KPTCL Recruitment 2022: ವಿದ್ಯುತ್ ಪ್ರಸರಣ ನಿಗಮದಲ್ಲಿ 1492 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

By Suvarna NewsFirst Published Jan 25, 2022, 3:37 PM IST
Highlights

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ  ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಬೆಂಗಳೂರು(ಜ.24): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (Karnataka Power Transmission Corporation Limited -KPTCL) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಒಟ್ಟು 1492 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ನಿಗದಿತ ನಮೂನೆಯಲ್ಲಿ ಅನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ತಿಳಿಸಲಾಗಿಲ್ಲ. ಅರ್ಜಿಯ ನಮೂನೆ ಹಾಗೂ ಇತರೆ ಹೆಚ್ಚಿನ ವಿವರಗಳನ್ನು ಫೆಬ್ರವರಿ 7 ರಂದು ಬಿಡುಗಡೆ ಮಾಡುವ ನೋಟಿಫಿಕೇಶನ್ ನಲ್ಲಿ ತಿಳಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ  ವೆಬ್‌ಸೈಟ್  https://kptcl.karnataka.gov.in ಗೆ ಭೇಟಿ ನೀಡಬಹುದು.

ಒಟ್ಟು 1492 ಹುದ್ದೆಗಳ ವಿವರ:
ಸಹಾಯಕ ಇಂಜಿನಿಯರ್ ( ವಿದ್ಯುತ್ )-505
ಸಹಾಯಕ ಇಂಜಿನಿಯರ್ ( ಸಿವಿಲ್)-28
ಕಿರಿಯ ಇಂಜಿನಿಯರ್ (ವಿದ್ಯುತ್)-570
ಕಿರಿಯ ಇಂಜಿನಿಯರ್ ( ಸಿವಿಲ್)-29
ಕಿರಿಯ ಸಹಾಯಕ-360

ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆ ವಿಶ್ವವಿದ್ಯಾನಿಲಯ/ಬೋರ್ಡ್ ಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ವಿದ್ಯಾಭ್ಯಾಸ ಪಡೆದಿರಬೇಕು. ಕೆಲ ಹುದ್ದೆಗಳಿಗೆ ಬಿಇ ಪದವಿ ಪಡೆದಿರಬೇಕು.

COAST GUARD RECRUITMENT 2022: 10TH ಪಾಸಾದವರಿಗೆ ಕರಾವಳಿ ಭದ್ರತಾಪಡೆಯಲ್ಲಿ ಭರ್ಜರಿ ಉದ್ಯೋಗವಕಾಶ

ವೇತನ ವಿವರ:
ಸಹಾಯಕ ಇಂಜಿನಿಯರ್ ( ವಿದ್ಯುತ್ ) -  41130 ರಿಂದ 72920 ರೂ.
ಸಹಾಯಕ ಇಂಜಿನಿಯರ್ ( ಸಿವಿಲ್) -  41130 ರಿಂದ 72920 ರೂ.
ಕಿರಿಯ ಇಂಜಿನಿಯರ್ (ವಿದ್ಯುತ್) -  26270 ರಿಂದ 65020 ರೂ.
ಕಿರಿಯ ಇಂಜಿನಿಯರ್ ( ಸಿವಿಲ್) -  26270 ರಿಂದ 65020 ರೂ.
ಕಿರಿಯ ಸಹಾಯಕ -  20220 ರಿಂದ 51640 ರೂ.

ಅಭ್ಯರ್ಥಿಗಳು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಧಿಕೃತ ವೆಬ್‌ಸೈಟ್‌ ಮೂಲಕ ನಿಗದಿತ ನಮೂನೆಯಲ್ಲಿ ಆನ್‌ಲೈನ್‌ ಮೂಲಕವೇ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ, ಅರ್ಜಿಯ ನಮೂನೆ ಹಾಗೂ ಇತರೆ ಹೆಚ್ಚಿನ ವಿವರಗಳನ್ನು  ಫೆಬ್ರವರಿ 7 ರಂದು KPTCL ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುವ ಡೀಟೇಲ್ಡ್‌ ನೋಟಿಫಿಕೇಶನ್‌ನಲ್ಲಿ ತಿಳಿಸಲಿದೆ.

Mangalore University Recruitment 2022: ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (Bengaluru Metro Rail Corporation Limited- BMRCL)​ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಹಾಯಕ ಮ್ಯಾನೇಜರ್‌, ಸೀನಿಯರ್ ಟ್ರಾನ್ಸ್​​​ಪೋರ್ಟ್​​ ಪ್ಲ್ಯಾನರ್  ಸೇರಿ ಒಟ್ಟು 11 ಹುದ್ದೆಗಳು ಖಾಲಿ ಇವೆ. ಜನವರಿ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​​​ಲೈನ್​(Online) ಮತ್ತು ಆಫ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ  ಅಧಿಕೃತ ವೆಬ್​ಸೈಟ್​ https://english.bmrc.co.in/ ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್​
ಕೆ.ಹೆಚ್​. ರಸ್ತೆ , ಶಾಂತಿನಗರ
ಬೆಂಗಳೂರು-560027

click me!