ಎನ್‌ಸಿಸಿ ವಿಶೇಷ ಯೋಜನೆಯಡಿ ಭಾರತೀಯ ಸೇನೆಯನ್ನು ಸೇರಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 16ರಿಂದಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 15ಕ್ಕೆ ಮುಕ್ತಾಯಗೊಳ್ಳಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭರ್ಜರಿ ಸಂಬಳವೂ ಉಂಟು
ಡಿಗ್ರಿ ಓದುವ ಜೊತೆಗೆ ಎನ್‌ಸಿಸಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ಭಾರತೀಯ ಸೇನೆಯಲ್ಲಿ ಕೆಲಸ ಪಡೆಯುವ ಸದಾವಕಾಶ ಬಂದಿದೆ. ಭಾರತೀಯ ಸೇನೆಯು ಎನ್‌ಸಿಸಿ ಸ್ಪೆಷಲ್‌ಎಂಟ್ರಿ ಸ್ಕೀಮ್‌ಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಬಯಸುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.inಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜೂನ್ 16 ರಿಂದಲೇ ನೋಂದಣಿ ಪ್ರಕ್ರಿಯೆಯು ಶುರುವಾಗಿದ್ದು, ಜುಲೈ 15ರೊಳಗೆ ಮುಕ್ತಾಯಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
undefined
SSLC ಪಾಸಾದ ಹೆಣ್ಣುಮಕ್ಕಳಿಗೆ ಮಿಲಿಟರಿ ಸೇರಲು ಅವಕಾಶ, ಅರ್ಜಿ ಹಾಕಿ
ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 55 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ೫೦ ಹುದ್ದೆಗಳಿಗೆ ಅವಿವಾಹಿತ ಎನ್‌ಸಿಸಿ ಪುರುಷ ಅಭ್ಯರ್ಥಿಗಳು ಹಾಗೂ ೫ ಹುದ್ದೆಗಳಿಗೆ ಅವಿವಾಹಿತ ಎನ್‌ಸಿಸಿ ಮಹಿಳಾ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುವುದು. ಪುರುಷ ಹುದ್ದೆಗಳ ಪೈಕಿ ಸಾಮಾನ್ಯ ವರ್ಗಕ್ಕೆ 45 ಮತ್ತು ಅಪಘಾತಕ್ಕೀಡಾಗಿರುವ ಸೇನಾ ಸಿಬ್ಬಂದಿಗಾಗಿ 5 ಹುದ್ದೆಗಳು ಮೀಸಲಿವೆ. ಹಾಗೇ ಮಹಿಳಾ ಹುದ್ದೆಗಳ ಪೈಕಿ ೪ ಸಾಮಾನ್ಯವರ್ಗಕ್ಕೆ, ಇನ್ನೊಂದು ಸೇನಾ ಸಿಬ್ಬಂದಿಗೆ ಮೀಸಲಿಡಲಾಗಿದೆ.
ಅಭ್ಯರ್ಥಿಗಳು joinindianarmy.nic.inಗೆ ಭೇಟಿ ನೀಡಿ ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿ ಹೊಂದಿರಬೇಕು. ಇನ್ನು ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುವವರು ಕೂಡ ಅರ್ಜಿ ಸಲ್ಲಿಸಲು ಅರ್ಹರು. ಕ್ರಮವಾಗಿ ಮೂರು / ನಾಲ್ಕು ವರ್ಷಗಳ ಪದವಿ ಕೋರ್ಸ್‌ನ ಮೊದಲ ಎರಡು / ಮೂರು ವರ್ಷಗಳಲ್ಲಿ ಕನಿಷ್ಠ 50ರಷ್ಟು ಒಟ್ಟು ಅಂಕಗಳನ್ನು ಗಳಿಸಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಜೊತೆಗೆ ಎನ್‌ಸಿಸಿ ಅಭ್ಯರ್ಥಿಗಳಿಗಾಗಿಯೇ ಇರುವ ಕೋರ್ಸ್ ಆಗಿರುವುದರಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎನ್‌ಸಿಸಿಯ ಸೀನಿಯರ್ ಡಿವಿಷನ್‌ವಿಭಾಗದಲ್ಲಿ ಕನಿಷ್ಠ ಎರಡರಿಂದ ಮೂರು ವರ್ಷ ಕಾರ್ಯನಿರ್ವಹಿಸಿರಬೇಕು. ಎನ್‌ಸಿಸಿಯ ‘ಸಿ’ ಪ್ರಮಾಣಪತ್ರ ಪರೀಕ್ಷೆಯಲ್ಲಿ ಕನಿಷ್ಠ ‘ಬಿ’ ಗ್ರೇಡ್ ಪಡೆದಿರಬೇಕು. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸಂಬಂಧಪಟ್ಟಂತೆ ಎನ್‌ಸಿಸಿ ‘ಸಿ’ಪ್ರಮಾಣಪತ್ರವನ್ನು ಹೊಂದಿರದ ಅಭ್ಯರ್ಥಿಗಳು ಆಯ್ಕೆಗೆ ಅರ್ಹರಾಗಿರುವುದಿಲ್ಲ.
SBIನಲ್ಲಿ ಅಗ್ನಿಶಾಮಕ ಅಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನ
ಅಭ್ಯರ್ಥಿಯ ವಯೋಮಿತಿ ೧೯ ರಿಂದ ೨೫ ವರ್ಷದೊಳಗೆ ಇರಬೇಕು.ಜುಲೈ ೧, ೨೦೨೧ರೊಳಗೆ ಗರಿಷ್ಟ ೨೫ ವಯೋಮಿತಿ ಹೊಂದಿರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ಮಾಡಲಾಗುತ್ತದೆ. ಬಳಿಕ ಸರ್ವಿಸ್ಸೆಲೆಕ್ಷನ್ಬೋರ್ಡ್(ಎಸ್‌ಎಸ್‌ಬಿ) ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಿದೆ. ಶಾರ್ಟ್‌ಲಿಸ್ಟ್ಆಗುವ ಅಭ್ಯರ್ಥಿಗಳು ಆಯ್ಕೆ ಕೇಂದ್ರದಲ್ಲಿ ಎಸ್‌ಎಸ್‌ಬಿ ಸಂದರ್ಶನಕ್ಕೆ ಒಳಪಡಬೇಕಾಗುತ್ತದೆ. ಲಿಖಿತ ಪರೀಕ್ಷೆಯೇ ಇಲ್ಲದೇ ಅಭ್ಯರ್ಥಿಗಳು ೨.೫ ಲಕ್ಷದವರೆಗೂ ವೇತನ ಪಡೆಯಬಹುದು.
ಎರಡು ಹಂತದ ಆಯ್ಕೆ ವಿಧಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇನ್ನು ಮೊದಲ ಹಂತವನ್ನು ತೆರವುಗೊಳಿಸುವವರು ಎರಡನೇ ಹಂತಕ್ಕೆ ಹೋಗುತ್ತಾರೆ. ಒಂದು ವೇಳೆ ಮೊದಲ ಹಂತದಲ್ಲೇ ಫೇಲ್ ಆದವರನ್ನು ಅವತ್ತೇ ಹಿಂದಕ್ಕೆ ಕಳುಹಿಸಲಾಗುತ್ತದೆ.
ಇನ್ನು ೫ ದಿನಗಳ ಕಾಲ ಎಸ್ಎಸ್ಬಿ ಸಂದರ್ಶನ ನಡೆಯಲಿದೆ. ಅಲಹಾಬಾದ್, ಭೋಪಾಲ್, ಬೆಂಗಳೂರು ಮತ್ತು ಕಪುರ್ರ್ತಲದಲ್ಲಿ ಎಸ್‌ಎಸ್‌ಬಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈನ ಒಟಿಎದಲ್ಲಿ ಪೂರ್ವ ಆಯೋಗದ ತರಬೇತಿ ನೀಡಲಾಗುತ್ತದೆ.
ಬಿಐಎಸ್‌ನಲ್ಲಿ 28 ಹುದ್ದೆಗಳಿಗೆ ನೇಮಕಾತಿ, ತಿಂಗಳಿಗೆ 87 ಸಾವಿರ ರೂ. ಸಂಬಳ!
ಇಷ್ಟು ದಿನ ಕಾಲೇಜಿನಲ್ಲಿ ಮಿಲಿಟರಿ ಡ್ರೆಸ್ ಹಾಕಿಕೊಂಡು ಸೇವಾ ಕಾರ್ಯದಲ್ಲಿ ನಿರತರಾಗಿದ್ದವರಿಗೆ ಸೇನೆ ಸೇರೋ ಭಾಗ್ಯ ಬಂದಿದೆ. ಈ ಸ್ಪೆಷಲ್ ಎಂಟ್ರಿ ಅವಕಾಶವನ್ನ ಸದುಪಯೋಗಪಡಿಸಿಕೊಂಡು ಆರ್ಮಿ ಸೇರಿ ಪಧವೀದರರು ತಮ್ಮ ಕನಸ್ಸನ್ನ ನನಸಾಗಿಸಿಕೊಳ್ಳಬಹುದು. ಹೇಗೋ ಪರೀಕ್ಷೆ ಬರೆಯೋ ಟೆನ್ಷನ್ ಇಲ್ಲ. ನೇರವಾಗಿ ಸಂದರ್ಶನಗಳನ್ನ ಎದುರಿಸಿ ಸೇನಾನಿ ಆಗಬಹುದು ನೋಡಿ. ತಡ ಮಾಡದೇ ಕೂಡಲೇ ಅರ್ಜಿ ಸಲ್ಲಿಸಿ.