ನಾಪತ್ತೆಯಾಗಿದ್ದ ಕೆಪಿಎಸ್‌ಸಿ ಕಡತ ಕೊನೆಗೂ ಕಚೇರಿಯಲ್ಲೇ ಪತ್ತೆ..!

By Kannadaprabha News  |  First Published Apr 11, 2024, 8:11 AM IST

ಕಡತ ನಾಪತ್ತೆಯಾಗಿರುವ ಬಗ್ಗೆ ಕಳೆದ ತಿಂಗಳು ವಿಧಾನಸೌಧ ಠಾಣೆಯಲ್ಲಿ ಎಫ್ ಐಆರ್‌ದಾಖಲಾಗಿತ್ತು. ಈಗ ಪತ್ತೆಯಾಗಿರುವ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಾಪತ್ತೆಯ ಹಿಂದಿರುವ ವ್ಯಕ್ತಿಗಳ ವಿರುದ್ಧ ಪೊಲೀಸ್‌ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ಆಯೋಗದಿಂದಲೂ ಅವರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. ನಿಯಮಾನುಸಾರ ಕ್ರಮಕ್ಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಕೆಪಿಎಸ್‌ಸಿ ಮೂಲಗಳು 


ಬೆಂಗಳೂರು(ಏ.11):  ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಯಿಂದ ನಾಪತ್ತೆಯಾಗಿದ್ದ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯ ಜೂನಿಯರ್‌ ಎಂಜಿನಿಯರ್ 9 ಹುದ್ದೆಗಳ ನೇಮಕಾತಿ ಕಡತ ಅದೇ ಕಚೇರಿಯಲ್ಲೇ ಪತ್ತೆಯಾಗಿದೆ.

ಈ ಕುರಿತು ಕೆಪಿಎಸ್‌ಸಿ ಅಧಿಕಾರಿ ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಡತ ನಾಪತ್ತೆಗೆ ಕಾರಣರಾಗಿರುವವರು ಮತ್ತು ನಿರ್ಲಕ್ಷತನ ತೋರಿದ್ದ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗ ನಿರ್ಣಯ ತೆಗೆದುಕೊಂಡಿದೆ.

Tap to resize

Latest Videos

undefined

ಕೆಪಿಎಸ್‌ಸಿ ಕಚೇರಿಯಿಂದ ಆಯ್ಕೆ ಪಟ್ಟಿಯೇ ನಾಪತ್ತೆ..!

ಕಡತ ನಾಪತ್ತೆಯಾಗಿರುವ ಬಗ್ಗೆ ಕಳೆದ ತಿಂಗಳು ವಿಧಾನಸೌಧ ಠಾಣೆಯಲ್ಲಿ ಎಫ್ ಐಆರ್‌ದಾಖಲಾಗಿತ್ತು. ಈಗ ಪತ್ತೆಯಾಗಿರುವ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಾಪತ್ತೆಯ ಹಿಂದಿರುವ ವ್ಯಕ್ತಿಗಳ ವಿರುದ್ಧ ಪೊಲೀಸ್‌ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ಆಯೋಗದಿಂದಲೂ ಅವರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. ನಿಯಮಾನುಸಾರ ಕ್ರಮಕ್ಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಹಿಂದಿನ ಕಾರ್ಯದರ್ಶಿಯವರ ಅವಧಿಯಲ್ಲಿ ಕಡತ ನಾಪತ್ತೆಯಾಗಿದ್ದ ಕಾರಣ ಕಚೇರಿಯ ಸಿಬ್ಬಂದಿಗೆ ನೋಟಿಸ್‌ ನೀಡಲಾಗಿತ್ತು. ಈಗ ಅದೇ ಕಚೇರಿಯ ಮೂಲಗಳಿಂದಲೇ ಕಡತ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕಡತ ನಾಪತ್ತೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

click me!