ನ್‌ಶಿಪ್ ಪೂರ್ಣಗೊಳಿಸಿರುವ ಪ್ರಮಾಣಪತ್ರ
Attempt ಪ್ರಮಾಣಪತ್ರ
ವೈದ್ಯಕೀಯ ನೋಂದಣಿ ಪ್ರಮಾಣಪತ್ರ
ಯಾವುದೇ ಇತರ ಅರ್ಹತೆ ಪತ್ರ/ಪ್ರಶಸ್ತಿ ಪತ್ರಗಳು
ಕೆಲಸದ ಅನುಭವವ ಇದ್ದರೆ ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರ

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಡಾ.ವೈ.ಸಿ.ಜನಾರ್ಧನ ರೆಡ್ಡಿ
ಪ್ರಾಧ್ಯಾಪಕರು & ಮುಖ್ಯಸ್ಥರು
ಸೈಕಿಯಾಟ್ರಿ ವಿಭಾಗ
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ
ಹೊಸೂರು ರಸ್ತೆ
ಬೆಂಗಳೂರು-560029
Dr. Y.C.Janardhana Reddy
Professor & Head
Department of Psychiatry
National Institute of Mental
Health & Neuro Sciences
Hosur Road
Bengaluru–560029
ದೂರವಾಣಿ: 91-802699 5261/5250

KAPL Recruitment 2022: ಮಾಸಿಕ 87,000 ರೂ ವೇತನ , ಆಯುಷ್ ವಿಭಾಗದಲ್ಲಿ ಮ್ಯಾನೇಜರ್ ಹುದ್ದೆ

ವೈದ್ಯಕೀಯ ವಿಜ್ಞಾನ ಸಂಸ್ಥೆಯ 130 ಹುದ್ದೆಗಳಿಗೆ ಬಳ್ಳಾರಿಯಲ್ಲಿ ನೇರ ಸಂದರ್ಶನ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (Vijayanagar Institute of Medical Sciences) ಗಳಲ್ಲಿ ಅಗತ್ಯ ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಒಟ್ಟು 130 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಇಚ್ಚಿಸುವವರು  ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಜನವರಿ 10,2022ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ವೆಬ್‌ಸೈಟ್‌ : www.vimsbellary.org.in ಭೇಟಿ ನೀಡಲು ಕೋರಲಾಗಿದೆ.

ಸಂದರ್ಶನ ನಡೆಯುವ ಸ್ಥಳ: 130 ಹುದ್ದೆಗಳಿಗೆ ಜನವರಿ 10,2022ರಂದು ಬೆಳಿಗ್ಗೆ 10:30ಕ್ಕೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ, ಬಳ್ಳಾರಿ ಇಲ್ಲಿ ನಡೆಯುವ  ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

click me!