ಕೆಎಸ್‌ಆರ್‌ಟಿಸಿ ಡ್ರೈವರ್-ಕಂ-ಕಂಡಕ್ಟರ್ 2000 ಹುದ್ದೆಗಳ ನೇಮಕಾತಿಗೆ ಮರುಚಾಲನೆ: ಮಾ.6ರಿಂದ ಫಿಸಿಕಲ್ ಟೆಸ್ಟ್

By Sathish Kumar KH  |  First Published Feb 27, 2024, 7:20 PM IST

ಕಳೆದ ನಾಲ್ಕು ವರ್ಷಗಳ ಹಿಂದೆ 2020ರಲ್ಲಿ ಸ್ಥಗಿತಗೊಂಡಿದ್ದ ಕೆಎಸ್‌ಆರ್‌ಟಿಸಿ ಚಾಲಕ-ಕಂ-ನಿರ್ವಾಹಕ 2000 ಹುದ್ದೆಗಳ ನೇಮಕಾತಿಗೆ ಮರುಚಾಲನೆ ನೀಡಲಾಗಿದೆ. ಮಾ.6ರಿಂದ ದಾಖಲಾತಿ ಪರಿಶೀಲನೆ ಮತ್ತು ಫಿಸಿಕಲ್ ಟೆಸ್ಟ್ ಆರಂಭವಾಗಲಿದೆ.


ಬೆಂಗಳೂರು (ಫೆ.27): ಕಳೆದ 2020ರಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿನ ಹುದ್ದೆಗಳ ಸಂಖ್ಯೆಯನ್ನು ಸರ್ಕಾರದ ಆದೇಶದಂತೆ 2000 ಕ್ಕೆ ಸೀಮಿತಗೊಳಿಸಿ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಇನ್ನು ಮಾ.6ರಿಂದ ಅಭ್ಯರ್ಥಿಗಳ ಮೂಲ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲನೆ ಮಾತ್ರ ನಡೆಸಲಾಗುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಜಾಹೀರಾತು ಸಂಖಗ್ಯೆ 1/2020 ದಿನಾಂಕ 14-02-2020 ರನ್ವಯ ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿನ ಹುದ್ದೆಗಳ ಸಂಖ್ಯೆಯನ್ನು ಸರ್ಕಾರದ ಆದೇಶದಂತೆ 2,000ಕ್ಕೆ ಸೀಮಿತಗೊಳಿಸಿ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಅದರಂತೆ, ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿ ನಿಗಮದ ಅಧಿಕೃತ ವೆಬ್ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

Tap to resize

Latest Videos

undefined

ಸಾರಿಗೆ ಇಲಾಖೆ 13 ಸಾವಿರ ಉದ್ಯೋಗ ನೇಮಕಾತಿಗೆ ಶೀಘ್ರ ಚಾಲನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಮುಂದುವರೆದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ದಿನಾಂಕ: 06-03-2024 ರಿಂದ ದಾಖಲಾತಿ/ದೇಹದಾರ್ಢ್ಯತೆ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಅಭ್ಯರ್ಥಿಗಳು ದಿನಾಂಕ: 03-03-2024 ರಿಂದ ನಿಗಮದ ಅಧಿಕೃತ ವೆಬ್‌ಸೈಟ್ ksrtcjobs.karnataka.gov.in ರಲ್ಲಿ ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಹಾಜರಾಗಲು ಈ ಮೂಲಕ ಸೂಚಿಸಲಾಗಿದೆ.

ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟ; ಕಾಂಗ್ರೆಸ್-3, ಬಿಜೆಪಿ-1 ಗೆಲುವು, ಮೈತ್ರಿ ಅಭ್ಯರ್ಥಿ ಸೋಲು: ಇಲ್ಲಿದೆ ವಿವರ ..

ಅಭ್ಯರ್ಥಿಗಳಿಗೆ ವಿಶೇಷ ಸೂಚನೆ: 
ಪ್ರಸ್ತುತ ಅಭ್ಯರ್ಥಿಗಳ ಮೂಲ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲನೆ ಮಾತ್ರ ನಡೆಸಲಾಗುತ್ತಿದೆ. ಅರ್ಹರಾದ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆ ನಡೆಸುವ ಕುರಿತು ಪ್ರತ್ಯೇಕ ದಿನಾಂಕ/ಸ್ಥಳವನ್ನು ನಿಗಧಿಪಡಿಸಲಾಗುವುದು. ಸದರಿ ಹುದ್ದೆಯ ಆಯ್ಕೆಯು ಗಣಕೀಕೃತ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್‌  ಹಾಗೂ ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪಾರದರ್ಶಕವಾಗಿ ನಡೆಯುವುದರಿಂದ ಮಾನವ ಹಸ್ತಕ್ಷೇಪ ಇರುವುದಿಲ್ಲ. ಆದುದರಿಂದ ಅಭ್ಯರ್ಥಿಗಳು ಯಾವುದೇ ಶಿಫಾರಸ್ಸು, ಮಧ್ಯವರ್ತಿಗಳ ಅಮಿಷಗಳಿಗೆ ಒಳಗಾಗಬಾರದೆಂದು ಸ್ಪಷ್ಟಪಡಿಸಿದೆ.

click me!