ಕೆಪಿಎಸ್‌ಸಿ ಭರ್ಜರಿ ನೇಮಕಾತಿ, ಬಿಬಿಎಂಪಿ, ವಾಣಿಜ್ಯ ಇಲಾಖೆ, ಭೂ ಕಂದಾಯ ಇಲಾಖೆಯಲ್ಲಿ ಕೆಲಸ ಖಾಲಿ

By Suvarna News  |  First Published Apr 10, 2024, 2:51 PM IST

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ಮತ್ತು ‌ಹೈ-ಕ‌ ವೃಂದದ‌ಲ್ಲಿನ “ಗ್ರೂಪ್-ಬಿ” ವೃಂದದ ೩೨೭ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಮೇ 5 ಕೊನೆಯ ದಿನಾಂಕ.


ಕರ್ನಾಟಕ ಲೋಕಸೇವಾ ಆಯೋಗವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲ ಸಂಪನ್ಮೂಲ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಭೂಮಾಪನ ಕಂದಾಯ ಇಲಾಖೆ, ಅಂತರ್ಜಲ ನಿರ್ಧೇಶನಾಲಯ ಇತರೆ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ಮತ್ತು ‌ಹೈ-ಕ‌ ವೃಂದದ‌ಲ್ಲಿನ “ಗ್ರೂಪ್-ಬಿ” ವೃಂದದ 327 ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ https://kpsc.kar.nic.in/ ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ:

Latest Videos

undefined

1. ಉಳಿಕೆ ಮೂಲ ವೃಂದದ ಗ್ರೂಪ್ ಬಿ ಹುದ್ದೆ : 277

2. ಹೈದರಾಬಾದ್-ರ‍್ನಾಟಕ ವೃಂದದ ಗ್ರೂಪ್ ಬಿ ಹುದ್ದೆ: 50

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15-04-2024

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-05-2024

ಸ್ಪರ್ಧಾತ್ಮಕ ದಿನಾಂಕ (ತಾತ್ಮಾಲಿಕ) ಉಳಿಕೆ ಮೂಲ‌ ವೃಂದದ‌ ಹುದ್ದೆಗೆ : 11-08-2024

ಸ್ಪರ್ಧಾತ್ಮಕ ದಿನಾಂಕ (ತಾತ್ಕಾಲಿಕ) ಹೈ-ಕ ಮೂಲ‌ ವೃಂದದ‌ ಹುದ್ದೆಗೆ : 25-08-2024

ವಯಸ್ಸಿನ ಮಿತಿ

ಕನಿಷ್ಠ ವಯಸ್ಸಿನ ಮಿತಿ: 18 ವರ್ಷ

ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷ

ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.300

ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: ರೂ.150

ಮಾಜಿ ಸೈನಿಕರಿಗೆ: ರೂ.50

ಎಸ್ ಸಿ/ ಎಸ್ ಟಿ/ ಪ್ರವರ್ಗ -1, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

ಶೈಕ್ಷಣಿಕ ವಿದ್ಯಾರ್ಹತೆ

ಅಭ್ಯರ್ಥಿಗಳು ತಾವು ಆಯ್ಕೆ ಬಯಸುವ ಹುದ್ದೆಗೆ ತಕ್ಕಂತೆ ಸಂಬಂಧಿಸಿದ ವಿಭಾಗದಲ್ಲಿ ಎಂಜಿನಿಯರಿಂಗ್/ಬಿ-ಟೆಕ್/ಬಿ ಇ ಪದವಿ/ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ಆಯ್ಕೆ ವಿಧಾನ: ಈ ಮೇಲ್ಕಂಡ ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳ‌ನ್ವಯ ಸ್ಪರ್ಧತ್ಮ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿ

ಪರೀಕ್ಷೆಯು ಸಾಮಾನ್ಯ ಪತ್ರಿಕೆ ಮತ್ತು ಗರಿಷ್ಠ ಪತ್ರಿಕೆ ಎಂಬ 300 ಅಂಕಗಳ ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ವಸ್ತುನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿ ಇದ್ದು, ಮೂರುವರೆ ಗಂಟೆಯ ಅವಧಿಯಲ್ಲಿ ನಡೆಸಲಾಗುತ್ತದೆ. ತಪ್ಪು ಉತ್ತರಕ್ಕೆ ನಾಲ್ಲನೇ ಒಂದು ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಸೂಚನೆ: ಎಸ್ ಎಸ್ ಎಲ್‌ಸಿ ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡದವರು ಆಯೋಗ ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳೊಂದಿಗೆ ಉತ್ತೀರ್ಣರಾಗಬೇಕು.

ವೇತನ ಶ್ರೇಣಿ: ರೂ. 43100 - 83900

ಪಠ್ಯಕ್ರಮ, ಪರೀಕ್ಷಾ ಕೇಂದ್ರಗಳ‌ ಮಾಹಿತಿ‌ ಹಾಗೂ ಇನ್ನಿತರ ಪ್ರಮುಖ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ https://kpsc.kar.nic.in/ ನಲ್ಲಿ ವೀಕ್ಷಿಸಿ.

 

click me!