* ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
* ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ವಿಭಾಗದಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ
* ಲಾಕ್ ಡೌನ್ ಜಾರಿ ಇದ್ದಿದ್ದರಿಂದ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಬೆಂಗಳೂರು, (ಜೂನ್.19): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
28-06-2021ರವರೆಗೆ ನೀಡಲಾಗಿದ್ದ ಕೊನೆ ದಿನಾಂಕವನ್ನು 12-07-2021ರವರೆಗೆ ವಿಸ್ತರಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಿಡಿಸಿದೆ. ಈ ಕುರಿತಂತೆ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ವಿಭಾಗದಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
undefined
4000 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪೊಲೀಸ್ ಇಲಾಖೆಯಲ್ಲಿನ ಪೊಲೀಸ್ ಕಾನ್ಸ್ ಟೇಬಲ್ ( ನಾಗರಿಕ) (ಪುರುಷ ಮತ್ತು ಮಹಿಳಾ) (ಮಿಕ್ಕುಳಿದ) ಮತ್ತು ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ಖಾಲಿ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ದಿನಾಂಕ 25-05-2021 ರಿಂದ ದಿನಾಂಕ 25-06-2021ರವರೆಗೆ ಹಾಗೂ ಶುಲ್ಕವನ್ನು ಅಧಿಕೃತವಾಗಿ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ 28-06-2021ಕ್ಕೆ ನಿಗದಿಗೊಳಿಸಲಾಗಿರುತ್ತದೆ.
ರಾಜ್ಯದಲ್ಲಿ ದಿನಾಂಕ 14-06-2021ರವರೆಗೆ ಲಾಕ್ ಡೌನ್ ಜಾರಿ ಇದ್ದಿದ್ದರಿಂದ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಆಡಳಿತಾತ್ಮಕ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ತೀರ್ಮಾನಿಸಿದೆ.
ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 25-06-2021 ರಿಂದ 12-07-2021ರವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ದಿನಾಂಕ 28-06-2021 ರಿಂದ 14-07-2021ರವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್(ನಾಗರಿಕ) (ಪುರುಷ ಮತ್ತು ಮಹಿಳಾ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ (ಸ್ಥಳೀಯ)ಹುದ್ದೆಗಳನ್ನು ಒಳಗೊಂಡಂತೆ 3,533 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಕೆ ಅವಧಿಯನ್ನು ದಿನಾಂಕ 28-06-2021ರವರೆಗೆ ನೀಡಿತ್ತು. ಇದೀಗ ಈ ಕೊನೆಯ ದಿನಾಂಕವನ್ನು 12-07-2021ರವರೆಗೆ ವಿಸ್ತರಣೆ ಮಾಡಿ, ಪೊಲೀಸ್ ಇಲಾಖೆ ಆದೇಶಿಸಿದೆ.